HEALTH TIPS

ಮಂದಾರ ರಾಮಾಯಣ: ಅದೆ-4- ಕಟೀಲಿನ 6 ಮೇಳಗಳಲ್ಲಿ ಒಂದರಲ್ಲಿ ತುಳು ಪ್ರಸಂಗಗಳನ್ನು ಆಡಬೇಕು- ಸರಪಾಡಿ ಅಶೋಕ ಶೆಟ್ಟಿ


   ಮಂಗಳೂರು: 'ಮಂದಾರ ರಾಮಾಯಣದಂತಹ ಮಹಾನ್ ಗ್ರಂಥಗಳು ತುಳುವಿನಲ್ಲಿ ರಚನೆಯಾಗಿರುವುದು ತುಳುವಿನ ಸಾಹಿತ್ಯ ಶ್ರೇಷ್ಠತೆಯನ್ನು ಎತ್ತಿತೋರಿಸುತ್ತದೆ. ಇಂತಹ ಗ್ರಂಥಗಳ ಉಳಿವಿಗಾಗಿ ನಾವು ಪ್ರಯತ್ನಿಸಬೇಕಾದುದು ನಮ್ಮ ಕರ್ತವ್ಯವಾಗಿದೆ. ತುಳು ಗ್ರಂಥಗಳಲ್ಲಿನ  ಪೌರಾಣಿಕ ಕಥೆಗಳನ್ನು ನಮಗೆ ಸುಲಭವಾಗಿ ಅರ್ಥೈಸಿಕೊಳ್ಳಬಹುದು. ತುಳುನಾಡಿನಲ್ಲಿ ಪೌರಾಣಿಕ ಐತಿಹಾಸಿಕ ಕಥೆಗಳನ್ನು ಜನರಿಗೆ ತಲುಪಿಸುವಲ್ಲಿ ಪ್ರಧಾನ ಪಾತ್ರ ವಹಿಸಿರುವುದು ಯಕ್ಷಗಾನ. ಕಟೀಲು ಕ್ಷೇತ್ರದಿಂದ ನಡೆಸಲ್ಪಡುವ 6 ಮೇಳಗಳಲ್ಲಿ ಒಂದರಲ್ಲಿ ತುಳು ಯಕ್ಷಗಾನವನ್ನು ಪ್ರದರ್ಶಿಸಲು ಮುಂದಾಗಬೇಕು. ದೇವಿಮಹಾತ್ಮೆ ಗಳಂತಹ ಪೌರಾಣಿಕ ಪ್ರಸಂಗಗಳು ತುಳುವಿನಲ್ಲಿ ರಚನೆಯಾಗಿದ್ದರೂ ಮೇಳಗಳು ಇದರ ಪ್ರದರ್ಶನಕ್ಕೆ ಮನ್ನಣೆ ನೀಡದಿರುವುದು ವಿಷಾದವೇ ಸರಿ. ಹಲವಾರು ಬಾರಿ ಮನವಿ ನೀಡಿದರೂ ತುಳು ಪ್ರಸಂಗಗಳ ಪ್ರದರ್ಶನಕ್ಕೆ ಅವಕಾಶ ನೀಡದಿರುವುದು ಬೇಸರದ ವಿಚಾರ. ಮುಂದಿನ ತಿರುಗಾಟದ ಅವಧಿಯಲ್ಲಿ ತುಳು ಪ್ರಸಂಗಗಳ ಪ್ರದರ್ಶನಕ್ಕೆ ಕಟೀಲು ಮೇಳ ಮುಂದಾಗಬೇಕು' ಎಂದು ಪ್ರಸಿದ್ಧ ಯಕ್ಷಗಾನ ಕಲಾವಿದ ಸರಪಾಡಿ ಅಶೋಕ ಶೆಟ್ಟಿ ಅಭಿಪ್ರಾಯಪಟ್ಟರು.
 
      ತುಳು ವಲ್ರ್ಡ್ ಮಂಗಳೂರು ಮತ್ತು ತುಳುವೆರೆ ಕೂಟ ಶಕ್ತಿನಗರ ಇವರ ಸಂಯುಕ್ತ ಆಶ್ರಯದಲ್ಲಿ ಶಕ್ತಿನಗರದ ತುಳುವೆರೆ ಚಾವಡಿಯಲ್ಲಿ ನಡೆಯುತ್ತಿರುವ ಮಂದಾರ ರಾಮಾಯಣ ವಾಚನ ಪ್ರವಚನದ ನಾಲ್ಕನೇ ದಿನದ ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿ ಅವರು ಮಾತನಾಡಿದರು. ಕಾರ್ಯಕ್ರಮದಲ್ಲಿ ಉದ್ಯಮಿಗಳಾದ ಬಸ್ತಿ ದೇವದಾಸ್ ಶೆಣೈ,ಚಂದ್ರಕುಮಾರ್ ಆದಾಯ ತೆರಿಗೆ ಇಲಾಖೆ ಅಧಿಕಾರಿ, ಮಹೇಶ್ ಕೆ ಶಕ್ತಿನಗರ ನಾಗರಿಕ ಸೇವಾ ಯುವಜನ ಸಮಿತಿ, ಪ್ರಕಾಶ್ ಗಟ್ಟಿ ಅಧ್ಯಕ್ಷರು ದೀಪ ಫ್ರೆಂಡ್ಸ್ ಕ್ಲಬ್ ಶಕ್ತಿನಗರ,ಎಸ್.ಸುಧಾಕರ್ ಜೋಗಿ,  ಎನ್. ವಿಶ್ವನಾಥ್ ಮೊದಲಾದವರು ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದರು.
      ಏಳದೆ ಮಂದಾರ ರಾಮಾಯಣ ಕಾರ್ಯಕ್ರಮದ ಸಂಚಾಲಕ ಪ್ರೊ. ಭಾಸ್ಕರ ರೈ ಕುಕ್ಕುವಳ್ಳಿ ಸ್ವಾಗತಿಸಿ, ತುಳು ವಲ್ರ್ಡ್ ಅಧ್ಯಕ್ಷ ಡಾ. ರಾಜೇಶ್ ಆಳ್ವ ವಂದಿಸಿದರು. ಯಕ್ಷಗಾನ ಹಾಸ್ಯ ಕಲಾವಿದ ದಿನೇಶ್ ರೈ ಕಡಬ ಕಾರ್ಯಕ್ರಮ ನಿರೂಪಿಸಿದರು.

           ಮದಿಮೆದ ದೊಂಪ: ಸುಗಿಪು-ದುನಿಪು:
    ಮಂದಾರ ರಾಮಾಯಣ ಪ್ರವಚನ ಸಪ್ತಾಹದ ನಾಲ್ಕನೇ ದಿನದ ಅಂಗವಾಗಿ  ಚತುರ್ಥ ಅಧ್ಯಾಯ 'ಮದಿಮೆದ ದೊಂಪ'ದ ಸುಗಿಪು( ವಾಚನ)ವನ್ನು ಹರೀಶ್ ಶೆಟ್ಟಿ ಸೂಡ ಮತ್ತು ವಿಜಯಲಕ್ಷ್ಮಿ ಕಟೀಲು ನಡೆಸಿದರು. ಪ್ರೊ. ಭಾಸ್ಕರ ರೈ ಕುಕ್ಕುವಳ್ಳಿ.  ದುನಿಪು (ಪ್ರವಚನ) ನಡೆಸಿಕೊಟ್ಟರು.

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries