HEALTH TIPS

ಜು.6 ರಂದು ಬ್ರಾಹ್ಮರಿ ಕಲಾವಿದೆರ್ ಉದ್ಘಾಟನೆ

 
        ಮಂಜೇಶ್ವರ: ನೂತನ ನಾಟಕ ತಂಡವಾದ ಬ್ರಾಹ್ಮರಿ ಕಲಾವಿದೆರ್ ಉಪ್ಪಳ ಇದರ ಉದ್ಘಾಟನಾ ಸಮಾರಂಭ ಹಾಗೂ ತಂಡದ ಕಲಾವಿದರು ಅಭಿನಯಿಸುವ `ಮುರಳಿ ಈ ಪಿರ ಬರೊಲಿ' ಎಂಬ ಹಾಸ್ಯಮಯ ನಾಟಕದ ಶುಭ ಮುಹೂರ್ತ ಜು.6 ರಂದು ಶನಿವಾರ ಬೆಳಿಗ್ಗೆ 9.22 ಕ್ಕೆ ಕೊಂಡೆವೂರು ಶ್ರೀ  ನಿತ್ಯಾನಂದ ಯೋಗಾಶ್ರಮದಲ್ಲಿ ನಡೆಯಲಿದೆ.
      ಕೊಂಡೆವೂರು ಶ್ರೀ ನಿತ್ಯಾನಂದ ಯೋಗಾಶ್ರಮದ ಶ್ರೀ ಯೋಗಾನಂದ ಸ್ವಾಮೀಜಿ ದೀಪ ಬೆಳಗಿಸಿ ಉದ್ಘಾಟಿಸಿ ಶುಭ ಮುಹೂರ್ತವನ್ನ ನೆರವೇರಿಸಿ ಆಶೀರ್ವಚನಗೈಯಲಿರುವರು. ಈ ವೇಳೆ ನಡೆಯುವ ಸಭಾ ಕಾರ್ಯಕ್ರಮದಲ್ಲಿ ಧಾರ್ಮಿಕ ಮುಂದಾಳು ಡಾ.ಜಯಪ್ರಕಾಶ್ ನಾರಾಯಣ ತೊಟ್ಟೆತೋಡಿ ಅಧ್ಯಕ್ಷತೆ ವಹಿಸುವರು. ಉದ್ಯಾವರ ಮಾಡ ಶ್ರೀ ಅರಸು ಮಂಜಿಷ್ಣಾರ್ ದೈವಗಳ ಕ್ಷೇತ್ರದ ಅಣ್ಣ ದೈವದ ಪಾತ್ರಿ ಶ್ರೀ ರಾಜ ಬೆಳ್ಚಪ್ಪಾಡ, ಧಾರ್ಮಿಕ ಮುಂದಾಳುಗಳಾದ ಶ್ರೀಕೃಷ್ಣಾ ಶಿವಕೃಪಾ ಕುಂಜತ್ತೂರು, ನಾರಾಯಣ ಪೂಜಾರಿ, ಆಶಾಲತ ಪೆಲಪ್ಪಾಡಿ, ಡಾ.ಶ್ರೀಧರ್ ಭಟ್ ಉಪ್ಪಳ, ನಾರಾಯಣ ಹೆಗ್ಡೆ ಕೋಡಿಬೈಲ್, ಜಗದೀಶ್ ಪ್ರತಾಪನಗರ, ವಿವಿಧ ನಾಟಕ ತಂಡಗಳ ಪ್ರಮುಖರಾದ ಉಮೇಶ್ ಸಾಲ್ಯಾನ್ ಕಾಸರಗೋಡು, ಸುರೇಶ್ ಮಂಜೇಶ್ವರ, ಕೃಷ್ಣ ಜಿ.ಮಂಜೇಶ್ವರ, ದಯಾನಂದ ಮಾಡ, ಜೀವನ್ ಮಂಜೇಶ್ವರ, ಸದಾನಂದ ಆರಿಕ್ಕಾಡಿ, ಜಯ ಮಣಿಯಂಪಾರೆ ಮೊದಲಾದವರು ಉಪಸ್ಥಿತರಿದ್ದು, ಶುಭಾಸಂಶನೆಗೈಯಲಿರುವರು. ಈ ವೇಳೆ ನಾಟಕ ತಂಡದ ಕಲಾವಿದರನ್ನ ಹಾಗೂ ತಂಡದ ಪ್ರಮುಖರನ್ನ ಸ್ವಾಮೀಜಿಗಳವರು ಗೌರವಿಸಲಿರುವರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries