ರಾಜ್ಯ ಸರಕಾರದ ಒಂದು ಸಾವಿರ ದಿನ-ಕನ್ನಡ ಕಿರು ಹೊತ್ತಗೆ ಬಿಡುಗಡೆ
0
ಮಾರ್ಚ್ 07, 2019
ಕಾಸರಗೋಡು: ರಾಜ್ಯ ಸರಕಾರ ಪೂರೈಸಿದ ಒಂದು ಸಾವಿರ ದಿನದ ಅಭಿವೃದ್ಧಿ ಚಟುವಟಿಕೆಗಳು, ಸಾಧನೆಗಳು ಇತ್ಯಾದಿಗಳ ಕನ್ನಡ ಕಿರುಹೊತ್ತಗೆ ಪ್ರಕಟಗೊಂಡಿದೆ.
ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಸಮಾರಂಭದಲ್ಲಿ ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ಅವರು ಕಿರುಹೊತ್ತಗೆ ಬಿಡುಗಡೆಗೊಳಿಸಿದರು. ನಂತರ ಹೆಚ್ಚುವರಿ ದಂಡನಾಧಿಕಾರಿ ಎನ್.ದೇವಿದಾಸ್ ಅವರಿಗೆ ಹಸ್ತಾಂತರಿಸಿದರು. ಜಿಲ್ಲಾ ವಾರ್ತಾ-ಮಾಹಿತಿ ಅಧಿಕಾರಿ ಎಂ.ಮಧುಸೂದನನ್, ಸಹಾಯಕ ಜಿಲ್ಲಾಧಿಕಾರಿ (ಜನರಲ್) ಸಿ.ಬಿಜು, ಮಹಿಳಾ ಶಿಶು ಕಲ್ಯಾಣ ಅಧಿಕಾರಿ ಡೀನಾ ಭರತನ್, ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಜೋನ್ ಜೋಸ್, ಜಿಲ್ಲಾ ಸಾಮಾಜಿಕ ನ್ಯಾಯ ಅಧಿಕಾರಿ ಬಿ.ಭಾಸ್ಕರನ್, ಹಿರಿಯ ವರಿಷ್ಠಾಧಿಕಾರಿ ಕೆ.ವಿನೋದ್ ಕುಮಾರ್, ಜಿಲ್ಲೆಯ ಗ್ರಾಮ ಪಂಚಾಯತ್ ಕಾರ್ಯದರ್ಶಿಗಳು, ಕೃಷಿ, ಸಾಮಾಜಿಕ ನ್ಯಾ, ಕಂದಾಯ ಇಲಾಖೆಗಳ ಸಿಬ್ಬಂದಿಗಳು ಉಪಸ್ಥಿತರಿದ್ದರು.
ಕಾಸರಗೋಡು ಜಿಲ್ಲೆಯಲ್ಲಿ ಒಂದು ಸಾವಿರ ದಿನದಲ್ಲಿ ನಡೆಸಿದ ಅಭಿವೃದ್ಧಿ ಚಟುವಟಿಕೆಗಳು, ಸಾಧನೆಗಳು ಮತ್ತು ಪಿಣರಾಯಿ ವಿಜಯನ್ ಅವರ ನೇತೃತ್ವದ ರಾಜ್ಯ ಸರಕಾರ ನಡೆಸಿದ ಸಾಧನೆಗಳ ಕುರಿತು ಈ ಕಿರುಹೊತ್ತಗೆಯಲ್ಲಿ ಮಾಹಿತಿಗಳಿವೆ.




