ಪರಂಪರೆಯೇತರ ಟ್ರಸ್ಟಿ ನೇಮಕ
0
ಮಾರ್ಚ್ 15, 2019
ಕುಂಬಳೆ: ಮಲಬಾರ್ ದೇವಸ್ವಂಬೋರ್ಡ್ ವ್ಯಾಪ್ತಿಯ ಮಂಜೇಶ್ವರ ತಾಲೂಕು ಪುತ್ತಿಗೆ ಮುಗು ಶ್ರೀ ಸುಬ್ರಾಯ ದೇವಸ್ಥಾನದ ಪರಂಪರೆಯೇತರ ಟ್ರಸ್ಟಿ ಪದವಿಗೆ ಅರ್ಜಿ ಕೋರಲಾಗಿದೆ.
ದೇವಾಲಯದ ಆಸುಪಾಸಿನ ನಿವಾಸಿಗಳಾದ, ಹಿಂದೂ ಧರ್ಮೀಯರಾದವರಿಂದ ಅರ್ಜಿ ಆಹ್ವಾನಿಸಲಾಗಿದೆ. ಮಲಬಾರ್ ದೇವಸ್ವಂಬೋರ್ಡ್, ಕಾಸರಗೋಡು ಡಿವಿಝನ್, ನೀಲೇಶ್ವರದಲ್ಲಿರುವ ಸಹಾಯಕ ಕಮೀಷನರ್ ಅವರ ಕಚೇರಿಗೆ ಮಾ.30ರ ಸಂಜೆ 5 ಗಂಟೆಗೆ ಮುಂಚಿತವಾಗಿ ಅರ್ಜಿ ಸಲ್ಲಿಸಬೇಕು. ನಿಗದಿತ ಮಾದರಿಯ ಅರ್ಜಿ ಫಾರಂಮಲಬಾರ್ ದೇವಸ್ವಂ ಬೋರ್ಡ್ ವೆಬ್ ಸೈಟ್ ಅಥವಾ ನೀಲೇಶ್ವರದಲ್ಲಿರುವ ಸಹಾಯಕ ಕಮೀಷನರ್ ಅವರ ಕಚೇರಿಯಲ್ಲಿ ಲಭ್ಯವಿದೆ.

