ಮಧೂರಿನಲ್ಲಿ ಲೈಫ್ ಭವನ ಯೋಜನೆ ಉದ್ಘಾಟನೆ
0
ಮಾರ್ಚ್ 10, 2019
ಮಧೂರು: ಮಧೂರು ಗ್ರಾಮ ಪಂಚಾಯತಿಯಲ್ಲಿ ರಾಜ್ಯ ಸರಕಾರದ ಲೈಫ್ ಭವನ ಯೋಜನೆಯ ಮುಖಾಂತರ ನಿರ್ಮಾಣ ಪೂರ್ಣಗೊಳಿಸಿದ ಮೊದಲ ಮನೆಯನ್ನು ಮಾಯಿಪ್ಪಾಡಿಯಲ್ಲಿ ಪಾರೆಕಟ್ಟದ ಹರಿಣಿ ಅವರಿಗೆ ಮನೆಯ ಕೀಲಿಕೈಯನ್ನು ಹಸ್ತಾಂತರಿಸುವ ಮೂಲಕ ಮಧೂರು ಗ್ರಾಮ ಪಂಚಾಯತಿ ಅಧ್ಯಕ್ಷೆ ಮಾಲತಿ ಸುರೇಶ್ ಶುಕ್ರವಾರ ಉದ್ಘಾಟಿಸಿದರು.
ಉಪಾಧ್ಯಕ್ಷ ದಿವಾಕರ ಅಧ್ಯಕ್ಷತೆ ವಹಿಸಿದ್ದರು. ಸ್ಥಾಯೀ ಸಮಿತಿ ಅಧ್ಯಕ್ಷ ಅವಿನ್ ಎಸ್.ವಿ, ರತೀಶ್ ಮನ್ನಿಪ್ಪಾಡಿ, ಶ್ರೀಧರ ಕೇಳುಗುಡ್ಡೆ, ಭಾಸ್ಕರ, ಮಜೀದ್ ಪಟ್ಲ, ರಾಧಾಕೃಷ್ಣ ಸೂರ್ಲು ಮೊದಲಾದವರು ಶುಭಹಾರೈಸಿದರು.




