HEALTH TIPS

ಕನ್ನಡ ಭಾಷಾಂತರ ಕೇಂದ್ರ ಆರಂಭ

ಕಾಸರಗೋಡು: ಕಾಸರಗೋಡು ಜಿಲ್ಲೆಯ ಭಾಷಾ ಅಲ್ಪಸಂಖ್ಯಾತರ ಬಹುಕಾಲದ ಬೇಡಿಕೆಯಾಗಿದ್ದ ಕನ್ನಡ ಭಾಷಾಂತರ ವಿಭಾಗ ಜಿಲ್ಲಾಧಿಕಾರಿ ಕಚೇರಿಯಲ್ಲಿ ಆರಂಭಗೊಂಡಿದೆ. ಫೆ.26ರಂದು ಈ ವಿಭಾಗ ಆರಂಭಗೊಂಡಿದ್ದು, ಜಿಲ್ಲೆಯ ವಿವಿದ ಸರಕಾರಿ ಕಚೇರಿಯಲ್ಲಿ ಲಭಿಸುವ ಅರ್ಜಿಗಳು, ಇತರ ಭಾಷಾಂತರ ಅಗತ್ಯಗಳಿಗೆ ಈ ವಿಭಾಗವನ್ನು ಸಂಪರ್ಕಿಬಹುದು. ಸರಕಾರಿ ಕಚೇರಿಗಳು ನೀಡುವ ಸೇವಾ ವಿವರಗಳು, ಕಚೇರಿಗಳಲ್ಲಿ ಲಗತ್ತಿಸಬೇಕಾದ ನಾಮಫಲಕಗಳು, ಜನಸಾಮಾನ್ಯರ ಅವಗಾಹನೆಗೆ ಬರಬೇಕಾದ ವಾರ್ತೆಗಳು, ತುರ್ತು ಮಾಹಿತಿಗಳನ್ನು ಕನ್ನಡಕ್ಕೆ ಭಾಷಾಂತರಿಸಲು ಜಿಲ್ಲೆಯ ಎಲ್ಲ ಸರಕಾರಿ ಕಚೇರಿಗಳು ಈ ವಿಭಾಗವನ್ನು ಆಶ್ರಯಿಸಬಹುದು ಎಂದು ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ತಿಳಿಸಿರುವರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries