ಚುನಾವಣೆ: ಜಿಲ್ಲಧಿಕಾರಿಗಳಿಂದ ಮತಗಟ್ಟೆ ಸಂದರ್ಶನ
0
ಮಾರ್ಚ್ 14, 2019
ಕಾಸರಗೋಡು: ಲೋಕಸಭೆ ಚುನಾವಣೆ ಸಿದ್ಧತೆ ಅಂಗವಾಗಿ ಜಿಲ್ಲೆಯ 16 ಮತಗಟ್ಟೆಗಳಿಗೆ ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ಸಂದರ್ಶನ ನಡೆಸಿದರು.
ಮೂಲಭೂತ ಸೌಲಭ್ಯಗಳ ಪರಿಶೀಲನೆ, ಸಂಬಂಧಪಟ್ಟ ಸಿಬ್ಬಂದಿಗೆ ಮಾರ್ಗದರ್ಶನ ಇತ್ಯಾದಿ ಉದ್ದೇಶಗಳಿಂದ ಅವರು ಈ ಸಂದರ್ಶನ ನಡೆಸಿದರು.
ಮಂಜೇಶ್ವರ ತಾಲೂಕಿನ ಧರ್ಮತ್ತಡ್ಕ ಶ್ರೀ ದುರ್ಗಾಪರಮೇಶ್ವರಿ ಪ್ರೌಢಶಾಲೆ(ಬೂತ್ ನಂಬ್ರ 161,162), ಕಾನತ್ತಿಲ ಅನುದಾನಿತ ಕಿರಿಯ ಪ್ರಾಥಮಿಕ ಶಾಲೆ(163), ಪುತ್ತಿಗೆ ಗ್ರಾಮಪಚಾಯತ್ ನ ಅನುದಾನಿತ ಕಿರಿಯ ಬುನಾದಿ ಶಾಲೆ(167,168,169,170) ಶೇಣಿ ಶ್ರೀ ಶಾರದಾಂಬಾ ಪ್ರೌಢಶಾಲೆ(187,188), ಉಳಿಯತ್ತಡ್ಕ ಸರಕಾರಿ ವೆಲ್ಪೇರ್ ಕಿರಿಯ ಪ್ರಾಥಮಿಕ ಶಾಲೆ ಸಿರಿಬಾಗಿಲು(32,33,34,35), ಧರ್ಭೆತ್ತಡ್ಕ ಸಂತ ಬಾರ್ತಲೋಮ ಅನುದಾನಿತ ಬುನಾದಿ ಶಾಲೆ ಬೇಳ(64,65,66) ಎಂಬಲ್ಲಿಗೆ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದರು.




