ಕುರಿಯ ಭಾಗವತ ಶಾಸ್ತ್ರಿಗಳಿಗೆ ಅಭಿನಂದನೆ
0
ಮಾರ್ಚ್ 15, 2019
ಮಂಜೇಶ್ವರ: ಚಿಗುರುಪಾದೆ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಬ್ರಹ್ಮಕಲಶೋತ್ಸವ ವಾರ್ಷಿಕ ದಿನಾಚರಣೆಯ ಸಂದರ್ಭ ಜರಗಿದ ಸಾಂಸ್ಕøತಿಕ ಕಾರ್ಯಕ್ರಮದ ವೇದಿಕೆಯಲ್ಲಿ ರಂಗನಾಯಕ ಕುರಿಯ ಗಣಪತಿ ಶಾಸ್ತ್ರಿ ಭಾಗವತರನ್ನು ಹಾಗೂ `ಮೇದಿನಿ ನಿರ್ಮಾಣ-ಮಹಿಷಮರ್ಧಿನಿ' ಯಕ್ಷಗಾನ ಪ್ರಸ್ತುತ ಪಡಿಸಿದ ಹವ್ಯಾಸಿ ಯಕ್ಷ ಕಲಾವಿದರು ಕೋಳ್ಯೂರು ತಂಡದ ಸಂಚಾಲಕರಾದ ಭಾಗವತ ರಾಜ ಬರೆಮನೆ ಯವರನ್ನು ಕ್ಷೇತ್ರದ ವತಿಯಿಂದ ಗೌರವಿಸಲಾಯಿತು.
ಕ್ಷೇತ್ರದ ಆಡಳಿತ ಮೊಕ್ತೇಸರ ವಸಂತ ಭಟ್ ತೊಟ್ಟೆತ್ತೋಡಿ, ಡಾ.ಜಯಪ್ರಕಾಶ ನಾರಾಯಣ ತೊಟ್ಟೆತ್ತೋಡಿ, ಶಂಕರನಾರಾಯಣ ಭಟ್ ಅಡ್ಕತ್ತಿಮಾರ್ ಸಮ್ಮಾನ ನೆರವೇರಿಸಿದರು. ಯೋಗೀಶ ರಾವ್ ಚಿಗುರುಪಾದೆ ಕಾರ್ಯಕ್ರಮ ನಿರ್ವಹಿಸಿದರು.

