HEALTH TIPS

ಶೇಷವನ ಕಾರ್ತಿಕ ಮಾಸ ದೀಪೆÇೀತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ

       
     ಕಾಸರಗೋಡು: ಶುದ್ಧ ಪಾಡ್ಯದ ಬೆಳಕಿನ ಹಬ್ಬದ ಆಚರಣೆಯಿಂದ ಆರಂಭಗೊಳ್ಳುವ ಕಾರ್ತಿಕ ಮಾಸವನ್ನು ದೀಪೆÇೀತ್ಸವದೊಂದಿಗೆ ವೈಭವಪೂರ್ಣವಾಗಿ ಕಾಸರಗೋಡಿನ ಕೂಡ್ಲು ಸಮೀಪದ ಬಾದಾರದ ಶೇಷವನ ಶ್ರೀ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನದಲ್ಲಿ ಅ.28 ರಿಂದ ನ.26ರ ತನಕ ಶ್ರೀ ಕ್ಷೇತ್ರದ ತಂತ್ರಿವರ್ಯರಾದ ಬ್ರಹ್ಮಶ್ರೀ ಅರವತ್ ದಾಮೋದರ ತಂತ್ರಿವರ್ಯರ ಆಶೀರ್ವಾದಗಳೊಂದಿಗೆ ಅರ್ಚಕರಾದ ಸುಬ್ರಾಯ ಕಾರಂತರ ನೇತೃತ್ವದಲ್ಲಿ ಗೋಪಾಲಕೃಷ್ಣ ಕಾರಂತರ ಸಹಕಾರದಿಂದ ಆಹ್ವಾನಿತ ಮೂವತ್ತು ತಂಡಗಳಿಂದ ಭಜನೆ, ದೀಪೆÇೀತ್ಸವ ಹಾಗು ವಿಶೇಷ ಕಾರ್ತಿಕ ಪೂಜೆ ಬಳಿಕ ಅನ್ನಸಂತರ್ಪಣೆಯೊಂದಿಗೆ ನಡೆಯಲಿದೆ.
     ಅ.27 ರಂದು ಬೆಳಗ್ಗೆ 6 ಗಂಟೆಗೆ ಗಣಪತಿ ಹವನದೊಂದಿಗೆ ಚಾಲನೆಗೊಳ್ಳುವ ಕಾರ್ತಿಕಮಾಸ ದೀಪೆÇೀತ್ಸವ,  ಸಂಜೆ 4ಗಂಟೆಗೆ ಕರಂದಕ್ಕಾಡು ಶ್ರೀ ವೀರ ಹನುಮಾನ್ ಮಂದಿರದಿಂದ ಹೊರಡುವ ಹಸಿರುವಾಣಿ ಹೊರೆಕಾಣಿಕೆ ಸಹಿತ ಶೋಭಾಯಾತ್ರೆ ಶ್ರೀ ಸನ್ನಿ„ಗೆ ರಾತ್ರಿ ತಲುಪಲಿದೆ. ಅ.28 ರಂದು ಬೆಳಗ್ಗೆ 6 ಕ್ಕೆ ಗಣಪತಿ ಹವನ, ಸಂಜೆ 6 ಕ್ಕೆ ಶ್ರೀ ಕ್ಷೇತ್ರದ ತಂತ್ರಿವರ್ಯರಾದ ಬ್ರಹ್ಮಶ್ರೀ ಅರವತ್ ದಾಮೋದರ ತಂತ್ರಿವರ್ಯರು ಕಾರ್ತಿಕಮಾಸ ದೀಪೆÇೀತ್ಸವವನ್ನು ದೀಪ ಬೆಳಗಿಸುವುದರ ಮೂಲಕ ಉದ್ಘಾಟಿಸಲಿದ್ದಾರೆ.
    ಬಳಿಕ ಶ್ರೀ ಚಾಮುಂಡೆಶ್ವರಿ ಭಜನಾ ಸಂಘ ಕೂಡ್ಲು ಇವರಿಂದ ಭಜನೆ, ರಾತ್ರಿ 8 ಕ್ಕೆ ದೀಪೆÇೀತ್ಸವ ಹಾಗು ವಿಶೇಷ ಕಾರ್ತಿಕ ಪೂಜೆ ಬಳಿಕ ಅನ್ನಸಂತರ್ಪಣೆ ಜರಗಲಿದೆ. ನ.13ನೇ ತಾರೀಕು ಮಹಾದೀಪೆÇೀತ್ಸವ ಆಗಿದ್ದು ಆದಿನ ಸೂರ್ಯೋದಯದಿಂದ ಸೂರ್ಯಾಸ್ತಮಾನದ ತನಕ ವಿವಿಧ ಭಜನಾ ತಂಡಗಳಿಂದ ಸಂಕೀರ್ತನಾರ್ಚನೆ ನಡೆಯಲಿದೆ.
    ಅಮಂತ್ರಣ ಪತ್ರಿಕೆಯನ್ನು ಶ್ರೀ ಕ್ಷೇತ್ರದ ಅರ್ಚಕರಾದ ಸುಬ್ರಾಯ ಕಾರಂತ ಅವರು ಬಿಡುಗಡೆಗೊಳಿಸಿದರು. ಸಮಾರಂಭದಲ್ಲಿ ಅನುವಂಶಿಕ ಮೊಕ್ತೇಸರ ಸದಾಶಿವ, ಆಡಳಿತ ಮೊಕ್ತೇಸರ ವೇಣುಗೋಪಾಲ ಮಾಸ್ತರ್, ಕಾರ್ಯದರ್ಶಿ ಸುರೇಶ್ ಮಣಿಯಾಣಿ, ಟ್ರಸ್ಟ್ ಸದಸ್ಯರಾದ ವಸಂತ ನಾಂಗುರಿ, ಯುವಕ ಸಂಘದ ಕಾರ್ಯದರ್ಶಿ ರೋಹಿತ್, ಕೋಶಾ„ಕಾರಿ ಗೋಪಾಲ ಪಾಯಿಚ್ಚಾಲ್, ಮಹಿಳಾ ಸಂಘದ ಅಧ್ಯಕ್ಷೆ ಉಮಾ, ಉತ್ಸವ ಸಮಿತಿಯ ಕಾರ್ಯಾಧ್ಯಕ್ಷ ರಮೇಶ್ ರೈ ಮುಂತಾದವರು ಉಪಸ್ಥಿತರಿದ್ದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries