ಪೆರ್ಲ:ಎಣ್ಮಕಜೆ ಗ್ರಾ.ಪಂ. ಬಜಕೂಡ್ಲು ಖಂಡಿಗೆ ವರುಂಬುಡಿ ರಸ್ತೆ ಕಳೆದ ವರ್ಷ 14 ಲಕ್ಷ ರೂ ಅನುದಾನದಲ್ಲಿ ಡಾಮರೀಕರಣ ಗೊಂಡಿದ್ದು ಪಂಚಾಯಿತಿ ಕುಡಿನೀರು ಯೋಜನೆಯಲ್ಲಿ ಪೈಪ್ ಅಳವಡಿಸಲು ಆಗಮಿಸಿದ ಜೆಸಿಬಿ ರಸ್ತೆ ಮಧ್ಯೆ ನಿಲ್ಲಿಸಿ ಕಾಮಗಾರಿ ನಡೆಸಿದುದರಿಂದ ರಸ್ತೆ ಹಾನಿಗೊಂಡಿರುವುದಾಗಿ ಸ್ಥಳೀಯರು ದೂರಿದ್ದಾರೆ.
ವಾಹನ ಸಂಚಾರ ಸುಗಮಗೊಂಡಿದ್ದ ರಸ್ತೆಯಲ್ಲಿ ಜೆಸಿಬಿ ನಿಂತ ಹಲವೆಡೆಗಳಲ್ಲಿ ರಸ್ತೆ ಹಾನಿಗೊಂಡಿದ್ದು, ಸಂಬಂಧಿಸಿದವರು ರಸ್ತೆಯನ್ನು ಶೀಘ್ರ ದುರಸ್ತಿಗೊಳಿಸುವ ಕ್ರಮ ಕೈಗೊಳ್ಳಬೇಕೆಂದು ಸ್ಥಳೀಯರು ಜಿಲ್ಲಾಧಿಕಾರಿ, ಮಂಜೇಶ್ವರ ಬ್ಲಾಕ್ ಹಾಗೂ ಎಣ್ಮಕಜೆ ಪಂಚಾಯಿತಿಗೆ ದೂರು ನೀಡಿದ್ದಾರೆ.
