ಬಾಕಿಲಪದವಿನಲ್ಲಿ ಪ್ರತಿಷ್ಠೆ ಹಾಗೂ ಕಲಾಶಾಭಿಷೇಕ ಮಾ.13 ರಂದು
0
ಮಾರ್ಚ್ 07, 2019
ಪೆರ್ಲ: ನಲ್ಕ ಸಮೀಪದ ಬಾಕಿಲಪದವಿನಲ್ಲಿ ನವೀಕೃತ ರಕ್ತೇಶ್ವರಿ ಮತ್ತು ಪರಿವಾರ ದೈವಗಳ ಪ್ರತಿಷ್ಠೆ, ಕಲಶಾಭಿಷೇಕ ಕಾರ್ಯಕ್ರಮಗಳು ಮಾ.13 ರಂದು ವಿವಿಧ ವೈದಿಕ, ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ.
ಕಾರ್ಯಕ್ರಮದ ಅಂಗವಾಗಿ ಮಾ.12 ರಂದು ರಾತ್ರಿ ಪ್ರತಿಷ್ಠಾ ಪೂರ್ವ ವಿವಿಧ ಕಾರ್ಯಕ್ರಮಗಳು ನಡೆದು ಮಾ.13 ರಂದು ಬುಧವಾರ ಬೆಳಿಗ್ಗೆ 7.15ಕ್ಕೆ ಪ್ರತಿಷ್ಠೆ ಹಾಗೂ ಕಲಶಾಭಿಷೇಕಗಳು ನಡೆಯಲಿದೆ ಎಂದು ಸಂಬಂಧಪಟ್ಟವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.




