HEALTH TIPS

ಖಂಡಿಗೆ ಶಾಮ ಭಟ್ಟರು ಶತಮಾನ ಕಂಡ ಆದರ್ಶ ಮನುಷ್ಯ : ಡಾ. ಬಿ.ಎಸ್.ರಾವ್-ನೀರ್ಚಾಲಿನಲ್ಲಿ ಖಂಡಿಗೆ ಶಾಮ ಭಟ್ಟ ಜನ್ಮಶತಮಾನೋತ್ಸವ ಸಮಾರಂಭ- ರಕ್ತದಾನ, ನೇತ್ರತಪಾಸಣೆ, ದಂತಚಿಕಿತ್ಸೆ, ವೈದ್ಯಕೀಯ ಶಿಬಿರ-

       
       ಬದಿಯಡ್ಕ: ಎಲ್ಲಾ ಕ್ಷೇತ್ರಗಳಲ್ಲೂ ಸಮಾಜೋನ್ನತಿಯ ಸಾಧನೆಗಳನ್ನು ಸಾಕಾರಗೊಳಿಸಿದ ಖಂಡಿಗೆ ಶಾಮ ಭಟ್ಟರ ಜನ್ಮಶತಮಾನೋತ್ಸವವನ್ನು ಸಮಾಜಮುಖೀ ಕಾರ್ಯಗಳೊಂದಿಗೆ ಹಮ್ಮಿಕೊಂಡಿರುವುದು ನಿಜಕ್ಕೂ ಶ್ಲಾಘನೀಯ. ನೀರ್ಚಾಲಿನ ಮಣ್ಣಿನಲ್ಲಿ ಇಂತಹ ಜನೋಪಯೋಗಿ ಚಿಂತನೆಗಳು ಸದಾ ನಡೆಯುತ್ತಿದ್ದರೆ ಹಿರಿಯರ ಶ್ರಮಕ್ಕೆ ಗೌರವನೀಡಿದಂತೆ. ಶಾಮ ಭಟ್ಟರ ಮಹತ್ತರ ಕೊಡುಗೆಗಳು ಎಂದಿಗೂ ಶಾಶ್ವತವಾಗಿ ನೆಲೆಗೊಂಡು ಆದರ್ಶ ಮನುಷ್ಯರಾಗಿದ್ದರು ಎಂದು ಖ್ಯಾತ ವೈದ್ಯ ಡಾ. ಬಿ.ಎಸ್.ರಾವ್ ಅಭಿಪ್ರಾಯಪಟ್ಟರು.
     ನೀರ್ಚಾಲು ಮಹಾಜನ ವಿದ್ಯಾಸಂಸ್ಥೆಯಲ್ಲಿ ಭಾನುವಾರ ಜರಗಿದ ಸಂಸ್ಥೆಯ ನವನಿರ್ಮಾಪಕ ಹಾಗೂ ಧಾರ್ಮಿಕ, ಸಾಮಾಜಿಕ, ಸಾಂಸ್ಕøತಿಕ, ಸಹಕಾರಿ ರಂಗಗಳ ಧುರೀಣ ದಿ. ಖಂಡಿಗೆ ಶಾಮ ಭಟ್ಟ ಜನ್ಮಶತಮಾನೋತ್ಸವ ಸಮಾರಂಭದ ವೇದಿಕೆಯಲ್ಲಿ ವೈದ್ಯಕೀಯ ಶಿಬಿರವನ್ನು ದೀಪ ಬೆಳಗಿಸಿ ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
    ರಕ್ತದಾನ ಶಿಬಿರವನ್ನು ಉದ್ಘಾಟಿಸಿದ ಖ್ಯಾತ ಹಿರಿಯ ದಂತವೈದ್ಯ ಡಾ. ಕೆ.ಗಣಪತಿ ಭಟ್ ಮಾತನಾಡಿ ಸಮಾಜಮುಖಿಯಾಗಿ ಸಾರ್ಥಕ ಬದುಕನ್ನು ಸಾಗಿಸಿದ ಎಲ್ಲರ ಪ್ರಿನ್ಸಿಪಾಲರಾದ ಖಂಡಿಗೆ ಶಾಮಭಟ್ಟರು ಶ್ರೇಷ್ಠ ಆಡಳಿತಗಾರ, ಶಿಕ್ಷಕನಾಗಿ ಶ್ರೀಮಂತಿಕೆಯನ್ನು ಮೆರೆದ ಪುಣ್ಯಾತ್ಮನಾಗಿದ್ದಾರೆ. ಅಪ್ಪಟ ದೇಶಪ್ರೇಮಿಯಾಗಿ ಸ್ವಾತಂತ್ರ್ಯ ಹೋರಾಟದಲ್ಲಿಯೂ ಗುರುತಿಸಿಕೊಂಡ ಅವರು ಪ್ರಗತಿಪರ ಕೃಷಿಕನೂ ಆಗಿದ್ದರು. `ಸರಳ ಜೀವನ, ಉನ್ನತ ಚಿಂತನೆ' ಹೇಗೆ ಎಂಬುದನ್ನು ಸಮಾಜಕ್ಕೆ ತೋರಿಸಿಕೊಟ್ಟ ವ್ಯಕ್ತಿಯಾಗಿದ್ದಾರೆ. ತನ್ನ ಬುದ್ಧಿವಂತಿಕೆಯ ಶ್ರೀಮಂತಿಕೆಯನ್ನು ಸಂಪತ್ತಿನ ಶ್ರೀಮಂತಿಕೆಯೊಂದಿಗೆ ಸಂಯೋಜಿಸಿಕೊಂಡು ಸಮಾಜದ ದೀನದಲಿತರಿಗೆ ಸಾವಿರಾರು ಬಡವಿದ್ಯಾರ್ಥಿಗಳಿಗೆ ಬದುಕಿನ ದಾರಿತೋರಿಸಿದ್ದಾರೆ. ಭವ್ಯ ಪರಂಪರೆಯನ್ನು ಉಳಿಸಿ ಬೆಳೆಸಿಕೊಂಡು ಈ ಮಹಾಜನ ಸಂಸ್ಕøತ ಕಾಲೇಜು ಭಾರತೀಯ ಸಂಸ್ಕøತಿಯನ್ನು ನಮಗೆ ಪರಿಚಯಿಸಿಕೊಟ್ಟ ಮೊದಲ ಸಂಸ್ಥೆ ನಮ್ಮ ಕಾಲದಲ್ಲಿ ಸ್ಥಾಪಿತವಾಯಿತು ಎಂಬ ಹೆಮ್ಮೆ ನಮಗಿದೆ. ಇದು ಅನೇಕರಿಗೆ ಮಾತೃಶಾಲೆಯಾಗಿದೆ. ಹಿಂದಿನ ಕಾಲದಲ್ಲಿ ಅನ್ನದಾನ, ಗೋದಾನ, ಭೂದಾನಗಳು ಸಜ್ಜನರಿಂದ ನಡೆಯುತ್ತಿದ್ದರೆ, ಇಂದು ವೈದ್ಯ ವಿಜ್ಞಾನ ಕ್ಷೇತ್ರದ ಬೆಳವಣಿಗೆಯಿಂದ ರಕ್ತದಾನ ಶ್ರೇಷ್ಠವೆಂದು ನಂಬಿದವರು ನಾವೆಲ್ಲ. ಇನ್ನೊಬ್ಬನ ಜೀವನಕ್ಕೆ ಆಧಾರವಾಗುವ ಅಂಗಾಂಗಗಳ ದಾನವು ಪುಣ್ಯಕಾರ್ಯವಾಗಿದೆ. ಇಂತಹ ಸತ್ಕಾರ್ಯಗಳಲ್ಲಿ ಪಾಲ್ಗೊಳ್ಳಲು ಪುಣ್ಯಮಾಡಿರಬೇಕು. ಹಿರಿಯರ ಆದರ್ಶವನ್ನು ಮುಂದಿಟ್ಟುಕೊಂಡು ಕಾಲಕಾಲಕ್ಕೆ ಬದಲಾಗುತ್ತಾ ಪೂಜ್ಯ ಶಾಮಭಟ್ಟರ ಆತ್ಮಕ್ಕೆ ತೃಪ್ತಿಯಾಗುವಂತೆ ಇನ್ನು ಮುಂದೆಯೂ ಸಮಾಜಮುಖಿ ಚಿಂತನೆಗಳತ್ತ ನಾವೆಲ್ಲ ಮನಮಾಡೋಣ ಎಂದರು.
      ಬದಿಯಡ್ಕ ಗ್ರಾಮಪಂಚಾಯಿತಿ ಅಧ್ಯಕ್ಷ ಕೆ.ಎನ್.ಕೃಷ್ಣ ಭಟ್ ಸಭೆಯ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿ ನೀರ್ಚಾಲು ಎಂದರೆ ಖಂಡಿಗೆಯವರನ್ನು ಥಟ್ಟನೆ ನೆನಪಾಗುತ್ತದೆ. ವಿದ್ಯೆ, ಕೃಷಿ, ಸಹಕಾರೀ ಕ್ಷೇತ್ರಗಳಲ್ಲಿ ಖಂಡಿಗೆ ಪ್ರಿನ್ಸಿಪಾಲರು ಅಪಾರವಾದ ಸಾಧನೆಯನ್ನು ಮಾಡಿದ ಪುಣ್ಯವ್ಯಕ್ತಿಯಾಗಿದ್ದಾರೆ. ಶ್ರೇಷ್ಠ ಗುಣವನ್ನು ಹೊಂದಿರುವ ಅವರು ತಪ್ಪುಗಳನ್ನು ಕಂಡಲ್ಲಿ ತಿದ್ದುವ ಸ್ವಭಾವವನ್ನು ಹೊಂದಿದವರಾಗಿದ್ದು, ನಮಗೆಲ್ಲ ಮಾರ್ಗದರ್ಶಕಾರಾಗಿದ್ದಾರೆ. ಅನೇಕ ಜನಪರ ಯೋಜನೆಗಳಿಂದ ಎಲ್ಲರ ಮನದಲ್ಲಿ ಶಾಶ್ವತವಾಗಿ ನೆಲೆನಿಂತಿದ್ದಾರೆ ಎಂದರು.
      ಖಂಡಿಗೆ ಶಾಮಭಟ್ಟರ ಮೇಲಿನ ಅಪಾರವಾದ ಪ್ರೀತಿ, ಗೌರವದಿಂದ ಹಿರಿಯರಾದ ನಿವೃತ್ತ ಮುಖ್ಯೋಪಾಧ್ಯಾಯ ಬಿ.ಎಂ. ಸುಬ್ರಾಯ ಭಟ್ ಇಳಿವಯಸ್ಸಿನಲ್ಲಿಯೂ ಸಮಾರಂಭದಲ್ಲಿ ಪಾಲ್ಗೊಂಡು ಶಾಮಭಟ್ಟರ ಭಾವಚಿತ್ರವನ್ನು ಅನಾವರಣಗೊಳಿಸಿ ಪುಷ್ಪಾರ್ಚನೆಗೈದರು. ನೀರ್ಚಾಲು ಮಹಾಜನ ವಿದ್ಯಾಸಂಸ್ಥೆಗಳ ಅಧ್ಯಕ್ಷ ಡಾ. ಕೆ.ಸುಬ್ರಹ್ಮಣ್ಯ ಭಟ್ ಖಂಡಿಗೆ, ಪ್ರಬಂಧಕ ಜಯದೇವ ಖಂಡಿಗೆ, ಶಾಲಾ ಮುಖ್ಯೋಪಾಧ್ಯಾಯ ವೆಂಕಟರಾಜ ಸಿ.ಎಚ್. ವೇದಿಕೆಯಲ್ಲಿ ಉಪಸ್ಥಿತರಿದ್ದರು. ಪ್ರಾಂಶುಪಾಲ ಎಂ.ಕೆ.ಶಿವಪ್ರಕಾಶ್ ಸ್ವಾಗತಿಸಿ, ಕಿರಿಯ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯ ಚಂದ್ರಶೇಖರ ರೈ ವಂದಿಸಿದರು.  ಊರಪರವೂರ ಅನೇಕ ಗಣ್ಯರು ಖಂಡಿಗೆ ಶಾಮಭಟ್ಟರ ಮೇಲಿನ ಗೌರವ, ಅಭಿಮಾನದಿಂದ ಪಾಲ್ಗೊಂಡಿದ್ದರು. ಮಧ್ಯಾಹ್ನ ಭೋಜನ, ನುರಿತ ಕಲಾವಿದರ ಕೂಡುವಿಕೆಯಿಂದ ಯಕ್ಷಗಾನ ತಾಳಮದ್ದಳೆ `ಭೀಮಾಂಜನೇಯ' ಜರಗಿತು.
* ಮಂಗಳೂರಿನ ಎ.ಬಿ.ಶೆಟ್ಟಿ ಮೆಮೋರಿಯಲ್ ಇನ್ಸಿಟ್ಯೂಟ್ ಆಫ್ ಡೆಂಟಲ್ ಸೈನ್ಸ್‍ನ ನೇತೃತ್ವದಲ್ಲಿ
ದಂತ ಚಿಕಿತ್ಸಾ ಶಿಬಿರ
* ಮುಜುಂಗಾವು ಶ್ರೀ ಭಾರತೀ ನೇತ್ರಚಿಕಿತ್ಸಾಲಯದ ವತಿಯಿಂದ ಕಣ್ಣಿನ ಪೊರೆ ತಪಾಸಣಾ ಶಿಬಿರ
* ನೀರ್ಚಾಲು ನಿವೇದಿತಾ ಸೇವಾ ಮಿಶನ್ ಹಾಗೂ ಮುಗು ವಾಟರ್ ಶೆಡ್ ಸಮಿತಿಯ ವತಿಯಿಂದ ರಕ್ತದಾನ ಶಿಬಿರ-ರಕ್ತದಾನದಲ್ಲಿ 106 ಮಂದಿ ರಕ್ತದಾನಗೈದು ದಾಖಲೆ
* ಛಾಯಾಗ್ರಾಹಕ, ಶಾಲಾ ಹಳೆವಿದ್ಯಾರ್ಥಿ, ಯಕ್ಷಗಾನ ಕಲಾವಿದ ಉದಯ ಕಂಬಾರು ಸೆರೆಹಿಡಿದ ಖಂಡಿಗೆ ಶಾಮಭಟ್ಟರ ಭಾವಚಿತ್ರವನ್ನು ವೇದಿಕೆಯಲ್ಲಿ ಅನಾವರಣಗೊಳಿಸಲಾಯಿತು.
* ಖಂಡಿಗೆ ಶಾಮಭಟ್ಟರ ಮೇಲಿನ ಗೌರವ ಅಭಿಮಾನದಿಂದ ನೂರಾರು ಮಂದಿ ಶಿಬಿರಗಳಲ್ಲಿ ಪಾಲ್ಗೊಂಡಿದ್ದರು.

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries