ವಿಶ್ವ ಗ್ರಾಹಕರ ಹಕ್ಕು ದಿನಾಚರಣೆ
0
ಮಾರ್ಚ್ 15, 2019
ಕಾಸರಗೋಡು: ವಿಶ್ವ ಗ್ರಾಹಕರ ಹಕ್ಕು ದಿನಾಚರಣೆ ನಗರದ ಸ್ಪೀಡ್ ವೇ ಇನ್ ಸಭಾಂಗಣದಲ್ಲಿ ಶುಕ್ರವಾರ ಜರುಗಿತು.
ಕಾಸರಗೋಡು ಲೀಗಲ್ ಮೆಟ್ರಾಲಜಿ ಇಲಾಖೆ ವತಿಯಿಂದ ನಡೆದ ಸಮಾರಂಭದಲ್ಲಿ ಜಿಲ್ಲಾ ಮಟ್ಟದ ವಿಚಾರಸಂಕಿರಣ ಮತ್ತು ಜನಜಾಗೃತಿ ನಡೆಯಿತು. ಕಾರ್ಯಕ್ರಮವನ್ನು ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ಉದ್ಘಾಟಿಸಿದರು.
ಈ ಸಂಧರ್ಭ ಮಾತನಾಡಿದ ಅವರು "ಟ್ರಸ್ಟೆಡ್ ಸ್ಮಾರ್ಟ್ ಪ್ರಾಜೆಕ್ಟ್" ಎಂಬ ವಿಷಯದಲ್ಲಿ ಮಾ.15ರಂದು ಗ್ರಾಹಕರ ಹಕ್ಕು ಸಂರಕ್ಷಣೆ ದಿನ ಆಚರಿಸುವ ವೇಳೆ ಉತ್ಪನ್ನಗಳ ಗುಣಮಟ್ಟ ಖಚಿತಪಡಿಸುವಿಕೆ ನಡೆಯಬೇಕು. ಗ್ರಾಹಕರನ್ನುಪ್ರಬುದ್ಧ ಗೊಳಿಸುವ ಚಟುವಟಿಕೆಗಳುನಡೆಯಬೇಕು. ಉತ್ಪಾದನೆ,ವಿತರಣೆ, ಮಾರಾಟ ಸಹಿತ ಎಲ್ಲ ಪ್ರಕ್ರಿಯೆಗಳು ಸುಧಾರಿತಗೊಳ್ಳಬೇಕು ಎಂದರು.
ಜಿಲ್ಲಾ ಲೀಗಲ್ ಮೆಟ್ರಾಲಜಿ ಸಹಾಯಕ ನಿಯಂತ್ರಣಾಧಿಕಾರಿ ಪಿ.ಶ್ರೀನಿವಾಸ ಅಧ್ಯಕ್ಷತೆ ವಹಿಸಿದ್ದರು. "ಗ್ರಾಹಕ ಸಂರಕ್ಷಣೆ" ಎಂಬವಿಷಯದಲ್ಲಿ ಜಿಲ್ಲಾ ಗ್ರಾಹಕ ಫಾರಂ ಸದಸ್ಯ ರಾಧಾಕೃಷ್ಣನ್ ನಾಯರ್ ಪ್ರಧಾನ ಭಾಷಣಮಾಡಿದರು. "ಉದ್ದಿಮೆ ಇಲಾಖೆಯ ಆನ್ ಲೈನ್ ಸೇವೆಗಳು ಮತ್ತು ಯೋಜನೆಗಳು" ಎಂಬ ವಿಷಯದಲ್ಲಿ ಕಾಞÂಗಾಡ್ ಉದ್ಯಮ ಅಭಿವೃದ್ಧಿ ಅಧಿಕಾರಿ ಎನ್.ಅಶೋಕ್, "ಲೀಗಲ್ ಮೆಟ್ರಾಲಜಿಯ ಆನ್ ಲೈನ್ ಸೇವೆಗಳು ಮತ್ತು ಯೋಜನೆಗಳು" ಎಂಬ ವಿಷಯದಲ್ಲಿ ಲೀಗಲ್ ಐಟಿ ಮೆನೆಜರ್ ರಾಜೇಶ್, "ಲೀಗಲ್ ಮೆಟ್ರಾಲಜಿ ಕಾನೂನು ಮತ್ತು ಸಂಹಿತೆ" ಎಂಬ ವಿಷಯದಲ್ಲಿ ಲೀಗಲ್ ಮೆಟ್ರಾಲಜಿ ಇನ್ಸ್ ಪೆಕ್ಟರ್ ಎಂ.ರತೀಶ್ ಉಪನ್ಯಾಸ ನಡೆಸಿದರು.
ಅಕ್ಷಯ ಜಿಲ್ಲಾ ಸಂಚಾಲಕ ಕೆ.ಶಾರಿಕಾ, ಮಂಜೇಶ್ವರ ಲೀಗಲ್ ಮೆಟ್ರಾಲಜಿ ಇನ್ಸ್ ಪೆಕ್ಟರ್ ಕೆ.ಶಶಿಕಲಾ, ಲೀಗಲ್ ಮೆಟ್ರಾಲಜಿ ಕ್ಲರ್ಕ್ ಪಿ.ಪಿ.ಲಿಲೇಷ್ ಉಪಸ್ಥಿತರಿದ್ದರು.

