ಲೈಫ್ ಭವನ ಯೋಜನೆಯ ಮೊದಲ ಮನೆ ಕೀಲಿಕೈ ಹಸ್ತಾಂತರ
0
ಮಾರ್ಚ್ 07, 2019
ಬದಿಯಡ್ಕ: ಲೈಫ್ ಭವನ ನಿರ್ಮಾಣ ಯೋಜನೆಯ ಮೊದಲ ಮನೆಯನ್ನು ಬದಿಯಡ್ಕ ಗ್ರಾಮಪಂಚಾಯತಿ ಅಧ್ಯಕ್ಷ ಕೆ.ಎನ್.ಕೃಷ್ಣಭಟ್ ಕಿಳಿಂಗಾರು ರಾಮಪಾಟಾಳಿ ದಂಪತಿಗಳಿಗೆ ಮನೆಯ ಕೀಲಿಕೈ ಹಸ್ತಾಂತರಿಸುವ ಮೂಲಕ ಬುಧವಾರ ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಅವರು ಮಾತನಾಡಿ, ಮನೆಯಿಲ್ಲದವರಿಗೆ ಮನೆ ಎಂಬ ಯೋಜನೆ ಸಾಕಾರಗೊಳ್ಳುವತ್ತ ಸಾಗುತ್ತಿದೆ. ಬಡಜನರ ಬಾಳಿಗೆ ಬೆಳಕಾಗುವ ಇಂತಹ ಹತ್ತು ಹಲವು ಯೋಜನೆಗಳಿಂದ ಜನರಿಗೆ ಪ್ರಯೋಜನಪ್ರದವಾಗಲಿದೆ ಎಂದರು.
ಆರೋಗ್ಯ ಮತ್ತು ವಿದ್ಯಾಭ್ಯಾಸ ಸ್ಥಾಯಿ ಸಮಿತಿ ಅಧ್ಯಕ್ಷ ಶ್ಯಾಮಪ್ರಸಾದ ಮಾನ್ಯ, ಗ್ರಾಮಪಂಚಾಯತಿ ಸದಸ್ಯ ಡಿ.ಶಂಕರ ಜೊತೆಗಿದ್ದರು. ಅಭಿಯಂತರ ಜೋನ್ಸನ್ ಪ್ರಾಸ್ತಾವಿಕವಾಗಿ ಮಾತನಾಡಿದರು.




