ಶಾರದಾ ಮರಾಟಿ ಸಮಾಜ ಸೇವಾ ಸಂಘದ ನೂತನ ಪದಾಧಿಕಾರಿಗಳ ಆಯ್ಕೆ
0
ಮಾರ್ಚ್ 07, 2019
ಪೆರ್ಲ: ಪೆರ್ಲ ಶ್ರೀ ಶಾರದಾ ಮರಾಟಿ ಸಮಾಜ ಸೇವಾ ಸಂಘ ಇದರ ಕಾರ್ಯಕಾರಿ ಸಮಿತಿ ಸಭೆಯು ಮರಾಟಿ ಬೋರ್ಡಿಂಗ್ಸ್ ಹಾಲ್‍ನಲ್ಲಿ ಇತ್ತೀಚೆಗೆ ಜರಗಿತು. ಸಭೆಯಲ್ಲಿ 2019-20ನೇ ಸಾಲಿನ ನೂತನ ಪದಾ„ಕಾರಿಗಳ ಆಯ್ಕೆ ಮಾಡಲಾಯಿತು. ಸಂಘದ ನೂತನ ಅಧ್ಯಕ್ಷರಾಗಿ ಡಾ.ಬಿ.ಜಿ.ನಾಯ್ಕ ಬಾಳೆಗುಳಿ ಅವರನ್ನು ಅವಿರೋಧವಾಗಿ ಆಯ್ಕೆ ಮಾಡಲಾಯಿತು. ಇವರು ಈ ಹಿಂದೆ ಭಾರತ ಸರಕಾರದ ಕೃಷಿ ಇಲಾಖೆಯ ಎನ್‍ಪಿಪಿಟಿಐ ಮತ್ತು ಎನ್‍ಐಪಿಎಚ್‍ಎಂ ಹೈದರಾಬಾದ್‍ನ ನಿರ್ದೇಶಕರಾಗಿ ಕಾರ್ಯನಿರ್ವಹಿಸಿ ಸದ್ಯ ನಿವೃತ್ತಿ ಜೀವನವನ್ನು ಸಮಾಜ ಸೇವೆಯಲ್ಲಿ ಕಳೆಯುತ್ತಿದ್ದಾರೆ.
ಸಂಘದ ಕಾರ್ಯದರ್ಶಿಯಾಗಿ ರಾಜಗೋಪಾಲ್ ನಾಯ್ಕ ಬದಿಯಡ್ಕ, ಕೋಶಾಧಿಕಾರಿಯಾಗಿ ಜಗದೀಶ್ ನಾಯ್ಕ ನಲ್ಕ, ಉಪಾಧ್ಯಕ್ಷರಾಗಿ ಗೋಪಿಕೃಷ್ಣ ಬದಿಯಡ್ಕ, ಜೊತೆ ಕಾರ್ಯದರ್ಶಿ ಪರಮೇಶ್ವರ ನಾಯ್ಕ ನಲ್ಕ ಮತ್ತು ಸಂಘಟನಾ ಕಾರ್ಯದರ್ಶಿಯಾಗಿ ದಯಾನಂದ ಪಟೇಲ್ ಬಾಳೆಗುಳಿ ಅವಿರೋಧವಾಗಿ ಆಯ್ಕೆಗೊಂಡರು. ಕಾರ್ಯಕ್ರಮದಲ್ಲಿ ಸಂಘದ ಮುಂದಿನ ಯೋಜನೆಗಳನ್ನು ನೂತನ ಅಧ್ಯಕ್ಷರು ವಿವರಿಸಿದರು. ಆನಂದ ನಾಯ್ಕ ಬಿಡಾರ ಸ್ವಾಗತಿಸಿ, ಕಾರ್ಯದರ್ಶಿ ರಾಜಗೋಪಾಲ್ ನಾಯ್ಕ ಬದಿಯಡ್ಕ ವಂದಿಸಿದರು.




