ಪಯಸ್ವಿನಿ ಹೊಳೆಯಿಂದ ಮರಳು ಲೂಟಿ
0
ಮಾರ್ಚ್ 16, 2019
ಮುಳ್ಳೇರಿಯ: ಪಯಸ್ವಿನಿ ಹೊಳೆಯಿಂದ ಅಕ್ರಮ ಮರಳು ಸಾಗಾಟ ವ್ಯಾಪಕಗೊಳ್ಳುತ್ತಿರುವುದಾಗಿ ದೂರಲಾಗಿದೆ. ಪಯಸ್ವಿನಿ ಹೊಳೆಯ ಅರಮನಪಡಿ ತುಗುಸೇತುವೆಯ ಸಮೀಪದ ಭಾಗದಿಂದ ಮರಳು ಲೂಟಿ ನಡೆಯುತ್ತಿದೆ. ಹೊಳೆಯಲ್ಲಿ ನೀರು ಕಡಿಮೆ ಆಗಿರುವುದರಿಂದ ಮತ್ತೆ ಮರಳು ಲೂಟಿ ವ್ಯಾಪಕಗೊಂಡಿರುವುದು ಕಂಡುಬಂದಿದೆ.
ಹೊಳೆಬದಿ ರಾಶಿ ಹಾಕಲಾದ ಮಣ್ಣನ್ನು ಗೋಣಿಗಳಲ್ಲಿ ತುಂಬಿಸಿ ಹೊಳೆಬದಿ ತಾತ್ಕಾಲಿಕವಾಗಿ ನಿರ್ಮಿಸಿದ ರಸ್ತೆಯ ಮೂಲಕ ರಾತ್ರಿ ವೇಳೆಗಳಲ್ಲಿ ವಾಹನಗಳಲ್ಲಿ ಸಾಗಿಸಲಾಗುತ್ತಿದೆ. ಈ ರೀತಿ ದೈನಂದಿನ ಹತ್ತು ಲೋಡ್‍ಗೂ ಮಿಕ್ಕ ಮರಳನ್ನು ಇಲ್ಲಿಂದ ಸಾಗಿಸಲಾಗುತ್ತಿದೆ ಎಂದು ಪರಿಸರ ನಿವಾಸಿಗಳು ಹೇಳುತ್ತಿದ್ದಾರೆ.
ಪಯಸ್ವಿನಿ ಹೊಳೆಯ ಮೂಲಕ ಹಗಲು ವೇಳೆಯಲ್ಲಿ ಕೂಡ ದೋಣಿಗಳಲ್ಲಿ ಮರಳು ತುಂಬಿಸಿಕೊಂಡು ಹೋಗುವುದು ದೈನಂದಿನ ದೃಶ್ಯವಾಗಿದೆ. ಮರಳು ಸಾಗಾಟದಿಂದ ತೂಗುಸೇತುವೆಯ ಕಂಬಗಳು ಅಪಾಯ ಭೀತಿ ಎದುರಿಸಲಿವೆ ಎಂಬ ಆರೋಪ ಕೇಳಿಬರುತ್ತಿದೆ. ಇದರ ಹೊರತು ಈ ಭಾಗದ ರಸ್ತೆಗಳು ಹಾನಿಗೀಡಾಗುತ್ತಿರುವುದಾಗಿಯೂ, ಹೊಳೆಯ ತಡೆಗೋಡೆ ಶಿಥಿಲಗೊಳ್ಳುತ್ತಿರುವುದಾಗಿಯೂ ನಾಗರಿಕರು ಹೇಳುತ್ತಿದ್ದಾರೆ.
ಬೇಡಡ್ಕ ಪೊಲೀಸ್ ಠಾಣೆ ವ್ಯಾಪ್ತಿಯ ಪ್ರದೇಶ ಇದಾಗಿದೆ. ಅಕ್ರಮ ಮರಳು ಸಆಗಾಟದ ವಿರುದ್ಧ ಪೆuಟಿಜeಜಿiಟಿeಜಲೀಸರ ಭಾಗದಿಂದ ಕಟ್ಟುನಿಟ್ಟಿನ ಕ್ರಮ ಕೆ?ಗೊಳ್ಳಬೇಕು ಎಂದು ನಾಗರಿಕರು ಆಗ್ರಹಿಸುತ್ತಿದ್ದಾರೆ.

