ಮೊಗೇರ ಸಮಾಜದ ನೀರ್ಚಾಲು ಪ್ರಾದೇಶಿಕ ಸಮಿತಿ ಕಛೇರಿ ಉದ್ಘಾಟನೆ
0
ಮಾರ್ಚ್ 07, 2019
ಬದಿಯಡ್ಕ: ಮಧೂರು ಶ್ರೀ ಮದರು ಮಹಾಮಾತೆ ಮೊಗೇರ ಸಮಾಜದ ನೀರ್ಚಾಲು ಪ್ರಾದೇಶಿಕ ಸಮಿತಿ ಕಛೇರಿಯನ್ನು ಕೇರಳ ತುಳು ಅಕಾಡಮಿ ಸದಸ್ಯ ರಾಧಾಕೃಷ್ಣ ಕೆ ಉಳಿಯತ್ತಡ್ಕ ಉದ್ಘಾಟಿಸಿದರು. ಮಲಬಾರ್ ದೇವಸ್ವಂ ಮಂಡಳಿ ಮತ್ತು ಜೀರ್ಣೋದ್ಧಾರ ಸಮಿತಿಯು ಮದರು ಮಹಾಮಾತೆಗೆ ಉಳಿಯತ್ತಡ್ಕ ಮೂಲಸ್ಥಾನದಲ್ಲಿ ಸೂಕ್ತ ಸ್ಥಾನಮಾನ ಕಲ್ಪಿಸಲು ಅಗತ್ಯವುಳ್ಳ ಯೋಜನೆಗಳನ್ನು ರೂಪಿಸಿ ಕಾರ್ಯಗತಗೊಳಿಸಬೇಕೆಂದು ಅವರು ಹೇಳಿದರು.
ಸಮಿತಿಯ ಅಧ್ಯಕ್ಷ ವಸಂತ ಅಜಕ್ಕೋಡು ಅಧ್ಯಕ್ಷತೆ ವಹಿಸಿದರು. ಮಧೂರು ಶ್ರೀ ಮದನಂತೇಶ್ವರ ವಿನಾಯಕ ದೇವಸ್ಥಾನವು ತ್ವರಿತ ಗತಿಯಲ್ಲಿ ಜೀರ್ಣೋದ್ಧಾರಗೊಳ್ಳುತ್ತಿದ್ದು, ಜತೆಗೆ ಮೂಲಸ್ಥಾನದಲ್ಲಿ ಮದುರುವಿಗೆ ಗುಡಿ ನಿರ್ಮಾಣ ಕೆಲಸಗಳು ನಡೆಯಬೇಕಾಗಿದೆ. ಈ ಕುರಿತು ಮಾಯಿಪ್ಪಾಡಿ ಅರಸರ ಪ್ರತಿನಿಧಿ, ತಂತ್ರಿಗಳು, ಕ್ಷೇತ್ರದ ಆಡಳಿತ ಅಧಿಕಾರಿಗಳು ಹಾಗೂ ಭಕ್ತರ ಉಪಸ್ಥಿತಿಯಲ್ಲಿ ಇತ್ತೀಚೆಗೆ ಪ್ರಶ್ನೆ ಚಿಂತನೆ ನಡೆಸಲಾಗಿದ್ದು, ಅದರಲ್ಲಿ ತಿಳಿದು ಬಂದ ಪ್ರಕಾರ ಕಾರ್ಯಯೋಜನೆಗಳನ್ನು ಕೈಗೆತ್ತಿಕೊಳ್ಳಬೇಕೆಂದು ವಸಂತ ಅಜಕ್ಕೋಡು ಸಂಬಂಧಪಟ್ಟವರನ್ನು ಒತ್ತಾಯಿಸಿದ್ದಾರೆ. ಗೌರವಾಧ್ಯಕ್ಷ ಆನಂದ ಕೆ. ಮವ್ವಾರ್, ಸಲಹೆ ಸಮಿತಿಯ ಸದಸ್ಯ ರಾಮಪ್ಪ ಮಂಜೇಶ್ವರ, ಡಿ. ಕೃಷ್ಣ ದರ್ಭೆತ್ತಡ್ಕ, ಪದಾಧಿಕಾರಿಗಳಾದ ಡಿ. ಕೃಷ್ಣದಾಸ್, ನಿಟ್ಟೋಣಿ ಬಂದ್ಯೋಡು, ಗೋಪಾಲ ಡಿ., ಸುರೇಶ ಅಜಕ್ಕೋಡು, ಸುಂದರ ಮಾಲಂಗೈ, ಅನಿಲ್ ಅಜಕ್ಕೋಡು ಉಪಸ್ಥಿತರಿದ್ದು ಮಾತನಾಡಿದರು. ಪ್ರಧಾನ ಕಾರ್ಯದರ್ಶಿ ಶಂಕರ ಡಿ. ದರ್ಭೆತ್ತಡ್ಕ ಪ್ರಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ರಾಮ ಪಟ್ಟಾಜೆ ವಂದಿಸಿದರು.




