ಬದಿಯಡ್ಕ: ಬದಿಯಡ್ಕ ಗ್ರಾಮಪಂಚಾಯತಿ 2019-20ನೇ ವಾರ್ಷಿಕ ಯೋಜನೆಯಲ್ಲಿ ಕ್ಷಯರೋಗಿಗಳಿಗೆ ಆಹಾರದ ಕಿಟ್ ಅನ್ನು ವಿತರಿಸಲಾಯಿತು.
ಬದಿಯಡ್ಕ ಸಮುದಾಯ ಆರೋಗ್ಯಕೇಂದ್ರದಲ್ಲಿ ಮಂಗಳವಾರ ನಡೆದ ಕಾರ್ಯಕ್ರಮದಲ್ಲಿ ಬದಿಯಡ್ಕ ಗ್ರಾಮಪಂಚಾಯತಿ ಅಧ್ಯಕ್ಷ ಕೆ.ಎನ್.ಕೃಷ್ಣ ಭಟ್ ಕಿಟ್ ವಿತರಣೆಗೆ ಚಾಲನೆ ನೀಡಿದರು. ವಿದ್ಯಾಭ್ಯಾಸ ಮತ್ತು ಆರೋಗ್ಯ ಸ್ಥಾಯಿಸಮಿತಿ ಅಧ್ಯಕ್ಷ ಶ್ಯಾಮಪ್ರಸಾದ ಮಾನ್ಯ ಅಧ್ಯಕ್ಷತೆಯನ್ನು ವಹಿಸಿದ್ದರು. ಸಮುದಾಯ ಆರೋಗ್ಯ ಕೇಂದ್ರದ ಪ್ರಧಾನ ವೈದ್ಯಾಧಿಕಾರಿ ಸತ್ಯಶಂಕರ ಭಟ್ ಪಾಲ್ಗೊಂಡಿದ್ದರು. ವರ್ಷದಲ್ಲಿ ನಾಲ್ಕು ಬಾರಿ ಈ ಕಿಟ್ ಅನ್ನು ವಿತರಿಸಲಾಗುತ್ತದೆ. 75 ಮಂದಿ ಫಲಾನುಭವಿಗಳು ಪೋಷಕಾಹಾರ ಕಿಟ್ ಅನ್ನು ಪಡೆದುಕೊಂಡರು. ಆರೋಗ್ಯ ಪರಿವೀಕ್ಷಕ ಪ್ರಕಾಶ್ ಸ್ವಾಗತಿಸಿ, ಕಿರಿಯ ಪರಿವೀಕ್ಷಕ ದೇವಿಜಾಕ್ಷನ್ ವಂದಿಸಿದರು.


