HEALTH TIPS

ಕನ್ನಡ ಶಾಲೆಗಳನ್ನು ಉಳಿಸುವಲ್ಲಿ ಎಲ್ಲರ ಸಹಭಾಗಿತ್ವ ಅಗತ್ಯ-ಪುಂಡರೀಕಾಕ್ಷ ಕೆ.ಎಲ್.

ಕುಂಬಳೆ: ವ್ಯಾಪಕವಾಗಿ ಕನ್ನಡದ ಅವಗಣನೆ ನಡೆಯುತ್ತಿರುವ ವೇಳೆಯಲ್ಲಿ ಶತಮಾನೋತ್ಸವವನ್ನು ಕಂಡ ಶಾಲೆಯ ವಾರ್ಷಿಕೋತ್ಸವವು ಈ ನಾಡಿನ ಉತ್ಸವವಾಗಿದೆ. ಗ್ರಾಮೀಣ ಭಾಗದಿಂದ ದೇಶ ಸೇವೆಗೆ ಅನೇಕ ಪ್ರತಿಭೆಗಳನ್ನು ನೀಡಿದ, ಊರಿನಲ್ಲಿ ಸಂಸ್ಕøತಿಯನ್ನು ಉಳಿಸಿದ ಕನ್ನಡದ ಶಾಲೆಗಳನ್ನು ಮುಂದಿನ ಜನಾಂಗಕ್ಕೆ ನೀಡಬೇಕಾದರೆ ಎಲ್ಲರ ಸಹಭಾಗಿತ್ವ ಅತೀ ಅಗತ್ಯ ಎಂದು ಕುಂಬಳೆ ಗ್ರಾಮಪಂಚಾಯತಿ ಅಧ್ಯಕ್ಷ ಕೆ.ಎಲ್.ಪುಂಡರೀಕಾಕ್ಷ ಹೇಳಿದರು. ಶುಕ್ರವಾರ ನಾರಾಯಣಮಂಗಲ ಅನುದಾನಿತ ಕಿರಿಯ ಪ್ರಾಥಮಿಕ ಶಾಲಾ ವಾರ್ಷಿಕೋತ್ಸವದ ಸಭಾಕಾರ್ಯಕ್ರಮವನ್ನು ದೀಪಬೆಳಗಿಸಿ ಉದ್ಘಾಟಿಸಿ ಅವರು ಮಾತನಾಡಿದರು. ಶಾಲಾ ವ್ಯವಸ್ಥಾಪಕ ಡಾ. ಕೆ.ವಿ.ತೇಜಸ್ವಿ ಸಭೆಯ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿ, ಶಾಲೆಯನ್ನು ಉಳಿಸಿ ಬೆಳೆಸುವ ಮಹತ್ತರವಾದ ಜವಾಬ್ದಾರಿಯನ್ನು ಅರಿತು ನಾವು ಮುಂದುವರಿಯಬೇಕಿದೆ. ಶಾಲೆಯ ಬೆಳವಣಿಗೆಗೆ ಪೂರಕವಾದ ಎಲ್ಲಾ ವ್ಯವಸ್ಥೆಗಳನ್ನೂ ಕೈಗೊಳ್ಳಲಾಗುವುದು. ಊರವರು ತಮ್ಮ ಮಕ್ಕಳನ್ನು ಇಂತಹ ಗ್ರಾಮೀಣ ಶಾಲೆಗಳಿಗೆ ಸೇರಿಸುವ ಮೂಲಕ ಸಹಕರಿಸಬೇಕು ಎಂದರು. ಆರ್ಯ ಕಲಾಭಿವರ್ಧಕ ಸಂಘದ ಅಧ್ಯಕ್ಷ, ಶಾಲಾ ಹಳೆವಿದ್ಯಾರ್ಥಿ ಡಾ.ಸರ್ವೇಶ್ವರ ಭಟ್ ಮಾತನಾಡಿ ಪರೋಪಕಾರೀ ಮನೋಭಾವದಿಂದ ಇತರರ ಜೊತೆ ಸಂತಸದ ಜೀವನವನ್ನು ಕಳೆಯಬೇಕು ಎಂದು ಹೇಳುತ್ತಾ ತನ್ನ ಜನ್ಮದಿನದ ಬಾಬ್ತು ಎಲ್ಲರಿಗೂ ಸಿಹಿತಿಂಡಿ ವಿತರಿಸಿ ತಮ್ಮ ಹಳೆಯ ನೆನಪಿನ ಸುರುಳಿಯನ್ನು ತೆರೆದಿಟ್ಟರು. ಬ್ಲಾಕ್ ಪಂಚಾಯತ್ ಸದಸ್ಯ ಸತ್ಯಶಂಕರ ಭಟ್ ಮಾತನಾಡಿ, ಓರ್ವ ಅಧ್ಯಾಪಕನಿಗೆ ಸಿಗುವಂತಹ ಗೌರವ ಬೇರಾವುದೇ ಉದ್ಯೋಗದಲ್ಲಿ ಲಭಿಸುವುದಿಲ್ಲ. ಮಕ್ಕಳ ಭವಿಷ್ಯವನ್ನು ಭದ್ರಪಡಿಸುವಲ್ಲಿ ಅಧ್ಯಾಪಕರ ಪಾತ್ರ ಮಹತ್ತರವಾಗಿದೆ ಎಂದರು. ಕುಂಬಳೆ ಗ್ರಾಮಪಂಚಾಯತಿ ಸದಸ್ಯ ಮುರಳೀಧರ ಯಾದವ್ ನಾಯ್ಕಾಪು, ಕನ್ನಡ ಹೋರಾಟ ಸಮಿತಿಯ ಉಪಾಧ್ಯಕ್ಷ ಮಹಾಲಿಂಗೇಶ್ವರ ಭಟ್ ಎಂ.ವಿ., ನಿವೃತ್ತ ಮಮುಖ್ಯೋಪಾಧ್ಯಾಯ ನರಹರಿ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದು ಶುಭಹಾರೈಸಿದರು. ಈ ಸಂದರ್ಭದಲ್ಲಿ ಶಾಲೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತರಾಗಲಿರುವ ಅಧ್ಯಾಪಕರುಗಳಾದ ಉಷಾದೇವಿ ಕೆ. ಮತ್ತು ಶಾಲಾ ಮುಖ್ಯೋಪಾಧ್ಯಾಯ ಕೆ. ಗೋಪಾಲಕೃಷ್ಣ ಭಟ್ ಕಬೆಕ್ಕೋಡು ಅವರನ್ನು ಸನ್ಮಾನಿಸಲಾಯಿತು. ಅಧ್ಯಾಪಿಕೆಯರಾದ ಸುಪ್ರೀತಾ, ಜಯಶ್ರೀ ಅಭಿನಂದನಾ ಪತ್ರ ಓದಿದರು. ಕುಂಬಳೆ ಉಪಜಿಲ್ಲಾ ವಿದ್ಯಾಧಿಕಾರಿ ಕೈಲಾಸ ಮೂರ್ತಿ, ಬಿಆರ್‍ಸಿ ತರಬೇತುದಾರೆ ಮೀನಾಕ್ಷಿ, ಶಾಲಾಭಿವೃದ್ದಿ ನಿವೃತ್ತ ಅಧ್ಯಾಪಿಕೆ ಜಯಲಕ್ಷ್ಮೀ, ಹಳೆವಿದ್ಯಾರ್ಥಿ ಸಂಘದ ಪ್ರತಿನಿಧಿ ಜಯಪ್ರಕಾಶ ನಾರಾಯಣಮಂಗಲ, ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಗೋಪಾಲಕೃಷ್ಣ, ಮಾತೃಸಂಘದ ಅಧ್ಯಕ್ಷೆ ಹೇಮಲತ ಶುಭಹಾರೈಸಿದರು. ಶಾಲಾಮುಖ್ಯೋಪಾಧ್ಯಾಯ ಗೋಪಾಲಕೃಷ್ಣ ಕೆ. ಪ್ರಾಸ್ತಾವಿಕ ಮಾತುಗಳನ್ನಾಡಿ ಸ್ವಾಗತಿಸಿದರು. ಆರ್ಯ ಕಲಾಭಿವರ್ಧಕ ಸಂಘದ ಕಾರ್ಯದರ್ಶಿ ಶ್ಯಾಮಪ್ರಸಾದ ಕಬೆಕ್ಕೋಡು ವಂದಿಸಿದರು. ಅಧ್ಯಾಪಿಕೆ ಮೇಬಲ್ ಡಿಸೋಜ ನಿರೂಪಿಸಿದರು. ಬೆಳಿಗ್ಗೆ ಧ್ವಜಾರೋಹಣ, ಶಾಲಾ ಮಕ್ಕಳಿಂದ, ಅಂಗನವಾಡಿ ಚಿಣ್ಣರಿಂದ, ಹಳೆವಿದ್ಯಾರ್ಥಿಗಳಿಂದ ವಿವಿಧ ವಿನೋದಾವಳಿಗಳು ಪ್ರದರ್ಶನಗೊಂಡವು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries