ಪೆರ್ಲ ಸಾಹಿತ್ಯಾಭಿಮಾನಿ ಬಳಗದಿಂದ ಕೇಳು ಮಾಸ್ತರರಿಗೆ ಶ್ರದ್ದಾಂಜಲಿ
0
ಮಾರ್ಚ್ 16, 2019
ಪೆರ್ಲ: ಯುವ ಬರಹಗಾರರಿಗೆ ಮತ್ತು ಪುಸ್ತಕ ಪ್ರೇಮಿಗಳಿಗೆ ಮಾರ್ಗದರ್ಶಿಯಾಗಿ, ಅನೇಕ ಸಾಹಿತ್ಯ ಕೃತಿಗಳ ಅನುವಾದ, ಪತ್ರಿಕೆಗಳಿಗೆ ಸಾಂದರ್ಭಿಕ ಲೇಖನಗಳನ್ನು ನೀಡುವ ಮೂಲಕ ದಿ.ಕೇಳು ಮಾಸ್ತರ್ ಅವರ ಕೊಡುಗೆಗಳಿಗೆ ಗಡಿನಾಡು ಸದಾ ಅಬಾರಿಯಾಗಿರುತ್ತದೆ ಎಮದು ಹಿರಿಯ ಸಾಮಾಜಿಕ ಮುಖಂಡ, ವ್ಯಾಪಾರಿ ವ್ಯವಸಾಯಿ ಏಕೋಪನ ಸಮಿತಿಯ ಜಿಲ್ಲಾ ಪ್ರತಿನಿಧಿ ಅಬ್ದುಲ್ ರಹಮಾನ್ ಪೆರ್ಲ ಅವರು ತಿಳಿಸಿದರು.
ಪೆರ್ಲದ ಸಾಹಿತ್ಯ ಅಭಿಮಾನಿ ಬಳಗದ ನೇತೃತ್ವದಲ್ಲಿ ಶುಕ್ರವಾರ ಸಂಜೆ ಪೆರ್ಲದಲ್ಲಿ ಆಯೋಜಿಸಲಾದ ಸಾಹಿತಿ ದಿ.ಕೇಳು ಮಾಸ್ತರ್ ಅಗಲ್ಪಾಡಿ ಅವರ ಶ್ರದ್ದಾಂಜಲಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಸಭೆಯಲ್ಲಿ ಸಂಸ್ಮರಣಾ ಭಾಷಣಗೈದು ಮಾತನಾಡಿದ ಗಡಿನಾಡ ಕಲಾ ಸಾಂಸ್ಕøತಿಕ ವೇದಿಕೆಯ ಪ್ರಧಾನ ಕಾರ್ಯದರ್ಶಿ ಅಖಿಲೇಶ್ ನಗುಮುಗಂ ಅವರು, ಕೇಳು ಮಾಸ್ತರರ ಸಾಹಿತ್ತಿಕ, ಸಾಂಸ್ಕøತಿಕ ಸೇವೆಗಳು ಜಿಲ್ಲೆಯ ಯುವ ಸಮೂಹಕ್ಕೆ ಮಾರ್ಗದರ್ಶನ ನೀಡುವುದರ ಜೊತೆಗೆ ಇಲ್ಲಿಯ ಕನ್ನಡ ಭಾಷೆ, ಸಂಸ್ಕøತಿಯನ್ನು ಬೆಳೆಸುವಲ್ಲಿ ಬೆಂಬಲ ನೀಡಿದೆ ಎಂದು ತಿಳಿಸಿದರು. ವ್ಯಕ್ತಿ, ವ್ಯಕ್ತಿತ್ವಗಳ ಮೂಲಕ ಸರಳ ಸಜ್ಜನಿಕೆಯವರಾಗಿದ್ದ ಮಾಸ್ತರರು ತಮ್ಮ ಅಧ್ಯಯನ-ಚಿಂತನೆಗಳ ಮೂಲಕ ಗಡಿನಾಡಿನ ಸಾಹಿತ್ಯ, ಸಾಂಸ್ಕøತಿಕ ಕ್ಷೇತ್ರಗಳ ದಾಖಲೀಕರಣದಲ್ಲಿ ಅಳಿಸಲಾರದ ಕೊಡುಗೆಗಳಿಂದ ಸ್ಮರಣೀಯರು ಎಂದು ತಿಳಿಸಿದರು.
ಹಿರಿಯ ಸಾಹಿತಿ ಹರೀಶ್ ಪೆರ್ಲ, ಡಾ.ಎಸ್.ಎನ್.ಭಟ್ ಪೆರ್ಲ,ಶ್ರೀಧರ ಮಾಸ್ತರ್ ಕುಕ್ಕಿಲ, ವಸಂತ ಬಾರಡ್ಕ, ಕೃಷ್ಣ ಮಾಸ್ತರ್ ನೆಲ್ಲಿಕ್ಕಳೆಯ ಮೊದಲಾದವರು ಉಪಸ್ಥಿತರಿದ್ದು ಮಾತನಾಡಿದರು.
ಸುಭಾಶ್ ಪೆರ್ಲ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ರಾಜಾರಾಮ ಶೆಟ್ಟಿ ವಂದಿಸಿದರು.

