HEALTH TIPS

ತುಳುನಾಡ ಬಾಲೆ ಬಂಗಾರ್- 2019 ಮುದ್ದು ಮಕ್ಕಳ ಫೋಟೋ ಸ್ಪರ್ಧೆ- ಸೀಸನ್ 4-ಪ್ರವೇಶಾತಿಗೆ ಅರ್ಜಿ ಆಹ್ವಾನ

 
          ಮಂಜೇಶ್ವರ: ತುಳುವೆರೆ ಆಯನೊ ಕೂಟ-ತುಳುನಾಡ ಬಾಲೆ ಬಂಗಾರ್ ಸಮಿತಿ ಮಂಜೇಶ್ವರ ಇದರ ಆಶ್ರಯದಲ್ಲಿ ಮಕ್ಕಳ ದಿನಾಚರಣೆ ಪ್ರಯುಕ್ತ ತುಳುನಾಡ ಬಾಲೆ ಬಂಗಾರ್- 2019 ಮುದ್ದು ಮಕ್ಕಳ ಫೋಟೋ ಸ್ಪರ್ಧೆ- ಸೀಸನ್ 4 ಕಾರ್ಯಕ್ರಮ ಆಯೋಜಿಸಿದೆ. ಸ್ಪರ್ಧೆಯಲ್ಲಿ 4 ವರ್ಷದ ಒಳಗಿನ ಮಕ್ಕಳಿಗೆ ಮಾತ್ರ ಭಾಗವಹಿಸಲು ಅವಕಾಶ, ಭಾಗವಹಿಸುವ ಮಕ್ಕಳ ಪೋಷಕರು ತಮ್ಮ ಮಕ್ಕಳ ಭಾವಚಿತ್ರವನ್ನು 6*9 ಸೈಜ್ ನಲ್ಲಿ 1 ಭಾವಚಿತ್ರವನ್ನು ಮಾತ್ರ ಕಳುಹಿಸತಕ್ಕದ್ದು. ಭಾವ ಚಿತ್ರದ ಹಿಂದೆ ಮಗುವಿನ ಹೆಸರು, ಹುಟ್ಟಿದ ದಿನ, ತಿಂಗಳು, ಇಸವಿ, ಪೋಷಕರ ಹೆಸರು, ವಿಳಾಸವನ್ನು ಸ್ಪಷ್ಟವಾಗಿ ಬರೆದಿರಬೇಕು, ಅಲ್ಲದೆ ಕಡ್ಡಾಯವಾಗಿ ಜನನ ಪ್ರಮಾಣ ಪತ್ರದ ನಕಲು ಪ್ರತಿ ಅದರ ಜೊತೆ ಲಗತ್ತಿಕರಿಸಿರಬೇಕು. ತುಳುನಾಡಿನ ಸಂಸ್ಕøತಿ, ಸಂಸ್ಕಾರಗಳನ್ನು ಬಿಂಬಿಸುವ ರೀತಿಯಲ್ಲಿನ ಫೋಟೋಗಳಿಗೆ ಪ್ರಾಮಖ್ಯತೆ, ಸ್ಪರ್ಧೆಯು ಕಾಸರಗೋಡು, ದಕ್ಷಿಣ ಕನ್ನಡ, ಕೊಡಗು, ಉಡುಪಿ, ಹಾಸನ, ಚಿಕ್ಕಮಂಗಳೂರು ಜಿಲ್ಲೆಗಳಿಗೆ ಮಾತ್ರ ಸೀಮಿತವಾಗಿದೆ. ಫೋಟೋಗಳನ್ನು ಕೊರಿಯರ್ ಮೂಲಕ ಈ ಕೆಳಗಿನ ವಿಳಾಸಕ್ಕೆ ನವಂಬರ್ 5 ರ ಮೊದಲು ತಲುಪುವಂತೆ ಕಳುಹಿಸಿಬಹುದು. ನವಂಬರ್ 13ರಂದು ಹೊಸಂಗಡಿ ಗೇಟ್ ವೇ ಹಾಲ್ ಸಭಾಂಗಣದಲ್ಲಿ ಜರಗಲಿರುವ ತುಳುನಾಡ ಬಾಲೆ ಬಂಗಾರ್ - 2019 ಕಾರ್ಯಕ್ರಮದಲ್ಲಿ ವಿಜೇತ ಮಕ್ಕಳ ವಿವರ ಪ್ರಕಟಗೊಂದು ಅದೇ ವೇದಿಕೆಯಲ್ಲಿ ಬಹುಮಾನ ವಿತರಣೆ ನಡೆಯಲಿದೆ. ಅಲ್ಲದೆ ಅದೇ ದಿನ ಬಹುಮಾನಿತ ಫೋಟೋಗಳ ಪ್ರದರ್ಶನ ಕೂಡ ನಡೆಯಲಿದೆ. ವಿಜೇತರಿಗೆ ಪ್ರಥಮ, ದ್ವಿತೀಯ, ತೃತೀಯ, ಚತುರ್ಥ, ಹಾಗೂ ಪಂಚಮ ಬಹುಮಾನ ಮತ್ತು ಪ್ರಮಾಣ ಪತ್ರ ನೀಡಲಾಗುವುದು. ಭಾಗವಹಿಸಿದ ಸ್ಪರ್ಧಿಗಳಿಗೆ ಕೂಡ ಪ್ರಮಾಣ ಪತ್ರ ನೀಡಲಾಗುವುದು. ಸ್ಪರ್ಧೆಯಲ್ಲಿ ಭಾಗವಹಿಸುವ ಮಕ್ಕಳ ಪೋಷಕರು, ಸಂಕಬೈಲು ಸತೀಶ್ ಅಡಪ್ಪ, ಅಧ್ಯಕ್ಷರು ತುಳುನಾಡ ಬಾಲೆ ಬಂಗಾರ್ ಸಮಿತಿ ತುಳುವೆರೆ ಆಯನೊ ಕೂಟ ಮಂಜೇಶ್ವರ, ಅನುಗ್ರಹ ಇಂಡಸ್ಟ್ರೀಸ್ ಹೊಸಂಗಡಿ, ಮಂಜೇಶ್ವರ -671323, ಕಾಸರಗೋಡು ಜಿಲ್ಲೆ ಈ ವಿಳಾಸಕ್ಕೆ ಕಳುಹಿಸಬೇಕಾಗಿ ಕೋರಲಾಲಿದೆ. ಹೆಚ್ಚಿನ ಮಾಹಿತಿಗೆ 7034338773, 9447491189, ಸಂಪರ್ಕಿಬಹುದಾಗಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries