ಬದಿಯಡ್ಕದಲ್ಲಿ ದಿ.ಎಮ್.ಎಸ್.ಶೇಖರ್ ಸಂಸ್ಮರಣೆ
0
ಮಾರ್ಚ್ 07, 2019
ಬದಿಯಡ್ಕ: ಅಂಬೇಡ್ಕರ್ ವಿಚಾರ ವೇದಿಕೆಯ ಸ್ಥಾಪಕ, ಸಂಘಟಕ, ಕವಿ, ನಾಟಕ ರಚನೆಗಾರ, ನಿರ್ದೇಶಕ, ನಟ ದಿ. ಎಮ್. ಎಸ್ ಶೇಖರರ 15ನೇ ವರ್ಷದ ಸಂಸ್ಮರಣಾ ದಿನ ಕಾರ್ಯಕ್ರವನ್ನು ಬಾರಡ್ಕದ ಅಂಬೇಡ್ಕರ್ ನಗರದಲ್ಲಿ ಆಚರಿಸಲಾಯಿತು.
ವಿಚಾರ ವೇದಿಕೆಯ ಅಧ್ಯಕ್ಷ ರಾಮ ಪಟ್ಟಾಜೆ ಅಧ್ಯಕ್ಷತೆ ವಹಿಸಿದರು. ಕಾಸರಗೋಡು ಮೊಗೇರ ಸಂಘದ ಜಿಲ್ಲಾಧ್ಯಕ್ಷ ಬಾಬು ಬಂದ್ಯೋಡುರವರು ಎಮ್.ಎಸ್. ಶೇಖರರ ಭಾವಚಿತ್ರಕ್ಕೆ ಹಾರಾರ್ಪಣೆಗೈದು ಮಾತನಾಡಿದರು. ಕುಂಬ್ಡಾಜೆ ಗ್ರಾಮಪಂಚಾಯತಿ ಉಪಾಧ್ಯಕ್ಷ ಆನಂದ ಕೆ ಮವ್ವಾರ್, ಮಧೂರು ಶ್ರೀ ಮದರು ಮಹಾಮಾತೆಯ ಮೊಗೇರ ಸಮಾಜದ ಜಿಲ್ಲಾಧ್ಯಕ್ಷ ವಸಂತ ಅಜಕ್ಕೋಡು, ಸಾಮಾಜಿಕ ಕಾರ್ಯಕರ್ತ ಶಂಕರ ಸ್ವಾಮಿ ಕೃಪಾ, ಜನಪ್ರತಿನಿಧಿ ಶಾಂತಾ ಬಾರಡ್ಕ ಮುಖ್ಯ ಅತಿಥಿಯಾಗಿ ಭಾಗವಹಿಸಿ ನುಡಿ ನಮನ ಸಲ್ಲಿಸಿದರು. ನಾರಾಯಣ ಬಾರಡ್ಕ ಸಂಸ್ಮರಣಾ ಭಾಷಣ ಗೈದರು. ಪ್ರಕಾಶ ಎಮ್.ಎಸ್, ಸುರೇಖಾ ಬಾರಡ್ಕ, ಸುರೇಶ ಅಜಕ್ಕೋಡು, ವಿಶ್ವನಾಥ ಬಿ.ಕೆ, ಜಯರಾಜ್ ಬಾರಡ್ಕ, ಸುರೇಶ ಬಿ.ಎನ್. ಉಪಸ್ಥಿತರಿದ್ದರು. ವಿಜಯ ಕುಮಾರ್ ಬಾರಡ್ಕ ಸ್ವಾಗತಿಸಿ, ಸುಂದರ ಬಾರಡ್ಕ ವಂದಿಸಿದರು.




