ಉಪ್ಪಳ: ಕುರುಡಪದವಿನ ಗೆಳೆಯರ ಬಳಗ ಗ್ರಂಥಾಲಯದ ಬಾಲವೇದಿಕೆಯ ನೇತೃತ್ವದಲ್ಲಿ ಗ್ರಂಥಾಲಯದಲ್ಲಿ ಇತ್ತೀಚೆಗೆ ಹೊಸ ಪುಸ್ತಕಗಳ ಪ್ರದರ್ಶನ ನಡೆಯಿತು.
ಬಾಲವೇದಿಕೆಯ ಅಧ್ಯಕ್ಷೆ ದೀಪಾ ಅಧ್ಯಕ್ಷತೆ ವಹಿಸಿದ್ದರು. ಗ್ರಂಥಾಲಯದ ಹಿರಿಯ ಸದಸ್ಯರು ನೇತೃತ್ವ ನೀಡಿದ್ದರು. ಮಕ್ಕಳಿಂದ ಒಗಟು, ಗಾದೆ, ಕಥಾ ವಾಚನಗಳು ಈ ಸಂದರ್ಭ ನಡೆಯಿತು. ಬಾಲವೇದಿಕೆಯ ಸಮೀತ್ ಸ್ವಾಗತಿಸಿ, ವಂದಿಸಿದನು.