ಕೊಡ್ಲಮೊಗರಿನಲ್ಲಿ ವಿಶ್ವ ಮಹಿಳಾ ದಿನಾಚರಣೆ
0
ಮಾರ್ಚ್ 10, 2019
ಮಂಜೇಶ್ವರ: ಕೊಡ್ಲಮೊಗರು ಗುವೆದಪಡ್ಪು ಪ್ರೇರಣಾ ಸಾರ್ವಜನಿಕ ಗ್ರಂಥಾಲಯದ ನೇತೃತ್ವದಲ್ಲಿ ಶುಕ್ರವಾರ ವಿಶ್ವ ಮಹಿಳಾ ದಿನಾಚರಣೆ ನಡೆಯಿತು.
ಜಯರಾಮ ಕೊಣೆಬೈಲ್ ಅವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಂಜೇಶ್ವರ ತಾಲೂಕು ಲೈಬ್ರರಿ ಕೌನ್ಸಿಲ್ ಸದಸ್ಯೆ ಶ್ರೀಕುಮಾರಿ ಟೀಚರ್ ಉದ್ಘಾಟಿಸಿದರು. ಈ ಸಂದರ್ಭ ಮಾತನಾಡಿದ ಅವರು, ಮಹಿಳೆಯರು ಪ್ರತಿ ಕ್ಷೇತ್ರದಲ್ಲೂ ಸ್ವಾವಲಂಬಿಗಳಾಗುವಲ್ಲಿ ಮುನ್ನಡೆಯಬೇಕು. ಹೆಣ್ಣು ಸುಸಂಸ್ಕøತ ಸಮಾಜ ನಿರ್ಮಾಣದ ಶಿಲ್ಪಿ ಎಂದು ತಿಳಿಸಿದರು. ಸುಗುಣಾ ವಿಜಯ್ ವರ್ಕಾಡಿ ಮುಖ್ಯ ಅತಿಥಿಗಳಾಗಿ ಮಾತನಾಡಿದರು.
ಆಶಾ ಕಾರ್ಯಕರ್ತೆ ಜಮೀಲಾ, ಸರಸ್ವತಿ, ನಾರಾಯಣಿ, ಜೂರ್ ಜಹ್ಹಾ ಉಪಸ್ಥಿತರಿದ್ದರು. ಗ್ರಂಥಾಲಯದ ಕಾರ್ಯದರ್ಶಿ ಅಶೋಕ ಕೊಡ್ಲಮೊಗರು ಸ್ವಾಗತಿಸಿ, ಮಧುಶ್ರೀ ವಂದಿಸಿದರು. ಜಯಶ್ರೀ ಕಾರ್ಯಕ್ರಮ ನಿರೂಪಿಸಿದರು.




