ಕೇರಳ ಸಾಂಸ್ಕೃತಿಕ ಇಲಾಖೆ ವತಿಯಿಂದ ಉಚಿತ ಕಲಾ ತರಬೇತಿ
0
ಮಾರ್ಚ್ 07, 2019
ಮಂಜೇಶ್ವರ: ಕೇರಳ ಸಾಂಸ್ಕೃತಿಕ ಇಲಾಖೆ ವಜ್ರ ಜ್ಯುಬಿಲಿ ಫೆಲೋಶಿಪ್ ಯೋಜನೆ ಅಂಗವಾಗಿ ಮಂಜೇಶ್ವರ ಬ್ಲಾಕ್ ಪಂಚಾಯಿತಿ ವ್ಯಾಪ್ತಿಯಲ್ಲಿ
ಹತ್ತು ವರ್ಷಕ್ಕೆ ಮೇಲ್ಪಟ್ಟ ಕಲಾಸಕ್ತರಿಗೆ ಚಿತ್ರಕಲೆ, ತಿರುವಾದಿರಕ್ಕಳಿ, ಪೂರಕ್ಕಳಿ ಮೊದಲಾದ ನಾನಾ ಕಲೆಗಳಿಗೆ ಉಚಿತ ತರಬೇತಿ ನೀಡಲಾಗುತ್ತಿದ್ದು ಗರಿಷ್ಠ ಪ್ರಾಯಮಿತಿ ಇರುವುದಿಲ್ಲ.
ಆಸಕ್ತರು ಆಯಾ ಪಂಚಾಯಿತಿ ಕಚೇರಿ, ಕುಟುಂಬಶ್ರೀ ಪ್ರತಿನಿಧಿ ಅಥವಾ ವಾರ್ಡು ಪ್ರತಿನಿಧಿಗಳಿಂದ ಅರ್ಜಿ ಪಡೆದು ಭರ್ತಿಗೊಳಿಸಿ ಸಲ್ಲಿಸಬಹುದಾಗಿದೆ.
ಮಂಗಲ್ಪಾಡಿ ಮತ್ತು ಪೈವಳಿಕೆ ಪಂಚಾಯಿತಿ ವ್ಯಾಪ್ತಿಯವರಿಗೆ ಮಂಗಲ್ಪಾಡಿ ಪಂಚಾಯಿತಿ ಸಭಾಂಗಣ, ಮೀಂಜ ಮತ್ತು ವರ್ಕಾಡಿ ಪಂಚಾಯಿತಿಯವರಿಗೆ ವರ್ಕಾಡಿ ಪಂಚಾಯಿತಿ ಸಬಾಂಗಣ, ಮಂಜೇಶ್ವರ ಪಂಚಾಯಿತಿಯವರಿಗೆ ಮಂಜೇಶ್ವರ ಕುಟುಂಬಶ್ರೀ ಸಭಾಂಗಣದಲ್ಲಿ ತರಬೇತಿ ನೀಡಲಾಗುವುದು.
ಮಂಗಲ್ಪಾಡಿ, ಪೈವಳಿಕೆ, ವರ್ಕಾಡಿ ಮತ್ತು ಮೀಂಜ ಪಂಚಾಯಿತಿಗೊಳಪಟ್ಟವರು ಮಾರ್ಚ್ 15, ಮಂಜೇಶ್ವರ ಪಂಚಾಯತಿಗೊಳಪಟ್ಟವರು ಮಾರ್ಚ್ 20ರ ಮುಂಚಿತವಾಗಿ ಅರ್ಜಿ ಸಲ್ಲಿಸುವಂತೆ ಪ್ರಕಟಣೆಯಲ್ಲಿ ತಿಳಿಸಲಾಗಿದೆ.




