HEALTH TIPS

ಪೆರ್ಲ ನಾಲಂದಾ ಕಾಲೇಜಿನಲ್ಲಿ ರಾಮಾಯಣ ವಿಡಿಯೋ ಪ್ರದರ್ಶನ

 
       ಪೆರ್ಲ:ಪೆರ್ಲ ನಾಲಂದ ಕಾಲೇಜಿನಲ್ಲಿ ರಾಮಾಯಣ ಸಪ್ತಾಹ ಅಂಗವಾಗಿ ರಾಮಾಯಣ ಕಥೆ ಆಧಾರಿತ ವಿಡಿಯೋ  ಪ್ರದರ್ಶನ ಇತ್ತೀಚೆಗೆನಡೆಯಿತು.
     ಕಾಲೇಜು ಪ್ರಭಾರ ಪ್ರಾಂಶುಪಾಲ ಕೇಶವ ಶರ್ಮ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಭಗವಾನ್ ಶ್ರೀರಾಮಚಂದ್ರನ ಆದರ್ಶಗಳ ಗುಣಗಾನ ಮಾಡಿದರು.
   ಮಂಗಳವಾರ ರಾತ್ರಿ ಅಗಲಿದ ಮಹಾನ್ ಚೇತನ, ಉಕ್ಕಿನ ಮಹಿಳೆ ಎಂದೇ ಖ್ಯಾತರಾದ ಭಾರತದ ಮಾಜಿ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಿ ಮಾತನಾಡಿ, ತಮ್ಮ ಆಡಳಿತ ಅವಧಿಯಲ್ಲಿ ದೇಶದ ಕೀರ್ತಿ ಪತಾಕೆಯನ್ನು ವಿಶ್ವದಾದ್ಯಂತ ಹಬ್ಬಿಸಿದ ಸುಷ್ಮಾ ಸ್ವರಾಜ್ ತಮ್ಮ ಕೊನೆಯುಸಿರಿನವರೆಗೂ ದೇಶಕ್ಕಾಗಿ ದುಡಿದ ಮಹಾನ್ ನಾಯಕಿ.ಅವರ ಅಗಲಿಕೆ ದೇಶಕ್ಕೆ ತುಂಬಲಾರದ ನಷ್ಟ ಎಂದರು.ಸಾಮೂಹಿಕ ಮೌನ ಪ್ರಾರ್ಥನೆ ನಡೆಯಿತು.
     ನಾಲಂದ ಮಹಾ ವಿದ್ಯಾಲಯದ ಆಡಳಿತ ಮಂಡಳಿ ನಿರ್ದೇಶಕಿ ಪ್ರಭಾವತಿ ಕೆ.ವಿ., ಶಿಶುಮಂದಿರ ಸಮಿತಿ ಅಧ್ಯಕ್ಷೆ ನಳಿನಿ ಸೈಪಂಗಲ್ಲು, ಕಾರ್ಯದರ್ಶಿ ಕಾರ್ತಿಕ್ ಶಾಸ್ತ್ರಿ ಖಂಡೇರಿ, ಜಯಶ್ರೀ ಭಟ್ ಪೆರ್ಲ, ಸಾಧ್ವಿ ಬಿಜಿ., ರೇಖಾ ವಿನೋದ್, ಮಾತಾಜಿ ಲಾವಣ್ಯ, ಜ್ಯೋತಿ, ಶಿಶುಮಂದಿರ ಮಕ್ಕಳು. ಪೋಷಕರು ಉಪಸ್ಥಿತರಿದ್ದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries