ನಾಳೆ ವರ್ಕಾಡಿಯಲ್ಲಿ ಮಾವೇಲಿ ಸ್ಟೋರ್ ಉದ್ಘಾಟನೆ
0
ಮಾರ್ಚ್ 09, 2019
ಮಂಜೇಶ್ವರ: ವರ್ಕಾಡಿಯಲ್ಲಿ ನಾಳೆ(ಮಾ.10) ರಾಜ್ಯ ನಾಗರೀಕ ಪೂರೈಕೆ ನಿಗಮದ ಸಪ್ಲೈ ಕೋ ಮಾವೇಲಿ ಸ್ಟೋರ್ ಉದ್ಘಾಟನೆಗೊಳ್ಳಲಿದೆ.
ಬೆಳಿಗ್ಗೆ 11 ಗಂಟೆಗೆ ನಡೆಯುವ ಸಮಾರಂಭದಲ್ಲಿ ರಾಜ್ಯ ಕಂದಾಯ ಸಚಿವ ಇ.ಚಂದ್ರಶೇಖರನ್ ಉದ್ಘಾಟಿಸುವರು. ವರ್ಕಾಡಿ ಗ್ರಾಮಪಂಚಾಯತಿ ಅಧ್ಯಕ್ಷ ಅಬ್ದುಲ್ ಮಜೀದ್.ಬಿ.ಎ. ಅಧ್ಯಕ್ಷತೆ ವಹಿಸುವರು. ಮಂಜೇಶ್ವರ ಬ್ಲಾಕ್ ಪಂಚಾಯತಿ ಅಧ್ಯಕ್ಷ ಎ.ಕೆ.ಎಂ.ಅಶ್ರಫ್ ಪ್ರಥಮ ಮಾರಾಟ ನಡೆಸುವರು.
ಜಿಲ್ಲಾ ಪಂಚಾಯತಿ ಅಭಿವೃದ್ಧಿ ಸ್ಥಾಯೀ ಸಮಿತಿ ಅಧ್ಯಕ್ಷ ಹರ್ಷಾದ್ ವರ್ಕಾಡಿ, ವರ್ಕಾಡಿ ಗ್ರಾಮಪಂಚಾಯತಿ ಉಪಾಧ್ಯಕ್ಷೆ ಸುನಿತಾ ಡಿಸೋಜಾ, ಮಂಜೇಶ್ವರ ಬ್ಲಾಕ್ ಪಂಚಾಯತಿ ಕಲ್ಯಾಣ ಸ್ಥಾಯೀ ಸಮಿತಿ ಅಧ್ಯಕ್ಷೆ ಫಾತಿಮತ್ ಸುಹರಾ, ವರ್ಕಾಡಿ ಗ್ರಾಮಪಂಚಾಯತಿ ಅಭಿವೃದ್ಧಿ ಸ್ಥಾಯೀ ಸಮಿತಿ ಅಧ್ಯಕ್ಷೆ ರಹಮತ್ ರಝಾಕ್, ಕಲ್ಯಾಣ ಸ್ಥಾಯೀ ಸಮಿತಿ ಅಧ್ಯಕ್ಷೆ ತುಳಸೀ ಕುಮಾರಿ, ಆರೋಗ್ಯ-ಶಿಕ್ಷಣ ಸ್ಥಾಯೀ ಸಮಿತಿ ಅಧ್ಯಕ್ಷೆ ಜಸಿಂತಾ ಡಿಸೋಜಾ, ಸದಸ್ಯರಾದ ಅಬ್ದುಲ್ ರಹಮಾನ್ ಹಾರಿಸ್, ಪೂರ್ಣಿಮಾ ಎಸ್.ಬೆರಿಂಜ, ವಸಂತ ವಿ.ಸಾಮಾನಿ, ಮೈಮೂನಾ ಅಹಮ್ಮದ್, ಸೀತಾ ಡಿ., ಕೆ.ಇಂದಿರಾ, ಭಾರತಿ ಎಸ್., ಗೋಪಾಲಕೃಷ್ಣ ಪಜ್ವ, ಸದಾಶಿವ ನಾಯಕ್ ಮಂಟಮೆ, ಆನಂದ ಡಿ., ಕಾರ್ಯದರ್ಶಿ ರಾಜೇಶ್ವರಿ, ವಿವಿಧ ರಾಜಕೀಯ ಪಕ್ಷಗಳ ಪ್ರತಿನಿಧಿಗಳಾದ ಚಂದ್ರಹಾಸ ಶೆಟ್ಟಿ, ಅಬೂಬಕ್ಕರ್ ಸಿದ್ದೀಕ್ ಬಾಟಿ, ಉಮ್ಮರ್ ಬೋರ್ಕಳ, ಮೂಸಾ ಕುಂಞÂ, ಚಂದ್ರಶೇಖರ ಶೆಟ್ಟಿ, ಜಯಪ್ರಕಾಶ್ ಮೊದಲಾದವರು ಉಪಸ್ಥಿತರಿರುವರು.




