HEALTH TIPS

ಹಾಲುತ್ಪಾದಕರ ಸಹಕಾರಿ ಸಂಘದ ವಾರ್ಷಿಕ ಮಹಾಸಭೆ

         
     ಬದಿಯಡ್ಕ: ಉತ್ತಮ ಗುಣಮಟ್ಟದ  ಹಾಲಿಗೆ ಹೆಚ್ಚಿನ ಬೇಡಿಕೆ ಇರುವುದರಿಂದ ಹಾಲುತ್ಪಾದಕರು ಗುಣಮಟ್ಟ ಕಾಪಾಡುವತ್ತ ಹೆಚ್ಚಿನ ಗಮನ ಹರಿಸಬೇಕು. ಮನೆಮನೆಯಲ್ಲೂ ಗೋವುಗಳನ್ನು ಸಾಕಿ ಹಾಲು ಮಾರಾಟ ಮಾಡುವ ಮೂಲಕ ಸ್ವಾವಲಂಬಿಗಳಾಗಲು ಸಾಧ್ಯ. ಕಲ್ಪವೃಕ್ಷದಂತೆ ಜನ ಸಾಮಾನ್ಯರ ಬದುಕಿಗೆ ವರದಾನವಾಗಿರುವ ಕಾಮಧೇನುವಿನ ಹಾಲು ಮತ್ತು ಹಾಲುತ್ಪನ್ನಗಳಿಗೆ ಪ್ರಾಮುಖ್ಯತೆ ಇದ್ದು ಮಾರುಕಟ್ಟೆಯಲ್ಲಿ ಹೆಚ್ಚಿನ ಬೆಲೆಗೆ ಮಾರಾಟವಾಗುತ್ತದೆ.  ನಮ್ಮ ಸೊಸೈಟಿಯು ಹಾಲುತ್ಪಾದಕರಿಗೆ ಸೂಕ್ತ ಬೆಲೆ ನೀಡಿ ಹಾಲು ಖರೀದಿ ಮಾಡುವುದರಿಂದ ಹಾಗೂ ಜನರ ಪೆÇ್ರೀತ್ಸಾಹ ಉತ್ತಮ ರೀತಿಯಲ್ಲಿರುವುದರಿಂದ ಇಂದು ಈ ಮಟ್ಟಕ್ಕೆ ತಲುಪಲು ಸಾಧ್ಯವಾಗಿದೆ ಎಂದು ಹಾಲುತ್ಪಾದಕರ ಸಂಘದ ಅಧ್ಯಕ್ಷ ಕೆ.ಎ.ಐತ್ತಪ್ಪ ಶೆಟ್ಟಿ ಹೇಳಿದರು.
      ಆವರು ಬದಿಯಡ್ಕ ಗುರುಸದನದಲ್ಲಿ ಗುರುವಾರ ಜರಗಿದ ಬದಿಯಡ್ಕ ಟೌನ್ ಕ್ಷೀರೋತ್ಪಾದಕ ಸಹಕಾರಿ ಸಂಘದ 2018-19ನೇ ವರ್ಷದ ವಾರ್ಷಿಕ ಮಹಾಸಭೆಯ ಆಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು.
     ಬಿ.ನಿಖಿತ ಶಂಕರ್ ಪ್ರರ್ಥನೆ ಹಾಡಿದರು. ಸಂಘದ ನಿರ್ದೇಶಕ ಸದಾನಂದ ರೈ, ಪದ್ಮಲತಾ ಶೆಟ್ಟಿ, ಮಲ್ಲಿಕಾ ಆರ್.ರೈ ಶುಭಾಶಂಸನೆಗೈದರು. ಸಂಘದ ಕಾರ್ಯದರ್ಶಿ ಸುರೇಖ ಸ್ವಾಗತಿಸಿ, ಕೃಪ ವಂದಿಸಿದರು.
      1998ರಲ್ಲಿ ಸ್ಥಾಪಿಸಲ್ಪಟ್ಟ ಈ ಸಂಘವು, ಕಳೆದ 21 ವರ್ಷಗಳಲ್ಲಿ ಬದಿಯಡ್ಕ ಪಂಚಾಯತಿಯ 7,8,9,10,12 ಮತ್ತು 14ನೇ ವಾರ್ಡುಗಳ ಭಾಗಿಕ ಪ್ರದೇಶಗಳ ಕ್ಷೀರ ಉತ್ಪಾದನಾ ಚಟುವಟಿಕೆಗಳಲ್ಲಿ ಸಂಘದ ಸದಸ್ಯ ಹಾಲು ಉತ್ಪಾದಕ ಬಂಧುಗಳ ನೆರವಿನಲ್ಲಿ ಕಾರ್ಯ ನಿರ್ವಹಿಸುತ್ತಿದೆ. ಸಂಘವು ಈ ಕಾಲಘಟ್ಟದಲ್ಲಿ ಆಡಳಿತೆಯ ಅನುಕೂಲಕ್ಕೆ ಬೇಕಾಗುವ ಕಂಪ್ಯೂಟರ್, ಎನಲೈಸರ್ ಇನ್‍ವರ್ಟರ್, ತೂಕದ ಮಿಷಿನ್ ಒಳಗೊಂಡಂತೆ ಒಟ್ಟು ಸುಮಾರು ರೂ.4 ಲಕ್ಷಗಳಷ್ಟು ಉಪಕರಣಗಳನ್ನು ಖರೀದಿಸಿದ್ದು, ಸಂಘವು ಯಾವುದೇ ಸಾಲ ಯಾ ಇತರ ಆರ್ಥಿಕ ಬಾಧ್ಯತೆಯ ಒತ್ತಡಗಳಿಲ್ಲದೆ, ದೈನಂದಿನ ವಹಿವಾಟಿಗಾಗಿ ಸುಮಾರು ರೂ 3 ಲಕ್ಷಗಳಷ್ಟನ್ನು ಪ್ರತ್ಯೇಕ ಮೀಸಲಿಡಲಾಗಿದೆ. ಮಾತ್ರವಲ್ಲದೇ ಬ್ಯಾಂಕ್ ನಿಕ್ಷೇಪವಾಗಿ ಸುಮಾರು ರೂ 6 ಲಕ್ಷಗಳನ್ನು ಹೊಂದಿದೆ. ಆದರೆ ಸ್ವಂತವಾಗಿ ಒಂದು ಕಟ್ಟಡದ ಕೊರತೆಯಿದ್ದು ಸದ್ಯದಲ್ಲಿಯೇ ಅದು ಕೂಡ ಕೈಗೂಡಬಹುದೆಂಬ ಆತ್ಮವಿಶ್ವಾಸ ಸಂಘಕ್ಕಿದೆ. ಸಂಘವು ಕ್ಷೀರ ವಿಕಸನ ಇಲಾಖೆಗೆ ಸಲ್ಲಿಸಬೇಕಾದ ನಿರ್ದಿಷ್ಟ ಲೆಕ್ಕಪತ್ರಗಳನ್ನು ಸಲ್ಲಿಸುತ್ತಿದೆ. 2018-19ನೇ ಸಾಲಿನ ಕಾಸರಗೋಡು ಬ್ಲಾಕಿನ ಕ್ಷೀರ ಸಂಗಮವನ್ನು ಸಂಘದ ನೇತೃತ್ವದಲ್ಲಿ ಬದಿಯಡ್ಕದಲ್ಲಿ ಯಶಸ್ವಿಯಾಗಿ ನಡೆಸುವ ಅವಕಾಶ ಸಂಘದ ಪಾಲಿಗೆ ದೊರಕಿದೆ.
    ಸಂಘದ ದೈನಂದಿನ ವ್ಯವಹಾರಗಳನ್ನು ಪ್ರಾದೇಶಿಕ ಮಾರಾಟ ಇತ್ಯಾದಿಗಳನ್ನು ಪಾರದರ್ಶಕವಾಗಿಡುವ ನಿಟ್ಟಿನಲ್ಲಿ ಸೊಸೈಟಿಯ ದೈನಂದಿನ ಖರ್ಚು ವೆಚ್ಚಗಳ ಸಂದಾಯ ರಶೀದಿಗಳನ್ನು ಪ್ರತ್ಯೇಕ, ಪ್ರತ್ಯೇಕ ಫೈಲು ರೂಪದಲ್ಲಿ ಶೇಖರಿಸಿಡುವುದು ಮತ್ತು ಬಂದ ಹಣವನ್ನು ದಿನನಿತ್ಯ ಬ್ಯಾಂಕ್ ಲೆಕ್ಕಕ್ಕೆ ಜಮೆ ಮಾಡುವ ವ್ಯವಸ್ಥೆ ಮಾಡಲಾಗಿದೆ. ಸಂಘದ 2018-19ನೇ ವರ್ಷದ ಆಯ-ವ್ಯಯಗಳನ್ನು ಮತ್ತು 2019-20ರ ಬಜೆಟನ್ನು ಪ್ರತ್ಯೇಕ ಪ್ರತ್ಯೇಕವಾಗಿ ಸಭೆಯ ಮುಂದೆ ಮಂಡಿಸಲಾಯಿತು. ಕಾಸರಗೋಡು ಕ್ಷೀರ ವಿಕಸನ ಇಲಾಖೆಯ ಉಪಮಹಾಪ್ರಬಂಧಕರು, ಡೈರಿ ವಿಕಸನ ಆಫೀಸರು, ಕಾಸರಗೋಡು ವಿಭಾಗ ಇಲಾಖೆಯ ಸಂಬಂಧಪಟ್ಟ ಅಧಿಕಾರಿಗಳ ಪೂರ್ಣ ಸಹಕಾರ, ಮಾರ್ಗದರ್ಶನಗಳನ್ನು ನಿಭಾಯಿಸುವ ಮಿಲ್ಮಾ ಸಂಸ್ಥೆಗೂ ಈ ಸಂದರ್ಭದಲ್ಲಿ ಆಭಿನಂದನೆ ಸಮರ್ಪಿಸಲಾಯಿತು.
    ಕಾರ್ಯಕ್ರಮದಲ್ಲಿ 2018-19ರ ಆಡಳಿತ ವರದಿ, ಆಯ-ವ್ಯಯಗಳ ವರದಿ ಮಂಡಿಸಲಾಯಿತು. 2019-20ನೇ ವರ್ಷದ ಬಜೆಟ್ ಮಂಡನೆಯ ಬಳಿಕ ವಿವಿಧ ಕಾರ್ಯ ಚಟುವಟಿಕೆಗಳ ಬಗ್ಗೆ ಚರ್ಚಿಸಲಾಯಿತು.

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries