ರಾಜ್ಯಮಟ್ಟದ ಗಣಿತ ತರಬೇತಿಗೆ ಆಯ್ಕೆ
0
ಮಾರ್ಚ್ 16, 2019
ಸಮರಸ ಚಿತ್ರ ಸುದ್ದಿ: ಉಪ್ಪಳ: ಕೇರಳ ರಾಜ್ಯ ಮಟ್ಟದಲ್ಲಿ ನಡೆಸುವ ನ್ಯೂ ಮಾಟ್ಸ್ ಗಣಿತ ಅಭಿರುಚಿ ಪರೀಕ್ಷೆಯಲ್ಲಿ ತೇರ್ಗಡೆಯಾಗಿ ರಾಜ್ಯ ಮಟ್ಟದ ಗಣಿತ ತರಬೇತಿಗೆ ಆಯ್ಕೆಯಾದ ವಿನ್ಯಾಸ್ ಕೆ.ಎಚ್. ಈತ ಕಯ್ಯಾರು ಡೋನ್ ಬೋಸ್ಕೋ ಶಾಲೆಯ ಆರನೇ ತರಗತಿಯ ವಿದ್ಯಾರ್ಥಿಯಾಗಿದ್ದು, ಈ ವರ್ಷದ ರಾಜ್ಯಮಟ್ಟದ `ಸ್ವದೇಶಂ' ಕ್ವಿಜ್ ನಲ್ಲಿ ಭಾಗವಹಿಸಿದ್ದಾನೆ. ಮಾತ್ರವಲ್ಲದೆ ಜಿಲ್ಲಾ ಮಟ್ಟದ ಸಂಸ್ಕøತ ಪ್ರಶ್ನೋತ್ತರಿಯಲ್ಲಿ ಪ್ರಥಮ ಸ್ಥಾನ ಹಾಗು ರಾಮಾಯಣ ಕ್ವಿಜ್‍ನಲ್ಲಿ ದ್ವಿತೀಯ ಸ್ಥಾನ ಪಡೆದಿದ್ದಾನೆ. 2018-19 ನೇ ಸಾಲಿನ ಸಂಸ್ಕøತ ಸ್ಕಾಲರ್‍ಶಿಪ್ ಪರೀಕ್ಷೆಯಲ್ಲಿ ಪ್ರಥಮ ರ್ಯಾಂಕ್ ಪಡೆದು ಶಂಕರಾಚಾರ್ಯ ಸ್ಕಾಲರ್‍ಶಿಪ್‍ಗೆ ಆಯ್ಕೆಯಾಗಿದ್ದಾನೆ. ಈತ ಅಧ್ಯಾಪಕ ದಂಪತಿಗಳಾದ ಶ್ರೀನಿವಾಸ ಹಾಗು ಕಮಲಾಕ್ಷಿ ದಂಪತಿ ಪುತ್ರ.

