ವಸಂತ ವೇದಪಾಠ ಶಿಬಿರ ಯಶಸ್ಸಿಗೆ ಕರೆ
0
ಮಾರ್ಚ್ 16, 2019
ಮಧೂರು: ಕೂಟ ಮಹಾಜಗತ್ತು ಸಾಲಿಗ್ರಾಮ ಇದರ ಕಾಸರಗೋಡು ಅಂಗಸಂಸ್ಥೆಯ ನೇತೃತ್ವದಲ್ಲಿ ಬೇಳದ ಕುಮಾರಮಂಗಲದ ಶರವಣ ಟ್ರಸ್ಟ್‍ನ ಸಹಯೋಗದೊಂದಿಗೆ ಎಪ್ರಿಲ್ - ಮೇ ತಿಂಗಳುಗಳಲ್ಲಿ ಕುಮಾರಮಂಗಲದ ಶ್ರೀ ಸುಬ್ರಹ್ಮಣ್ಯ ಸ್ವಾಮಿ ದೇಗುಲದಲ್ಲಿ ವಸಂತ ವೇದಪಾಠ ಶಿಬಿರವು ಜರಗಲಿದೆ. ಇದರ ಯಶಸ್ಸಿಗೆ ಸಹಕರಿಸುವಂತೆ ಕಾಸರಗೋಡು ಅಂಗಸಂಸ್ಥೆಯ ಅಧ್ಯಕ್ಷ ಎಸ್.ಎನ್.ಮಯ್ಯ ಬದಿಯಡ್ಕ ಅವರು ಕರೆಯಿತ್ತರು.
ಈ ನಿಟ್ಟಿನಲ್ಲಿ ಕೊಲ್ಯದ ರಾಮ ನಾವಡ ಅವರ ನಿವಾಸದಲ್ಲಿ ಜರಗಿದ ಅಂಗಸಂಸ್ಥೆಯ ಕಾರ್ಯಕಾರಿ ಸಮಿತಿ ಇತ್ತೀಚೆಗೆ ನಡೆದ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಅಂಗಸಂಸ್ಥೆಯ ಪ್ರಧಾನ ಕಾರ್ಯದರ್ಶಿ ನರಸಿಂಹ ಮಯ್ಯ ಎಂ. ಮಧೂರು ಕಾರ್ಯಕ್ರಮದ ಬಗ್ಗೆ ವಿವರಿಸಿದರು. ಎಪ್ರಿಲ್ 1 ರಂದು ಪ್ರಾರಂಭವಾಗುವ ಈ ಶಿಬಿರವು ಋಗ್ವೇದ ಹಾಗು ಯಜುರ್ವೇದ ವಿದ್ಯಾರ್ಥಿಗಳಿಗೆ ಪ್ರತ್ಯೇಕವಾಗಿ ಜರಗಲಿದೆ. ಆಸಕ್ತ ವಟುಗಳು ಚಂದ್ರಶೇಖರ ರಾವ್-9447489811 ಅವರನ್ನು ಸಂಪರ್ಕಿಸಬಹುದು.
ಈ ಸಂದರ್ಭದಲ್ಲಿ ಕೃಷ್ಣ ಕಾರಂತ ಬಿ.ಬನ್ನೂರು. ಎಸ್.ಎನ್.ಮಯ್ಯ ಮಧೂರು, ಕೃಷ್ಣ ಪ್ರಸಾದ ಅಡಿಗ ಮುಟ್ಟತ್ತೋಡಿ, ಚಂದ್ರಶೇಖರ ರಾವ್ ಏತಡ್ಕ ಮುಂತಾದವರು ಮಾತನಾಡಿದರು. ರಾಜೇಶ್ ಬಿ.ಬನ್ನೂರು ಸ್ವಾಗತಿಸಿ, ಹರಿಕೃಷ್ಣ ನಾವಡ ಕೊಲ್ಯ ವಂದಿಸಿದರು.

