ಇಂದಿನಿಂದ ಪಿಲಿಕುಂಡ ದೈವಸ್ಥಾನದಲ್ಲಿ ಪುನರ್ ಪ್ರತಿಷ್ಠಾ ಬ್ರಹ್ಮಕಲಶ ಆರಂಭ
0
ಮಾರ್ಚ್ 07, 2019
ಮಂಜೇಶ್ವರ: ಕೊಡ್ಲಮೊಗರು ಕೂಟೇಲು ಪಿಲಿಕುಂಡ ಶ್ರೀ ವಾರಾಹೀ ದೈವಸ್ಥಾನದ ನೂತನ ಗರ್ಭಗುಡಿಯ ಪುನರ್ ಪ್ರತಿಷ್ಠಾ ಬ್ರಹ್ಮಕಲಶ ಹಾಗೂ ನೇಮೋತ್ಸವವು ಮಾ.8ರಿಂದ 11ರ ವರೆಗೆ ವಿವಿಧ ವೈದಿಕ, ಧಾರ್ಮಿಕ, ಸಾಂಸ್ಕøತಿಕ ಕಾರ್ಯಕ್ರಮಗಳೊಂದಿಗೆ ಜರಗಲಿದೆ.
ಬ್ರಹ್ಮಶ್ರೀ ಪೆÇಳ್ಳಕಜೆ ಗೋವಿಂದ ಭಟ್ ಅವರ ನೇತೃತ್ವದಲ್ಲಿ ತಂತ್ರಿವರ್ಯ ಬ್ರಹ್ಮಶ್ರೀ ವರ್ಕಾಡಿ ಹೊಸಮನೆ ರಾಜೇಶ್ ತಾಳಿತ್ತಾಯರ ಅಮೃತ ಹಸ್ತಗಳಿಂದ ಪವಿತ್ರಪಾಣಿ ಪಾತೂರುಬೀಡು ಕುಶಲಕುಮಾರ ಪಾತೂರಾಯರ ದಿವ್ಯ ಉಪಸ್ಥಿತಿಯಲ್ಲಿ ಕೊಡ್ಲಮೊಗರು ಮನೆತನದವರನ್ನೂ ಮುಂದಿಟ್ಟುಕೊಂಡು ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಮಹೋತ್ಸವದ ಅಂಗವಾಗಿ ಇತ್ತೀಚೆಗೆ ಕೋಳಿಗುಂಟ ಮತ್ತು ಗೊನೆ ಮುಹೂರ್ತ ನಡೆಯಿತು.
ಕಾರ್ಯಕ್ರಮದ ಅಂಗವಾಗಿ ಮಾ.8ರಂದು ಬೆಳಿಗ್ಗೆ 9ಗಂಟೆಗೆ ಚಪ್ಪರ ಮುಹೂರ್ತ, ಮಾ.9ರಂದು ಬೆಳಗ್ಗೆ 11 ಗಂಟೆಗೆ ಉಗ್ರಾಣ ಮುಹೂರ್ತ ನಡೆಯಲಿದ್ದು, ಇದರ ಅಂಗವಾಗಿ ಬೆಳಿಗ್ಗೆ 9ಗಂಟೆಗೆ ಕೋಳ್ಯೂರು ಶ್ರೀ ಶಂಕರನಾರಾಯಣ ದೇವಸ್ಥಾನದಿಂದ ಹಸಿರುವಾಣಿ ಹೊರೆಕಾಣಿಕೆ ಮೆರವಣಿಗೆ ಆಗಮಿಸಲಿದೆ. ಸಂಜೆ 5ಕ್ಕೆ ತಂತ್ರಿವರ್ಯರ ಆಗಮನ, 6ಕ್ಕೆ ವಿವಿಧ ವೈದಿಕ ಕಾರ್ಯಕ್ರಮ ಆರಂಭವಾಗಲಿದೆ.
ಮಾ.10ರಂದು ಪ್ರಾತ:ಕಾಲ 5ರಿಂದ ಮಹಾಗಣಪತಿ ಹೋಮ, ಬ್ರಹ್ಮಕಲಶ ಪೂಜೆ, ವೈದಿಕ ಕಾರ್ಯಕ್ರಮ, ಬೆಳಿಗ್ಗೆ 7.53ರ ಮೀನ ಲಗ್ನ ಶುಭಮುಹೂರ್ತದಲ್ಲಿ ದೈವಗಳ ಪ್ರತಿಷ್ಠಾ ಬ್ರಹ್ಮಕಲಶಾಭಿಷೇಕ, ಅಶ್ವತ್ಥ ನಾರಾಯಣ ಕಟ್ಟೆಯಲ್ಲಿ ಸಾನಿಧ್ಯ ಕಲಶಾಭಿಷೇಕ ಪೂಜೆ, 11.30ಕ್ಕೆ ದೈವಗಳಿಗೆ ಮಹಾಪೂಜೆ, ಮಧ್ಯಾಹ್ನ 1ರಿಂದ ಅನ್ನ ಸಂತರ್ಪಣೆ, ಅಪರಾಹ್ನ 2.30ಕ್ಕೆ ನಡೆಯುವ ಧಾರ್ಮಿಕ ಸಭೆಯಲ್ಲಿ ತಂತ್ರಿವರ್ಯ ಬ್ರಹ್ಮಶ್ರೀ ವರ್ಕಾಡಿ ಹೊಸಮನೆ ರಾಜೇಶ್ ತಾಳಿತ್ತಾಯ ದೀಪಬೆಳಗಿಸುವರು. ಬ್ರಹ್ಮಶ್ರೀ ಪೆÇಳ್ಳಕಜೆ ಗೋವಿಂದ ಭಟ್ ಅಧ್ಯಕ್ಷತೆ ವಹಿಸುವರು. ವೇದಮೂರ್ತಿ ವಿದ್ವಾನ್ ರಾಮ ಭಟ್ ಬೋಳಂತೋಡಿ ಧಾರ್ಮಿಕ ಭಾಷಣ ಮಾಡುವರು. ಪಾತೂರುಬೀಡು ಕುಶಲಕುಮಾರ ಪಾತೂರಾಯ, ಜ್ಯೋತಿಷಿ ಶಶಿಧರ ಭಟ್ ಕುಂಟಿಕಾನ, ರವಿಶಂಕರ ಹೊಳ್ಳ ಕೋಳ್ಯೂರು, ಮಹೇಶ್ ಭಟ್ ಕೊರತಿಗುಂಡಿ, ಕೆ.ಮಹಾಬಲೇಶ್ವರ ಭಟ್ ನೂಜಿ, ಮತ್ತಿತರರು ಉಪಸ್ಥಿತರಿರುವರು.
ಇದೇ ಸಂದರ್ಭದಲ್ಲಿ ವಿವಿಧ ವಲಯಗಳ ಸಾಧಕರಿಗೆ ಗೌರವಾರ್ಪಣೆಯನ್ನು ಆಯೋಜಿಸಲಾಗಿದೆ. ಸಂಜೆ 6ಕ್ಕೆ ಶಾಂಭವಿ ವಿಜಯ ಎಂಬ ಕಥಾಭಾಗದ ಯಕ್ಷಗಾನ ತಾಳಮದ್ದಳೆ, ರಾತ್ರಿ 7.30ಕ್ಕೆ ನೃತ್ಯ ವೈಭವ, 8ಕ್ಕೆ ಕೊಡ್ಲಮೊಗರುವಿನಿಂದ ಶ್ರೀ ದೈವಗಳ ಭಂಡಾರ ಆಗಮನ, ಅನ್ನ ಸಂತರ್ಪಣೆ ನಂತರ ಮಾಸ್ಟರ್ ಮೀಯಪದವು ಅಭಿನಯಿಸುವ, ಯೋಗೀಶ್ ರಾವ್ ಚಿಗುರುಪಾದೆ ರಚಿಸಿರುವ ದಿನೇಶ್ ಅತ್ತಾವರ ನಿರ್ದೇಶನದ ಉಳ್ಳಾಲ ರಾಣಿ ಅಬ್ಬಕ್ಕ ದೃಶ್ಯ ರೂಪಕ ಪ್ರದರ್ಶನಗೊಳ್ಳಲಿದೆ.
ಮಾ.11ರಂದು ಬೆಳಿಗ್ಗೆ 10ಕ್ಕೆ ಶ್ರೀ ಮಲರಾಯ ದೈವದ ನೇಮ, ರಾತ್ರಿ 9ಕ್ಕೆ ಗೌರವ ವಂದನಾರ್ಪಣೆ ನಡೆಯಲಿದ್ದು , ಕೊಡ್ಲಮೊಗರುಗುತ್ತು ತಿಮ್ಮ ಭಂಡಾರಿ ಯಾನೆ ಪ್ರತಾಪ ಶೆಟ್ಟಿ ಅಧ್ಯಕ್ಷತೆ ವಹಿಸುವರು. ಬಂಟು ಶೆಟ್ಟಿ ಯಾನೆ ಶೇಖರ ಶೆಟ್ಟಿ ಕೊಡ್ಲಮೊಗರು, ರಾಮಯ್ಯ ನಾಯ್ಕ್ ಯಾನೆ ಪುಷ್ಪರಾಜ್ ನಾಯ್ಕ್ ತುಪ್ಪೆ , ರಾಜ ಬೆಳ್ಚಪ್ಪಾಡ, ಶಂಕರ ಕುಂಜತ್ತೂರು, ಕೃಷ್ಣ ಜಿ.ಮಂಜೇಶ್ವರ, ಸೀತಾರಾಮ ಮಂಜೇಶ್ವರ, ವಿಶ್ವನಾಥ ಗೌಡ ಉಪಸ್ಥಿತರಿರುವರು. ಈ ವೇಳೆ ವಿವಿಧ ರಂಗದ ಗಣ್ಯರಿಗೆ ಗೌರವಾರ್ಪಣೆ ನಡೆಯಲಿದೆ. ರಾತ್ರಿ 11.30ರಿಂದ ರಂಗ್‍ದ ಕಲಾವಿದೆರ್ ಗುರುಪುರ ಅಭಿನಯಿಸುವ ನಂಬ್ಯೆರ್ಲತ್ತ್ ಬುಡಿಯೆರ್ಲತ್ತ್ ಎಂಬ ತುಳು ನಾಟಕ ಬಳಿಕ ಶ್ರೀ ಪಿಲಿಚಾಮುಂಡಿ ದೈವದ ಒಲಸರಿ ನೇಮೋತ್ಸವ ಜರಗಲಿದೆ.
ಮಾ.14ರಂದು ರಾತ್ರಿ 7ರಿಂದ ದೈವಸ್ಥಾನದ ಅಂಗಣದಲ್ಲಿ ಸಾರ್ವಜನಿಕ ಶ್ರೀ ಸತ್ಯಗಣಪತಿ ಪೂಜೆ ನೆರವೇರಲಿದೆ.




