ಇಂದು ಸಭೆ ಕೃಷಿ ನೀರಾವರಿಯ ಸಂಬಂಧದ ಮಹತ್ತರ ಸಭೆ
0
ಮಾರ್ಚ್ 15, 2019
ಕಾಸರಗೋಡು: ಜಿಲ್ಲೆಯ ಕೆಲವೆಡೆ ಜಲಾಶಯಗಳಿಂದ ನೀರನ್ನು ತೋಟಗಳಿಗೆ ಅನಿಯಂತ್ರಿತವಾಗಿ (ಅಕ್ರಮ) ಸರಬರಾಜು ನಡೆಸುತ್ತಿರುವವಿಚಾರದಲ್ಲಿ ವಿಧಾನಸಭಾ ಮಟ್ಟದಲ್ಲಿಮಹತ್ವಿಕೆ ಹೊಂದಿರುವ ರಾಜಕೀಯ ಪಕ್ಷಗಳ ಪ್ರತಿನಿಧಿಗಳ ಸಭೆ ಇಂದು (ಮಾ.16) ಬೆಳಗ್ಗೆ 10.30ಕ್ಕೆ ಜಿಲಾಧಿಕಾರಿ ಡಾ.ಡಿ.ಸಜಿತ್ ಬಾಬು ಅವರ ಛೇಂಬರ್ ನಲ್ಲಿ ನಡೆಯಲಿದೆ.
ಬರಗಾಲ ತೀವ್ರಕೊಳ್ಳುತ್ತಿರುವ ಹಿನ್ನೆಲೆಯಲ್ಲಿ ಜಲಾಶಯಗಳಿಂದ ತೆಂಗು, ಅಡಕೆ ತೋಟಗಳಿಗೆ ಅನಿಯಂತ್ರಿತವಾಗಿ ನೀರು ಪಂಪಿಂಗ್ ನಡೆಸುವಕ್ರಮಕ್ಕೆ ತಡೆಮಾಡುವ ಉದ್ದೇಶದಿಂದ ಮೇಲಕ್ಕೆ-ಕೆಲಕ್ಕೆ 500 ಮೀಟರ್ ದೂರದಲ್ಲಿ ಪಂಪಿಂಗ್ ನಡೆಸುವ ನಿಟ್ಟಿನಲ್ಲಿ ಒದಗಿಸಲಾದ ವಿದ್ಯುತ್ ಸಂಪರ್ಕ ಕಡಿತಗೊಳಿಸಲಾಗುವುದು ಎಂದು ಜಿಲ್ಲಾಧಿಕಾರಿ ಆದೇಶ ನೀಡಿದ್ದರು. ಈ ಆದೇಶ ವಿರುದ್ಧ ವಿವಿಧ ಕೃಷಿಕಸಂಘಟನೆಗಳು ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿರುವ ಹಿನ್ನೆಲೆಯಲ್ಲಿ ಈ ಸಂಬಂಧ ಮಾತುಕತೆ ನಡೆಸುವ ನಿಟ್ಟಿನಲ್ಲಿ ಈ ಸಭೆ ನಡೆಸಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ತಿಳಿಸಿರುವರು.

