ಕಲ್ಲಕಟ್ಟ ಶಾಲೆಗೆ ಯೋಗ ರಾಯಭಾರಿ ಭೇಟಿ
0
ಮಾರ್ಚ್ 07, 2019
ಬದಿಯಡ್ಕ: ಮೆಕ್ಸಿಕೋದಲ್ಲಿ ಕಳೆದ ಎರಡೂವರೆ ವರ್ಷಗಳಿಂದ ಭಾರತದ ಯೋಗ ಮತ್ತು ಸನಾತನ ಸಂಸ್ಕøತಿಯ ರಾಯಭಾರಿಯಾಗಿ ಕರ್ತವ್ಯ ನಿರ್ವಹಿಸುವ ಮೂಲಕ ಜನಮನ್ನಣೆ ಪಡೆದ ವಿಜಯಗಣೇಶ ಕೋರಿಕ್ಕಾರು ಅವರು ಕಲ್ಲಕಟ್ಟ ಶಾಲೆಗೆ ಇತ್ತೀಚೆಗೆ ಭೇಟಿ ನೀಡಿದರು.
ಮಕ್ಕಳೊಂದಿಗೆ ಯೋಗ ಸಂವಾದ ನಡೆಸಿದ ಅವರು ಯೋಗ ವೆಂದರೆ ಬೆಸೆಯುವುದು, ಸೇರಿಸುವುದು ಎಂಬ ಅರ್ಥ. ಯೋಗ ಎಲ್ಲ ರೀತಿಯಿಂದ ಎಲ್ಲ ಮತಧರ್ಮದವರನ್ನೂ ಒಟ್ಟು ಬೆಸೆದಿದೆ. ಆದ್ದರಿಂದ ನಮ್ಮ ದೇಶದ ಜನರು ಈಗಲೂ ಒಂದಾಗಿ ಸಹೋದರರಂತೆ ಬದುಕಿದ್ದಾರೆ. ಇದು ನಮ್ಮ ದೇಶದ ಸಂಸ್ಕøತಿಯ ಪ್ರತೀಕ. ನಾವು ಯೋಗವನ್ನು ಅಳವಡಿಸುವ ಮೂಲಕ ನಮ್ಮ ಸಂಸ್ಕøತಿಯನ್ನು ಉಳಿಸಬೇಕು, ಬೆಳೆಸಬೇಕು ಎಂದು ಕರೆ ನೀಡಿದರು.
ಮುಖ್ಯೋಪಾಧ್ಯಾಯ ಶ್ಯಾಮಪ್ರಸಾದ್, ಶಿಕ್ಷಕ, ಶಿಕ್ಷಕಿಯರು ಉಪಸ್ಥಿತರಿದ್ದರು.




