HEALTH TIPS

ಮಕ್ಕಳಲ್ಲಿ ಆತ್ಮವಿಶ್ವಾಸವನ್ನು ಬೆಳೆಸುವ ಮೊದಲ ಕಾರ್ಯಕ್ರಮವೇ ಘಟಿಕೋತ್ಸವ : ಡಾ.ಶ್ರೀರಾಜ್ ಐ.ಪಿ.

ಕಾಸರಗೋಡು: ಪುಟ್ಟ ಮಕ್ಕಳ ಆಲೋಚನಾ ಶಕ್ತಿಯನ್ನು ಹಾಗು ಉತ್ಸಾಹವನ್ನು ನಿರುತ್ಸಾಹ ಪಡಿಸದೆ ಧನಾತ್ಮಕವಾಗಿ ಅದನ್ನು ಪರಿವರ್ತಿಸುವ ಸಾಮಥ್ರ್ಯ ಹೆತ್ತವರದ್ದಾಗಿರಬೇಕು. ಹೆತ್ತವರನ್ನು ನೋಡದ ಮಕ್ಕಳನ್ನು ಯಾರಿಂದಲೂ ಸರಿಪಡಿಸಲು ಸಾಧ್ಯವಿಲ್ಲ ಎಂದು ಕುರುಕ್ಷೇತ್ರದಲ್ಲಿ ಶ್ರೀಕೃಷ್ಣನು ಗಾಂಧಾರಿಯಲ್ಲಿ ಅರುಹಿದಂತೆ ಕೌಟುಂಬಿಕ ಕಾರ್ಯಗಳಲ್ಲಿ ಪುಟ್ಟ ಮಕ್ಕಳನ್ನು ಸೇರಿಸಿಕೊಂಡು ಚಿಕ್ಕ ಚಿಕ್ಕ ಜವಾಬ್ದಾರಿಯನ್ನು ಅವರಿಗೂ ನೀಡಬೇಕಾಗಿದೆ ಎಂದು ಕಾಸರಗೋಡು ಹಿರಿಯ ವೈದ್ಯಾಧಿಕಾರಿ ಡಾ.ಶ್ರೀರಾಜ್ ಹೇಳಿದರು. ಅವರು ಚಿನ್ಮಯ ವಿದ್ಯಾಲಯದ ಯು.ಕೆ.ಜಿ. ವಿದ್ಯಾರ್ಥಿಗಳ ಘಟಿಕೋಯತ್ಸವ ಸಮಾರಂಭದಲ್ಲಿ ವಿದ್ಯಾರ್ಥಿಗಳಿಗೆ ಪದವಿ ಪ್ರದಾನಗೈದು ಹೆತ್ತವರನ್ನುದ್ದೇಶಿಸಿ ಮಾತನಾಡಿದರು. ಮೊಬೈಲ್ ಹಾಗು ಕಂಪ್ಯೂಟರಿನ ಮುಂದೆ ಮೌನವಾಗಿ ಮಕ್ಕಳನ್ನು ಕುಳ್ಳಿರಿಸಿದಲ್ಲಿ ಮಕ್ಕಳ ಮೆದುಳಿನ ಚಟುವಟಿಕೆ ನಿಷ್ಕಿೃಯಗೊಳ್ಳುವ ಸಾಧ್ಯತೆಯಿದೆ. ಅವರ ಕೌಶಲಗಳನ್ನು ಉದ್ದೀಪಿಸಲು, ಚಿಂತನಾಶೀಲರನ್ನಾಗಿಸಲು ಹೆತ್ತವರು ಸದಾ ಅವರೊಂದಿಗೆ ಬೆರೆಯಬೇಕು. ಅವರ ಒಡನಾಟದಲ್ಲಿರಬೇಕು. ಅವರನ್ನು ಗದರಿಸದೆ, ದೂಷಿಸದೆ ನಿರ್ಭಯರನ್ನಾಗಿಯೂ, ಆರೋಗ್ಯವಂತರನ್ನಾಗಿಯೂ ಬೆಳೆಸಬೇಕು ಎಂದು ಡಾ.ಶ್ರೀರಾಜ್ ಅವರು ಹೇಳಿದರು. ವಿದ್ಯಾಲಯದ ಅಧ್ಯಕ್ಷ ಸ್ವಾಮಿ ವಿವಿಕ್ತಾನಂದ ಸರಸ್ವತೀಯವರು ಮಾತನಾಡಿ ಯು.ಕೆ.ಜಿ. ವಿಭಾಗದ ಘಟಿಕೋತ್ಸವದ ಅನಿವಾರ್ಯತೆಯನ್ನು ಸಾರಿದವರು ಸ್ವಾಮಿ ಚಿನ್ಮಯಾನಂದರು. ಅವರಲ್ಲಿ ಆತ್ಮವಿಶ್ವಾಸ, ಆತ್ಮಶಕ್ತಿ, ಆತ್ಮಾಭಿಮಾನವನ್ನು ಬೆಳೆಸುವಲ್ಲಿ ಇದು ಪ್ರೇರಣೆಯಾಗಬೇಕು. ಕಲಿಕೆ ಅವರಿಗೆ ವಿನೋದವಾಗಿರಬೇಕು. ಶಾಲೆಯೇ ಅವರ ಮತ್ತೊಂದು ಮನೆಯಂತಿರಬೇಕು. ಇಲ್ಲಿ ಮಕ್ಕಳು ಆ ಅನುಭವವನ್ನು ಹೊಂದುತ್ತಿರುವರು ಎಂದು ಅಭಿಪ್ರಾಯಪಟ್ಟರು. ವಿದ್ಯಾಲಯದ ಪ್ರಾಂಶುಪಾಲ ಬಿ.ಪುಷ್ಪರಾಜ್ ಪ್ರಾಸ್ತಾವಿಕವಾಗಿ ಮಾತನಾಡುತ್ತಾ ಒಂದನೇ ತರಗತಿಗೆ ಸೇರುವ ಮಗು ಯಾವುದೇ ಭಾಷೆಯನ್ನು ಚೆನ್ನಾಗಿ ಮಾತನಾಡಲೂ, ಕೇಳುವ ಕಥೆಗಳನ್ನು ಗ್ರಹಿಸಲೂ ಶಕ್ತರಾಗಿರಬೇಕು. ಹೆತ್ತವರು ಮಕ್ಕಳನ್ನು ಹೆಚ್ಚು ಹೆಚ್ಚು ಮಾತನಾಡಿಸುತ್ತಾ ಸದಾ ಅವರೊಂದಿಗೆ ಸಂವಹನ ನಡೆಸುತ್ತಿದ್ದರೆ ಮಕ್ಕಳಲ್ಲಿ ಕೌಶಲಗಳನ್ನು ಬೆಳೆಸಲು ಸಾಧ್ಯವಾಗುವುದು ಎಂದರು. ಆರುಷಿ ಸ್ವಾಗತಿಸಿ, ನಂದಲಕ್ಷ್ಮಿ ವಂದಿಸಿದರು.

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries