ಮಂಗಲ್ಪಾಡಿಯಲ್ಲಿ ತರುಣ ಸೌಧ ಐಲ ಉದ್ಘಾಟನೆ
0
ಮಾರ್ಚ್ 14, 2019
ಉಪ್ಪಳ: ಬಿ.ಜೆ.ಪಿ ಮಂಗಲ್ಪಾಡಿ ಪಂಚಾಯತಿ ಸಮಿತಿ ನೂತನ "ತರುಣ ಸೌದ ಐಲ" ಕಚೇರಿಯನ್ನು ಬಿ.ಜೆ.ಪಿ ಜಿಲ್ಲಾ ಅಧ್ಯಕ್ಷ ನ್ಯಾಯವಾದಿ.ಕೆ.ಶ್ರೀಕಾಂತ್ ಅವರು ಉದ್ಘಾಟಿಸಿದರು. ಬಿಜೆಪಿ ಮಂಡಲ ಅಧ್ಯಕ್ಷ ಕೋಳಾರು ಸತೀಶ್ಚಂದ್ರ ಭಂಡಾರಿ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದರು.ಬಿಜೆಪಿ ನೇತಾರರಾದ ಕೆ.ವಿನೋದನ್,ಕೆ.ರಮೇಶ್ ಭಟ್, ಮಹೇಶ್ ನಿಡುಗಳ,ಹರಿಶ್ಚಂದ್ರ ಮಂಜೇಶ್ವರ, ವಲ್ಸರಾಜ್, ರಾಘವ ಕೊಪ್ಪಳ ಉಪಸ್ಥಿತರಿದ್ದರು.ಪಂಚಾಯತಿ ಪ್ರಧಾನ ಕಾರ್ಯದರ್ಶಿ ದಿನೇಶ್ ಚೆರುಗೋಳಿ ಸ್ವಾಗತಿಸಿ, ದಿನೇಶ್ ಮುಳಿಂಜ ವಂದಿಸಿದರು.




