ಉಚಿತ ಜಲ ಪರಿಶೋಧನೆಗೆ ಚಾಲನೆ
0
ಮಾರ್ಚ್ 15, 2019
ಬದಿಯಡ್ಕ: ಎಂ.ಬಿ.ಮೆಗಾ ಮಾರ್ಕೆಟ್ ಸಮಿತಿಯ ನೇತೃತ್ವದಲ್ಲಿ ಬದಿಯಡ್ಕದಲ್ಲಿ ಆಯೋಜಿಸಿರುವ ಉಚಿತ ಜಲ ಪರಿಶೋಧನ ಶಿಬಿರಕ್ಕೆ ಬುಧವಾರ ಚಾಲನೆ ನೀಡಲಾಯಿತು.
ಕಾರ್ಯಕ್ರಮದಲ್ಲಿ ಕುಂಬ್ಡಾಜೆ ಗ್ರಾ.ಪಂ.ಸದಸ್ಯ ಬಿ.ಟಿ.ಅಬ್ದುಲ್ಲ ಕುಂಞÂ ಉದ್ಘಾಟಿಸಿದರು. ಬದಿಯಡ್ಕ ಸಮುದಾಯ ಆರೋಗ್ಯ ಕೇಂದ್ರ ರಸ್ತೆಯಲ್ಲಿರುವ ಎಂ.ಬಿ.ಮೆಗಾ ಮಾರ್ಕೆಟ್ ನಲ್ಲಿ ಮಾ.31ರ ವರೆಗೆ ಉಚಿತ ಜಲ ಪರಿಶೋಧನಾ ಶಿಬಿರ ಆಯೋಜಿಸಲಾಗಿದೆ. ಪಿತ್ತ ಕಾಮಾಲೆ, ಕೊಲೆರೋ, ಉದರ ಶೂಲೆ, ಟೈಪಾಯ್ಡ್ ಮೊದಲಾದ ಜಲ ಮಲಾಲಿನ್ಯದಿಂದ ಉಂಟಾಗುವ ರೋಗಗಳನ್ನು ನಿಯಂತ್ರಿಸಲು ಜಲ ಪರಿಶೋಧನೆಯಿಂದ ಸಾಧ್ಯವಾಗಲಿದೆ. ಈ ನಿಟ್ಟಿನಲ್ಲಿ ಸಾರ್ವಜನಿಕರು ಉಚಿತವಾದ ಜಲ ಪರಿಶೋಧನಾ ಸೇವೆಯ ಪ್ರಯೋಜನವನ್ನು ಪಡೆಯಬಹುದು ಎಂದು ಅಬ್ದುಲ್ಲ ಕುಂಞÂ ಉದ್ಘಾಟಿಸಿ ಮಾಹಿತಿ ನೀಡಿದರು.
ಅನ್ವರ್ ಓಝೋನ್, ಶಾಮಪ್ರಸಾದ್ ಮಾನ್ಯ, ಸಿರಾಜ್ ಮೊಹಮ್ಮದ್, ಸಿದ್ದೀಕ್, ಎಂ.ಬಿ.ಮೊಹಮ್ಮದ್ ಕುಂಞÂ, ಹನೀಪ್ ಮೊದಲಾದವರು ಈ ಸಂದರ್ಭ ಉಪಸ್ಥಿತರಿದ್ದರು.

