ಚುನಾವಣೆ ಪ್ರಚಾರ ಜಾಹೀರಾತು-ಲಿಖಿತ ಒಪ್ಪಿಗೆ ಅಗತ್ಯ
0
ಮಾರ್ಚ್ 15, 2019
ಕಾಸರಗೋಡು: ಚುನಾವಣೆ ಪ್ರಚಾರ ಜಾಹೀರಾತು ಸ್ಥಾಪಿಸುವ ನಿಟ್ಟಿನಲ್ಲಿ ಲಿಖಿತ ಒಪ್ಪಿಗೆ ಪತ್ರ ಅಗತ್ಯ ಎಂದು ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ತಿಳಿಸಿದರು.
ಅವರ ಚೇಂಬರ್‍ನಲ್ಲಿ ನಡೆದ ನೀತಿಸಂಹಿತೆ ಪಾಲನೆಯ ಹೊಣೆಗಾರಿಕೆ ಇರುವ ಸಿಬ್ಬಂದಿ ಸಭೆಯಲ್ಲಿ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಸಾರ್ವಜನಿಕ ಪ್ರದೇಶಗಳಲ್ಲಿ ಅಕ್ರಮವಾಗಿ ಸ್ಥಾಪಿಸಿರುವ ಜಾಹೀರಾತು ಫಲಕಗಳನ್ನು ತೆರವುಗೊಳಿಸಲು ನಿರ್ಧರಿಸಲಾಯಿತು. ಖಾಸಗಿ ಜಾಗದಲ್ಲಿ ಫಲಕ ಸ್ಥಾಪಿಸುವ ವೇಳೆ ಜಾಗದ ಮಾಲೀಕರ ಒಪ್ಪಿಗೆ ಪಡೆಯಲಾಗಿದೆಯೇ ಎಂಬ ಬಗ್ಗೆ ಪರಿಶೀಲನೆ ನಡೆಸಬೇಕು. ಮಾಲೀಕರ ಒಪ್ಪಿಗೆ ಪತ್ರ ಪಡೆಯಬೇಕು. ಅಗತ್ಯವಿದ್ದಾಗ ಚುನಾವಣೆಯ ಅಧಿಕಾರಿಗಳಿಗೆ ಆ ಪತ್ರ ಸಲ್ಲಿಸಬೇಕು ಎಂದು ಸಭೆ ತಿಳಿಸಿದೆ.
ಸಹಾಯಕ ಜಿಲ್ಲಾಧಿಕಾರಿ ಡಿ.ಪಿ.ಅಬ್ದುಲ್ ರಹಮಾನ್, ಚುನಾವಣೆ ಕಿರಿಯ ವರಿಷ್ಠಾಧಿಕಾರಿ ಎಸ್.ಗೋವಿಂದ್, ಆ್ಯಂಟಿ ಡಿಫೇಸ್‍ಮೆಂಟ್ ಟೀಂ ಕೋರ್ಡಿನೇಟರ್ ಪಿ.ಜೆ.ಅಗಸ್ಟಿನ್ ಮೊದಲಾದವರು ಉಪಸ್ಥಿತರಿದ್ದರು.

