ಆನೆಕಲ್ಲು ಶಾಲೆಗೆ ಕಬ್ ಸಮಗ್ರ ಪ್ರಶಸ್ತಿ
0
ಮಾರ್ಚ್ 14, 2019
ಮಂಜೇಶ್ವರ: ಕಾಸರಗೋಡು ಜಿಲ್ಲಾ ಮಟ್ಟದ ಕಬ್ ಬುಲ್ ಬುಲ್ ಉತ್ಸವವು ಮಾರ್ಚ್ 1 ಹಾಗೂ 2ರಂದು ಕುಡಾಲ್ ಮೇರ್ಕಳ ಅನುದಾನಿತ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಜರಗಿತು.ಈ ಉತ್ಸವಕ್ಕೆ ಆನೆಕಲ್ಲು ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯ ಕಬ್ ಮತ್ತು ಬುಲ್ ಬುಲ್ ಮಕ್ಕಳು ಭಾಗವಹಿಸಿದರು.ಕಬ್ ವಿಭಾಗದಲ್ಲಿ ದೇಶ ಭಕ್ತಿಗೀತೆ ಪ್ರಥಮ,ಅಭಿನಯ ಗೀತೆ ಪ್ರಥಮ,ಮುಖವಾಡ ತಯಾರಿಯಲ್ಲಿ ಪ್ರಥಮ,ನೃತ್ಯ ಪ್ರಥಮ ಕಿರು ಪ್ರಹಸನದಲ್ಲಿ ದ್ವಿತೀಯ ಸ್ಥಾನ ಪಡೆದು ಕಬ್ ಸಮಗ್ರ ಪ್ರಶಸ್ತಿಯನ್ನು ಸತತ 2ನೇ ಬಾರಿಗೆ ಪಡೆದುಕೊಂಡಿದೆ.ಬುಲ್ ಬುಲ್ ವಿಭಾಗದಲ್ಲಿ ಅಭಿನಯ ಗೀತೆ ದ್ವಿತೀಯ ಸ್ಥಾನ ಪಡೆದಿದ್ದಾರೆ.ಕಬ್ ಮಾಸ್ತರ್ ಹರೀಶ್ ಹಾಗೂ ಬ್ಲಾಕ್ ಲೀಡರ್ ಗೀತಾ ತರಬೇತಿ ನೀಡಿದ್ದರು. ಶಾಲಾ ರಕ್ಷಕ ಶಿಕ್ಷಕ , ಮಾತೃಸಂಘ ಮುಖ್ಯೋಪಾಧ್ಯಾಯಿನಿ ರೇಣುಕಾ.ವಿ ಹಾಗೂ ಅಧ್ಯಾಪಕ ವೃಂದದವರು ಮಕ್ಕಳನ್ನು ಅಭಿನಂದಿಸಿದರು.




