ನವೀಕೃತ ಶಾಲಾ ಕಚೇರಿ ಉದ್ಘಾಟನೆ
0
ಮಾರ್ಚ್ 16, 2019
ಮಂಜೇಶ್ವರ: ನವೀಕೃತಗೊಂಡ ಬಂಗ್ರಮಂಜೇಶ್ವರ ಸರಕಾರಿ ಫ್ರೌಢಶಾಲಾ ವಿಭಾಗದ ಕಾರ್ಯಾಲಯದ ಉದ್ಘಾಟನೆ ಶನಿವಾರ ಶಾಲಾ ಪ್ರಾಂಶುಪಾಲ ಅನೂಪ್ ಕುಮಾರ್ ನಿರ್ವಹಿಸಿದರು.
ಶಾಲಾ ಮುಖ್ಯೋಪಾಧ್ಯಾಯಿನಿ ಲೋಕಾಕ್ಷಿ ಅವರು ಅಧ್ಯಾಪನ ವೃತ್ತಿಯಿಂದ ನಿವೃತ್ತಿಗೊಳ್ಳುತ್ತಿರುವ ಸಂದರ್ಭದಲ್ಲಿ ಆರ್ಥಿಕ ನೆರವು ನೀಡಿ ಶಾಲಾ ಕಾರ್ಯಾಲಯವನ್ನು ಸುಸಜ್ಜಿತವಾಗಿ ನವೀಕರಣಗೊಳಿಸಿ ಶಾಲಾಭಿವೃದ್ದಿಗೆ ನೀಡಿರುವ ಕೊಡುಗೆ ಶ್ಲಾಘನೀಯ ಹಾಗೂ ಅನುಸರಣೀಯ ಎಂದು ಉದ್ಘಾಟನೆ ನಿರ್ವಹಿಸಿದ ಅನೂಪ್ ಕುಮಾರ್ ಅವರು ಈ ಸಂದರ್ಭ ತಿಳಿಸಿದರು.
ಶಾಲಾ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಅಶ್ರಫ್ ಬಿ.ಎಂ.ಅಧ್ಯಕ್ಷತೆ ವಹಿಸಿದ್ದರು. ನಿವೃತ್ತ ಮುಖ್ಯೋಪಾಧ್ಯಾಯ ಅಶೋಕ ಮಾಸ್ತರ್ ಬಾಡೂರು, ನಿವೃತ್ತ ಮುಖ್ಯ ಶಿಕ್ಷಕಿ ಶೋಭಾ, ನಿವೃತ್ತ ಮುಖ್ಯ ಶಿಕ್ಷಕ ಉಮಾನಾಥ ರೈ, ಮುಖ್ಯ ಶಿಕ್ಷಕಿ ಲೋಲಾಕ್ಷಿ, ಹಿರಿಯ ಶಿಕ್ಷಕಿ ಗಾಯತ್ರೀ ಮೊದಲಾದವರು ಉಪಸ್ಥಿತರಿದ್ದು ಶುಭಹಾರೈಸಿದರು.

