ಸ್ವರ್ಗ ಶಾಲೆಯಲ್ಲಿ 'ಗೀತ ಗಾಯನ' ವಿಶೇಷ ಕಾರ್ಯಕ್ರಮ
0
ಮಾರ್ಚ್ 16, 2019
ಪೆರ್ಲ:ಸ್ವರ್ಗ ಸ್ವಾಮಿ ವಿವೇಕಾನಂದ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 'ಗೀತ ಗಾಯನ' ವಿಶೇಷ ಕಾರ್ಯಕ್ರಮ ಗುರುವಾರ ಜರುಗಿತು. ಸಾಹಿತಿ, ಶಿಕ್ಷಕ ವಿ.ಮ.ಭಟ್ ಅಡ್ಯನಡ್ಕ ಅವರು ರಚಿಸಿದ ಹಾಡುಗಳನ್ನು ಸಂಗೀತ ಶಿಕ್ಷಕಿ ಅನುರಾಧ ಅಡ್ಕಸ್ಥಳ ಸುಶ್ರಾವ್ಯವಾಗಿ ಹಾಡಿದರು. ವಿ.ಮ.ಭಟ್ ಅವರು ಮಕ್ಕಳ ಕವನ ಸಂಕಲನ 'ಸಂಗಮ' ಪುಸ್ತಕವನ್ನು ಶಾಲಾ ಗ್ರಂಥಾಲಯಕ್ಕೆ ಕೊಡುಗೆಯಾಗಿ ನೀಡಿದರು.

