HEALTH TIPS

ಪಾಕಿಸ್ತಾನದಿಂದ ಮತ್ತೆ ಹಗೆತನ; ಭಾರತಕ್ಕೆ ವಾಯುಮಾರ್ಗ, ಭೂಮಾರ್ಗ ಸಂಚಾರ ನಿಬರ್ಂಧ?

     
       ಇಸ್ಲಾಮಾಬಾದ್: ಭಾರತೀಯ ವಿಮಾನಗಳು ತನ್ನ ವಾಯುಮಾರ್ಗವನ್ನು ಬಳಸುವುದಕ್ಕೆ ಸಂಪೂರ್ಣ ನಿಷೇಧ ಹೇರಲು ಪಾಕಿಸ್ತಾನ ಸರ್ಕಾರ ಚಿಂತಿಸುತ್ತಿದೆ. ಜಮ್ಮು-ಕಾಶ್ಮೀರದ ವಿಶೇಷ ಸ್ಥಾನಮಾನವನ್ನು ಭಾರತ ಸರ್ಕಾರ ತೆಗೆದುಹಾಕಿರುವ ಹಿನ್ನಲೆಯಲ್ಲಿ ಪಾಕಿಸ್ತಾನ ಈ ಕ್ರಮಕ್ಕೆ ಮುಂದಾಗಿದೆ ಎನ್ನಲಾಗಿದೆ.
    ಮೊನ್ನೆ ಈ ಕುರಿತು ಮಾತನಾಡಿದ ಪಾಕಿಸ್ತಾನದ ವಿ ಜ್ಞಾ ನ ಮತ್ತು ತಂತ್ರ ಜ್ಞಾ ನ ಖಾತೆ ಸಚಿವ ಫವದ್ ಚೌಧರಿ, ಭಾರತ-ಆಫ್ಘನ್ ನಡುವೆ ವ್ಯಾಪಾರ ಉದ್ಯಮಕ್ಕೆ ಬಳಸುತ್ತಿರುವ ಪಾಕಿಸ್ತಾನ ಭೂ ಮಾರ್ಗ ಸಂಚಾರಕ್ಕೆ ಕೂಡ ನಿಷೇಧ ಹೇರಲು ಚಿಂತನೆ ನಡೆಸುತ್ತಿದ್ದೇವೆ ಎಂದು ಹೇಳಿದರು.
    ಭಾರತಕ್ಕೆ ಪಾಕಿಸ್ತಾನದ ವಾಯುಮಾರ್ಗವನ್ನು ಮತ್ತು ಆಫ್ಘಾನಿಸ್ತಾನದೊಂದಿಗೆ ಭಾರತದ ವ್ಯಾಪಾರಕ್ಕೆ ಬಳಸುತ್ತಿರುವ ಭೂ ಮಾರ್ಗಕ್ಕೆ ಸಹ ಸಂಪೂರ್ಣ ನಿಬರ್ಂಧ ಹೇರಲು ಪ್ರಧಾನಿಗಳು ಯೋಚಿಸುತ್ತಿದ್ದಾರೆ, ಈ ಕುರಿತು ನಿನ್ನೆ ನಡೆದ ಸಚಿವ ಸಂಪುಟ ಸಭೆಯಲ್ಲಿ ಸಚಿವರುಗಳಿಂದ ಸಹ ಅಭಿಪ್ರಾಯಗಳು ಬಂದಿದ್ದು ಈ ಬಗ್ಗೆ ತೀರ್ಮಾನ ಕೈಗೊಳ್ಳಲು ಇರುವ ಕಾನೂನು ವಿಚಾರಗಳನ್ನು ಪರಿಗಣಿಸಲಾಗುತ್ತಿದೆ ಎಂದು ಚೌಧರಿ ಟ್ವೀಟ್ ಮಾಡಿದ್ದಾರೆ.
     ಕಳೆದ ಫೆಬ್ರವರಿ 14ರಂದು ನಡೆದ ಪುಲ್ವಾಮಾ ದಾಳಿಗೆ ಪ್ರತೀಕಾರವಾಗಿ ಬಾಲಾಕೋಟ್ ನಲ್ಲಿ ಜೈಶ್ ಎ ಮೊಹಮ್ಮದ್ ಉಗ್ರಗಾಮಿ ಸಂಘಟನೆಯ ಶಿಬಿರ ತಾಣದ ಮೇಲೆ ಭಾರತೀಯ ಯುದ್ಧ ವಿಮಾನ ವಾಯುದಾಳಿ ನಡೆಸಿದ ಬಳಿಕ ಫೆಬ್ರವರಿ 26ರಂದು ಪಾಕಿಸ್ತಾನ ಭಾರತಕ್ಕೆ ತನ್ನ ವಾಯುಮಾರ್ಗವನ್ನು ಸಂಪೂರ್ಣವಾಗಿ ಮುಚ್ಚಿತ್ತು. ನಂತರ ಕಳೆದ ಜುಲೈ 16ರಂದು ಎಲ್ಲಾ ನಾಗರಿಕ ವಿಮಾನಗಳ ಸಂಚಾರಕ್ಕೆ ತನ್ನ ವಾಯುನೆಲೆಯನ್ನು ಪಾಕಿಸ್ತಾನ ತೆರೆದಿತ್ತು. ಏರ್ ಇಂಡಿಯಾದ ಸುಮಾರು 50 ವಿಮಾನಗಳು ಪ್ರತಿದಿನ ಪಾಕಿಸ್ತಾನ ವಾಯುಮಾರ್ಗದ ಮೂಲಕ ಹಾರಾಟ ನಡೆಸುತ್ತದೆ. ಅಮೆರಿಕಾ, ಯುರೋಪ್ ಮತ್ತು ಮಧ್ಯ ಪ್ರಾಚ್ಯಕ್ಕೆ ಹೋಗುವ ವಿಮಾನಗಳು ಪಾಕಿಸ್ತಾನ ವಾಯುಮಾರ್ಗದ ಮೂಲಕವೇ ಹಾರಾಟ ಮಾಡುತ್ತವೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries