HEALTH TIPS

ಎನ್ ಡಿಎ 2 ಸರ್ಕಾರದಲ್ಲಿ ಉಜ್ವಲ ಯೋಜನೆ ವಿಸ್ತರಣೆ, ಸಣ್ಣ ಎಲ್ ಪಿಜಿ ಭರ್ತಿಗೆ ಅವಕಾಶ

   
     ನವದೆಹಲಿ: ಬಿಜೆಪಿ ಸರ್ಕಾರದ ಫ್ಲಾಗ್ ಶಿಪ್ ಯೋಜನೆಗಳಲ್ಲಿ ಒಂದು ಪ್ರಧಾನ ಮಂತ್ರಿ ಉಜ್ವಲಾ ಯೋಜನೆ. ಎನ್ ಡಿಎ 2 ಸರ್ಕಾರ ಅಧಿಕಾರಕ್ಕೆ ಬಂದ ನಂತರ 100 ದಿನಗಳಿಗೆ ಈ ಯೋಜನೆ ವಿಸ್ತಾರವಾಗಲಿದೆ.
      ಅಲ್ಲದೆ ಸಣ್ಣ ಎಲ್ ಪಿಜಿ ಸಿಲಿಂಡರ್ ಗಳನ್ನು ಬುಕ್ಕಿಂಗ್ ಮಾಡುವ ಸೌಲಭ್ಯವನ್ನು ನೀಡಲಾಗಿದ್ದು ಈ ಮೂಲಕ ಜನರು ನಿಗದಿತವಾಗಿ ಪುನರ್ ಭರ್ತಿ ಮಾಡಿಕೊಳ್ಳಬಹುದು. ಈ ಹಿಂದೆ ಪುನರ್ ಬುಕ್ಕಿಂಗ್ ವೆಚ್ಚ ಹೆಚ್ಚಾಗಿದ್ದರಿಂದ ಬಹುತೇಕ ಫಲಾನುಭವಿಗಳಿಗೆ ಸಿಲಿಂಡರ್ ನ್ನು ಬಳಕೆ ಮಾಡುವ ಸೌಲಭ್ಯವಿರಲಿಲ್ಲ.
     ಬಡವರ್ಗದ ಮಹಿಳೆಯರಿಗೆ ಪ್ರಯೋಜನವಾಗಲು ಗಮನದಲ್ಲಿಟ್ಟುಕೊಂಡು ಕೇಂದ್ರ ಸರ್ಕಾರ ಜಾರಿಗೆ ತಂದಿದ್ದ ಉಜ್ವಲಾ ಯೋಜನೆ ಬಿಜೆಪಿಗೆ ರಾಜಕೀಯವಾಗಿ ಸಹಾಯವಾಗಿತ್ತು. ಈ ಯೋಜನೆಯನ್ನು ಎನ್ ಡಿಎ 2 ಸರ್ಕಾರ ವಿಸ್ತರಿಸಲಿದ್ದು ಸುಮಾರು 80 ಲಕ್ಷಕ್ಕೂ ಅಧಿಕ ಸಿಲಿಂಡರ್ ಗಳನ್ನು ಮುಂದಿನ ಮೂರ್ನಾಲ್ಕು ತಿಂಗಳುಗಳಲ್ಲಿ ವಿತರಣೆ ಮಾಡಲಾಗುತ್ತದೆ. ಇಲ್ಲಿಯವರೆಗೆ ಸುಮಾರು 7.20 ಕೋಟಿ ಎಲ್ ಪಿಜಿ ಸಿಲೆಂಡರ್ ಗಳನ್ನು ಈ ಯೋಜನೆಯಡಿ ವಿತರಿಸಲಾಗಿದೆ.

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries