ಬಿಜೆಪಿಯಿಂದ ಪ್ರತಾಪನಗರದಲ್ಲಿ ಮನೆ,ಮನೆ ಸಂಪರ್ಕ
0
ಮಾರ್ಚ್ 19, 2019
ಉಪ್ಪಳ: ಕೇಂದ್ರ ಸರಕಾರದ ಜನಪರ ಆಡಳಿತದ ಸಾಧನೆಯನ್ನು ಕರಪತ್ರದ ಮೂಲಕ ಜನರಿಗೆ ತಲುಪಿಸುವ ನಿಟ್ಟಿನಲ್ಲಿ ಪ್ರತಾಪನಗರ ಬಿಜೆಪಿ ಸಮಿತಿ ವತಿಯಿಂದ ಭಾನುವಾರ ಸಂಜೆ ಮನೆ ಮನೆ ಸಂಪರ್ಕ ಕಾರ್ಯಕ್ರಮವನ್ನು ಆರಂಭಿಸಲಾಯಿತು.
ಬಿಜೆಪಿ ನೇತಾರರಾದ ವಸಂತ ಕುಮಾರ್ ಮಯ್ಯ, ಪ್ರತಾಪನಗರ ಬಿಜೆಪಿ ಬೂತ್ ಸಮಿತಿ ಅಧ್ಯಕ್ಷ ಪ್ರವೀಣ್, ಕಾರ್ಯದರ್ಶಿ ಓಂಪ್ರಕಾಶ್, ಯುವಮೋರ್ಚಾ ಜಿಲ್ಲಾ ಉಪಾಧ್ಯಕ್ಷ ಧನ್‍ರಾಜ್ ಬಿಟಿಗದ್ದೆ, ಕಾರ್ಯಕರ್ತರಾದ ಮೋಹನ್ ಪೂಜಾರಿ, ಸೋಮನಾಥ, ಅವಿನಾಶ್.ಯಂ ಮನೆಮನೆ ಸಂಪರ್ಕದಲ್ಲಿ ಭಾಗವಹಿಸಿದ್ದರು.

