ಪುದುಕೋಳಿ-ಏಣಿಯರ್ಪು ಕಾಂಕ್ರೀಟ್ ರಸ್ತೆಯ ಲೋಕಾರ್ಪಣೆ
0
ಮಾರ್ಚ್ 07, 2019
ಬದಿಯಡ್ಕ: ರಸ್ತೆಯು ಅಭಿವೃದ್ಧಿಯನ್ನು ಹೊಂದಿದರೆ ಆ ಊರು ಪ್ರಗತಿಯನ್ನು ಕಾಣುತ್ತದೆ. ನಮ್ಮ ಗ್ರಾಮಪಂಚಾಯತಿ ಅನೇಕ ದಿನಗಳ ಕನಸು ನನಸಾಗಿದೆ. ಈ ರಸ್ತೆಯು ತಮ್ಮ ದೈನಂದಿನ ಚಟುವಟಿಕೆಗಳಿಗೆ ಸಾರ್ವಜನಿಕರಿಗೆ ಸಹಕಾರಿಯಾಗಲಿ ಎಂದು ಬದಿಯಡ್ಕ ಗ್ರಾಮಪಂಚಾಯತ್ ಅಧ್ಯಕ್ಷ ಕೆ.ಎನ್.ಕೃಷ್ಣ ಭಟ್ ಹೇಳಿದರು.
ಅವರು ಮಹಾತ್ಮಾಗಾಂಧಿ ದೇಶೀಯ ಉದ್ಯೋಗ ಖಾತರಿ ಯೋಜನೆಯ ಮೂಲಕ ನೀರ್ಚಾಲು ಸಮೀಪದ ಪುದುಕೋಳಿ-ಏಣಿಯರ್ಪು ಕಾಂಕ್ರೀಟ್ ರಸ್ತೆಯನ್ನು ಲೋಕಾರ್ಪಣೆಗೊಳಿಸಿ ಮಾತನಾಡಿದರು.
ಈ ಯೋಜನೆಯ ಮೂಲಕ ನಮ್ಮ ಗ್ರಾಮ ಪಂಚಾಯತ್‍ನ ಎಲ್ಲಾ 19 ವಾರ್ಡುಗಳಲ್ಲಿಯೂ ಒಂದೊಂದು ಕಾಂಕ್ರೀಟು ರಸ್ತೆಯನ್ನು ನಿರ್ಮಿಸಲಾಗಿದೆ. ಇದಕ್ಕಾಗಿ ಮುತುವರ್ಜಿ ವಹಿಸಿ ದುಡಿದ ಅಧಿಕಾರಿಗಳು ನಿಜಕ್ಕೂ ಅಭಿನಂದನಾರ್ಹರು ಎಂದರು. ಸ್ಥಾಯಿ ಸಮಿತಿ ಅಧ್ಯಕ್ಷ ಶ್ಯಾಮಪ್ರಸಾದ ಮಾನ್ಯ ಅಧ್ಯಕ್ಷತೆ ವಹಿಸಿದ್ದರು. ಉದ್ಯೋಗ ಖಾತರಿ ಯೋಜನೆಯ ಹೈದರ್ ಪ್ರಾಸ್ತಾವಿಕ ನುಡಿಗಳನ್ನಾಡಿದರು. ವಾರ್ಡು ಸದಸ್ಯ ಸಿರಾಜ್ ಮುಹಮ್ಮದ್ ಮಾತನಾಡಿದರು. ಸಾಜಿದಾ, ರಜಿತಾ, ವಾಸುದೇವ ಹೊಳ್ಳ ಹಾಗೂ ಸ್ಥಳೀಯರು ಉಪಸ್ಥಿತರಿದ್ದರು.




