ಅಲ್ಪಸಂಖ್ಯಾತ ಆಯೋಗ ಸಭೆ
0
ಮಾರ್ಚ್ 14, 2019
ಕಾಸರಗೋಡು: ಅಲ್ಪಸಂಖ್ಯಾತ ಆಯೋಗದ ಅಹವಾಲು ಸ್ವೀಕಾರ ಸಭೆ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಜರುಗಿತು.
ಸಭೆಯಲ್ಲಿ 16 ದೂರುಗಳನ್ನು ಪರಿಶೀಲಿಸಲಾಗಿದ್ದು, ಎರಡು ಅಹವಾಲುಗಳಿಗೆ ತೀರ್ಪು ನೀಡಲಾಗಿದೆ. ಎಡಯನ್ನೂರು ಮಹಲ್ ಸಮಿತಿಯ ಮಹಾಸಭೆ ನಡೆಸಲಾಗುವುದಿಲ್ಲ, ಹಣಕಾಸಿನ ವಂಚನೆ ನಡೆಸಲಾಗಿದೆ ಎಂಬ ದೂರಿನ ಹಿನ್ನೆಲೆಯಲ್ಲಿ ಈ ಕುರಿತು ತನಿಖೆ ನಡೆಸಿ ವರದಿ ಸಲ್ಲಿಸುವಂತೆ ವಕ್ಫ್ ಮಂಡಳಿಗೆ ಸಭೆ ತಿಳಿಸಿದೆ. ಸ್ವಂತ ಜಾಗದಲ್ಲಿ ಕುಡಿಯುವ ನೀರಿಗಾಗಿ ಕೊಳವೆ ಬಾವಿ ನಿರ್ಮಾಣಕ್ಕೆ ಪಂಚಾಯತ್ ಅಧಿಕಾರಿಗಳು,ಕೆಲ ಖಾಸಗಿ ವ್ಯಕ್ತಿಗಳೂ ತಡೆಮಾಡುತ್ತಿದ್ದಾರೆ ಎಂಬ ಕಣ್ಣೂರು ಚಕ್ಕರಕಲ್ಲು ನಿವಾಸಿ ಮಹಿಳೆಯೊಬ್ಬರು ನೀಡಿದ ದೂರಿನ ಹಿನ್ನೆಲೆಯಲ್ಲಿ ಕಾನೂನು ರೀತಿಯ ಕ್ರಮಕೈಗೊಳ್ಳುವಂತೆ ಚೆಂಬಿಲೋಡ್ ಪಂಚಾಯತ್ ಗೆ ಸಭೆ ಆದೇಶ ನೀಡಿದೆ.
ಈ ಸಂದರ್ಭ 14 ದೂರುಗಳನ್ನು ಮುಂದಿನ ಸಭೆಯಲ್ಲಿ ಪರಿಶೀಲಿಸಲಾಗುವುದು ಎಂದು ಸಭೆ ತಿಳಿಸಿದೆ. ಆಯೋಗ ಸದಸ್ಯ ನ್ಯಾಯವಾದಿ ಮಹಮ್ಮದ್ ಫೈಝಲ್ ಸಭೆಯ ನೇತೃತ್ವ ವಹಿಸಿದ್ದರು.




