ನಿರುದ್ಯೋಗ ವೇತನ ವಿತರಣೆ
0
ಮಾರ್ಚ್ 19, 2019
ಬದಿಯಡ್ಕ: ಕುಂಬ್ಡಾಜೆ ಗ್ರಾಮ ಪಂಚಾಯತಿಯ ಫಲಾನುಭವಿಗಳಿಗಿರುವ ನಿರುದ್ಯೋಗವೇತನ ವಿತರಣೆ ಮಾ.20ರಿಂದ 22ರ ವರೆಗೆ ಬೆಳಿಗ್ಗೆ 11 ರಿಂದ ಮಧ್ಯಾಹ್ನ 3 ಗಂಟೆ ವರೆಗೆ ನಡೆಯಲಿದೆ. ಅರ್ಹರಾಗಿರುವ ಫಲಾನುಭವಿಗಳು ಉದ್ಯೋಗ ವಿನಿಮಯ ಕೇಂದ್ರದ ಚೀಟಿ, ನೂತನ ಪಡಿತರ ಚೀಟಿ, ನಿರುದ್ಯೋಗ ವೇತನ ವಿತರಣೆ ಚೀಟಿ ಇತ್ಯಾದಿಗಳೊಂದಿಗೆ ಹಾಜರಾಗಿ ವೇತನ ಪಡೆಯಬಹುದು ಎಂದು ಸಂಬಂಧಪಟ್ಟವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

