ಚುನಾವಣೆ: ಪೂರ್ಣಪ್ರಮಾಣದಲ್ಲಿ ಹಸುರು ಸಂಹಿತೆ ಪಾಲನೆಗೆ ನಿರ್ಧಾರ
0
ಮಾರ್ಚ್ 14, 2019
ಕಾಸರಗೋಡು: ಲೋಕಸಭೆ ಚುನಾವಣೆಯಲ್ಲಿ ಪೂರ್ಣಪ್ರಮಾಣದಲ್ಲಿ ಹಸುರು ಸಂಹಿತೆ ಪಾಲಿಸಲು ಸರ್ವಪಕ್ಷ ಪ್ರತಿನಿಧಿಗಳ ಮತ್ತು ಸಿಬ್ಬಂದಿ ಸಭೆ ನಿರ್ಧರಿಸಿದೆ.
ಜಿಲ್ಲಾಧಿಕಾರಿ ಕಚೇರಿಯಲ್ಲಿ ಗುರುವಾರ ನಡೆದ ಸಭೆಯಲ್ಲಿ ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ಅವರು ಅಧ್ಯಕ್ಷತೆ ವಹಿಸಿದ್ದರು.
ಹೈಕೋರ್ಟ್ ನ ತೀರ್ಪಿನ ಹಿನನೆಲೆಯಲ್ಲಿ ಫ್ಲೆಕ್ಸ್ ಬೋರ್ಡ್ ಗೆ ಈ ಹಿಂದೆಯೇ ನಿಷೇಧ ಹೇರಲಾಗಿದೆ. ಇದರೊಂದಿಗೆ ಜಿಲ್ಲೆಯ ಎಲ್ಲ ಮತಗಟ್ಟೆಗಳಲ್ಲೂ ಹಸುರು ಸಂಹಿತೆ ಪಾಲಿಸಲಾಗುವುದು ಎಂದು ಸಭೆ ತಿಳಿಸಿದೆ.
ಕುಡಿಯುವ ನೀರು ಸಂಗ್ರಹ, ಬ್ಯಾನರ್, ಭಿತ್ತಿಪತ್ರ, ಪೇಪರ್ ಪೆನ್, ಪೆನ್ ಸಿಲ್, ಕಾಗದದ ಗುರುತುಚೀಟಿ ಇತ್ಯಾದಿಗಳಿಗೆ ಪ್ರಕೃತಿಗೆ ನಿಕಟವಾಗಿರುವ ಕ್ರಮ ಕೈಗೊಳ್ಳಲಾಗುವುದು. ಡಿಸ್ಪೋಸಿಬಲ್ ವಸ್ತುಗಳನ್ನು ಪೂರ್ಣಪ್ರಮಾಣದಲ್ಲಿ ಕೈಬಿಟ್ಟು, ಊಟಕ್ಕೆ ಬಾಳೆ ಎಲೆ, ಸ್ಟೀಲ್ ಪಾತ್ರೆ, ಗಾಜಿನ ಲೋಟ ಇತ್ಯಾದಿ ಬಳಸಲಾಗುವುದು. ಪ್ರಚಾರ ಅಂಗವಾಗಿ ಅಲಂಕಾರ, ತೋರಣ ಇತ್ಯಾದಿಗಳಿಗೂ ಪ್ರಕೃತಿ ಸೌಹಾರ್ದ ವಸ್ತುಗಳ ಬಳಕೆಗೆ ನಿರ್ಧರಿಸಲಾಗಿದೆ.




