ಮೌನ ನಾಮಜಪ ಮೂರನೇ ದಿನ ಯಶಸ್ವಿ
0
ಮಾರ್ಚ್ 07, 2019
ಮಂಜೇಶ್ವರ: ಪಾವೂರು ಸಮೀಪದ ಕೊಪ್ಪಳ ಶಿವಪುರದ ಶ್ರೀಮಹಾ ಮೃತ್ಯುಂಜಯೇಶ್ವರ ದೇವಸ್ಥಾನದಲ್ಲಿ ಮಾರ್ಚ್ 4 ಸೊಮವಾರದಿಂದ ಯೋಗಾಚಾರ್ಯ ಪುಂಡರೀಕಾಕ್ಷ ಬೆಳ್ಳೂರು ಅವರ ನೇತೃತ್ವದಲ್ಲಿ ಆರಂಭಗೊಂಡಿರುವ 48 ದಿನಗಳ ಉದಯಾಸ್ತಮಾನ ಮೌನ ನಾಮಜಪದ ಮೂರನೇ ದಿನವಾದ ಬುಧವಾರ ಬೆಳಿಗ್ಗೆ ಗಣಪತಿ ಹವನ, ಬಳಿಕ ಪುಂಡರೀಕಾಕ್ಷ ಯೋಗಾಚಾರ್ಯರವರಿಂದ ಮೌನ ನಾಮ ಜಪ, ಭಕ್ತರಿಂದ ಸಾವಿರ ಸಂಖ್ಯೆಯಲ್ಲಿ ನಾಮ ಜಪ ನಡೆಯಿತು. ಸಂಜೆ ನಮ್ಮವರು ಕಲಾ ತಂಡ ಕಣ್ವತೀರ್ಥ ಇವರು ಭಜನಾ ಸಂಕೀರ್ತನೆ ನಡೆಸಿದರು. ಸಂಜೆ 6.30 ಕ್ಕೆ ಪುಂಡರೀಕಾಕ್ಷ ಯೋಗಾಚಾರ್ಯ ರಿಂದ ಸತ್ಸಂಗ ನಡೆಯಿತು ಈ ಸಂದರ್ಭದಲ್ಲಿ ಅಥಿತಿಗಳಾಗಿ ಮಧುಸೂದನ ಆಚಾರ್ಯ ಕಣ್ವತೀರ್ಥ, ಗೋಪಾಲ ಶೆಟ್ಟಿ ಅರಿಬೈಲು, ಸುಬ್ಬ ಗುರುಸ್ವಾಮಿ ಪಾವೂರು, ವಾಸು ಕುಲಾಲ್ ಭಾಗವಹಿಸಿದರು.




