ತಾಪ ಶಮನಕ್ಕೆ ಉಚಿತ ಮಜ್ಜಿಗೆ ವಿತರಣೆ
0
ಏಪ್ರಿಲ್ 01, 2019
ಕುಂಬಳೆ: ಕಡು ಬಿಸಿಲಿನ ಆಘಾತದಿಂದ ತತ್ತರಿಸುವ ಜನಸಾಮಾನ್ಯರ ದಾಹ ಶಮನಕ್ಕಾಗಿ ಕುಂಬಳೆ ಪೇಟೆಯಲ್ಲಿ ಉಚಿತ ಮಜ್ಜಿಗೆ ವಿತರಣೆ ಭಾನುವಾರದಿಂದ ಆರಂಭಗೊಂಡಿದೆ.
ತಣಲ್ ಒಕ್ಕೂಟ ಎಂಬ ಸಂಘಟನೆ ಉಚಿತ ಮಜ್ಜಿಗೆ ವಿತರಿಸಲು ಚಾಲನೆ ನೀಡಿದ್ದು, ಕುಂಬಳೆ ಬಸ್ ನಿಲ್ದಾಣದ ಸಮೀಪ ಮಜ್ಜಿಗೆ ವಿತರಣೆ ನಡೆಯುತ್ತಿದೆ.
ಮಜ್ಜಿಗೆ ವಿತರಣೆಯನ್ನು ಮೊಗ್ರಾಲ್ ಸ್ಪೋಟ್ರ್ಸ್ ಕ್ಲಬ್ ಅಧ್ಯಕ್ಷ ಅನ್ವರ ಸದಾತ್ ಅವರು ಹಿರಿಯ ಬ್ಯಾಡ್ಮಿಂಟನ್ ಪಟು ವಿನಯಕುಮಾರ್ ಆರಿಕ್ಕಾಡಿಯವರಿಗೆ ನೀಡುವ ಮೂಲಕ ಉದ್ಘಾಟಿಸಿ ಚಾಲನೆ ನೀಡಿದರು. ಬೇಸಿಗೆ ಕೊನೆಗೊಳ್ಳುವವರೆಗೆ ಅಂದರೆ ಮೇತಿಂಗಳಾತ್ಯಂದ ವರೆಗೆ ಉಚಿತ ಮಜ್ಜಿಗೆ ವಿತರಣೆ ನಡೆಯಲಿದೆ ಎಂದು ಸಂಬಂಧಪಟ್ಟವರು ತಿಳಿಸಿದ್ದಾರೆ.




