HEALTH TIPS

ಈಗ ವಾಟ್ಸ್ ಆಫ್ ಜಮಾನ-ಸಮರ್ಥವಾಗಿ ಬಳಸಿದ ಸಿರಿಗನ್ನಡ ವೇದಿಕೆ ದ.ಕ.ಜಿಲ್ಲಾ ಘಟಕ-ಇಲ್ಲಿ ವಾಟ್ಸ್ ಆಫ್ ಮೂಲಕವೂ ಯಶಸ್ವಿ ಸಾಹಿತ್ಯ ಸೇವೆ

 
      ಬದಿಯಡ್ಕ: ಕನ್ನಡ ಸಾರಸ್ವತ ಲೋಕದ ಯುವ ಕವಿ, ಬರಹಗಾರರನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಆಧುನಿಕ ವಿದ್ಯತ್ಮಾನ ಮಾಧ್ಯಮವನ್ನು ಕ್ರಿಯಾತ್ಮಕವಾಗಿ ಬಳಸುವ ಮೂಲಕ ದಕ್ಷಿಣ ಕನ್ನಡ ಜಿಲ್ಲಾ ಸಿರಿಗನ್ನಡ ವೇದಿಕೆ ಗಮನ ಸೆಳೆಯುತ್ತಿದೆ. ಸಿರಿಗನ್ನಡ ವೇದಿಕೆಯ ವಾಟ್ಸ್ ಆಫ್ ಗುಂಪಿನ ಮೂಲಕ ಈಗಾಗಲೇ ಮೂರು ಕವಿಗೋಷ್ಠಿಯನ್ನು ಸಂಘಟಿಸಿರುವ ತಂಡ ಇದೀಗ ಬೆಳಕಿನ ಹಬ್ಬ ದೀಪಾವಳಿಯ ಹಿನ್ನೆಲೆಯಲ್ಲಿ ಕಳೆದ ಶನಿವಾರ ವಿನೂತನ ಶೈಲಿಯ ವಾಟ್ಸ್ ಆಫ್ ಕವಿಗೋಷ್ಠಿಯನ್ನು ವೇದಿಕೆಯ ಬಂಟ್ವಾಳ, ಪುತ್ತೂರು, ಸುಳ್ಯ ತಾಲೂಕು ಘಟಕಗಳು ಮತ್ತು ಮಹಿಳಾ ವಿಭಾಗಗಳು ಸಂಯುಕ್ತವಾಗಿ ಸಮರ್ಥ, ಪರಿಣಾಮಕಾರಿಯಾಗಿ ನಿರ್ವಹಿಸಿ ಮೆಚ್ಚುಗೆಗೆ ಪಾತ್ರವಾಗಿದೆ.
     ಸುಮಾರು 55 ಮಂದಿ ಕವಿಗಳು ಭಾಗವಹಿಸಿದ್ದ ಕವಿಗೋಷ್ಠಿಯಲ್ಲಿ ಸಿರಿಗನ್ನಡ ವೇದಿಕೆಯ ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷೆ ಭಾರತಿ ಕೊಲ್ಲರಮಜಲು ಅಧ್ಯಕ್ಷತೆ ವಹಿಸಿದ್ದರು. ಅವರು ತಮ್ಮ ಅಧ್ಯಕ್ಷೀಯ ಸಂದೇಶದಲ್ಲಿ ಮಾತನಾಡಿ, ಬರಹದಿಂದ ಬರಹಕ್ಕೆ ಮೇಲಕ್ಕೇರಲು ವಾಟ್ಸ್ ಆಫ್ ಕವಿಗೋಷ್ಠಿಗಳು ಯುವ ಕವಿಗಳಿಗೆ ಕೈದೀವಿಗೆಗಳಾಗಿವೆ. ರಚನಾತ್ಮಕ ಅಕ್ಷರಗಳ ಮೂಲಕ ಬೆಳಕಿನ ಹಬ್ಬವಾದ ದೀಪಾವಳಿಯ ಸದುದ್ದೇಶದ ಸಂದೇಶವನ್ನು ನೂರಾರು ಮನಸ್ಸುಗಳಿಗೆ ತಲಪಿಸುವಲ್ಲಿ ಈ ಗೋಷ್ಠಿ ಯಶಸ್ವಿಯಾಗಿದೆ ಎಂದು ತಿಳಿಸಿದರು.
       ಸಿರಿಗನ್ನಡ ವೇದಿಕೆಯ ಮಹಿಳಾ ವಿಭಾಗದ ಸುಳ್ಯ ತಾಲೂಕು ಘಟಕದ ಅಧ್ಯಕ್ಷೆ ಅಶ್ವಿನಿ ಕೋಡಿಬೈಲು ಅವರು ಅತ್ಯಪೂರ್ವವಾಗಿ ಗೋಷ್ಠಿಯನ್ನು ನಿರ್ವಹಿಸಿದರು. ಅಪರಾಹ್ನ 3.ರಿಂದ ಆರಂಭಗೊಂಡ ಕವಿಗೋಷ್ಠಿ ರಾತ್ರಿ 8ರ ವೇಳೆಗೆ ಸಮಾರೋಪಗೊಂಡಿತು. ಮಂಗಳೂರು, ಬಂಟ್ವಾಳ, ಪುತ್ತೂರು, ಸುಳ್ಯ, ಕಡಬ, ಬೆಳ್ತಂಗಡಿ, ಹೊರ ಜಿಲ್ಲೆ ಹಾಗೂ ಹೊರ ರಾಜ್ಯದ ಕವಿಗಳಿಗೆ ಪ್ರತ್ಯೇಕ ಸಮಯಗಳನ್ನು ನಿಗದಿಪಡಿಸಿ ಅಚ್ಚುಕಟ್ಟಾಗಿ ಸಂಘಟಿಸಲಾಗಿದ್ದ ಗೋಷ್ಠಿ ಅಧ್ಯಕ್ಷರ ಭಾಷಣ ಹಾಗೂ ಪರಮೇಶ್ವರಿ ಪ್ರಸಾದ್ ಸುಳ್ಯ ಅವರ ವಂದನಾರ್ಪಣೆಯೊಂದಿಗೆ ಸಂಪನ್ನಗೊಂಡಿತು.
    ಕವಿಗೋಷ್ಠಿಯಲ್ಲಿ ಸತ್ಯವತಿ ಭಟ್ ಕೊಳಚಪ್ಪು, ಡಾ.ಸುರೇಶ ನೆಗಳಗುಳಿ, ಎಸ್.ಕೆ.ಗೋಪಾಲಕೃಷ್ಣ ಭಟ್, ಎನ್.ಸುಬ್ರಾಯ ಭಟ್, ಚಂದನಾ ಕೆ.ಎಸ್., ವಿಶ್ವನಾಥ ಕುಲಾಲ್ ಮಿತ್ತೂರು, ಗೀತಾ ರಾವ್, ಅಶೋಕ ಎನ್.ಕಡೇಶಿವಾಲಯ, ಕೃಷ್ಣ ಪ್ರಸಾದ್ ಕೆ., ಗಣಪತಿ ಭಟ್ ಮಧುರಕಾನನ, ಪಾರ್ವತೀ ಶಾಸ್ತ್ರಿ, ಉಮಾಶಂಕರಿ ಮರಿಕೆ, ಸುಮಂಗಲಾ ಕೃಷ್ಣ, ಸೀತಾಲಕ್ಷ್ಮೀ ವರ್ಮ ವಿಟ್ಲ, ನರಸಿಂಹ ಶಗ್ರಿತ್ತಾಯ, ಉಷಾ ಮುರಳೀಧರ್, ಮಲ್ಲಿಕಾ ಗೋಪಾಲ್, ಅಶ್ವಿನಿ ಕೋಡಿಬೈಲು, ಹಮೀದಾ ಬೇಗಂ ದೇಸಾಯಿ ಬೆಳಗಾವಿ, ಪ್ರೊ.ಪಿ.ಎನ್.ಮೂಡಿತ್ತಾಯ, ಲತಾ ಆಚಾರ್ಯ ಬನಾರಿ, ದೇವರಾಜ ಆಚಾರ್ಯ ಕೆ.ಎಸ್., ಚಿತ್ರಕಲಾ ದೇವರಾಜ್ ಕುಂಬಳೆ, ಎಸ್.ವಿ.ಮಹೇಶ, ಅನ್ನಪೂರ್ಣ ಬೆಜಪ್ಪೆ, ಸುಶ್ಮಿತ ಬಿ.ಪಿ, ವಿಜಯ ಶಶಿಕಾಂತ, ಸುಮಾ ತನಯ, ಲಕ್ಷ್ಮೀನಾರಾಯಣ ಭಟ್, ವೆಂಕಟ ಭಟ್ ಎಡನೀರು, ಪ್ರಮೀಳಾ ಟಿ.ಕೆ., ಪರಿಣಿತ ರವಿ ಎಡನಾಡು ಎರ್ನಾಕುಳಂ, ನಿರ್ಮಲಾ ಶೇಸಪ್ಪ ಖಂಡಿಗೆ, ನಾರಾಯಣ ಭಟ್ ಹಿಳ್ಳೆಮನೆ, ಸುಭಾಶ್ ಪೆರ್ಲ, ಬಾಲಕೃಷ್ಣ ಎಸ್.ಬೇಕೂರು, ಪುರುಷೋತ್ತಮ ಭಟ್ ಕೆ., ಸರೋಜ, ಕೃಷ್ಣಪ್ರಕಾಶ ಬೊಳುಂಬು, ಸುಶ್ಮಿತ, ರಿತೇಶ್ ಕಿರಣ್ ಕಾಟುಕುಕ್ಕೆ, ಪವನ್ ಮೈರ್ಪಾಡಿ, ಜಯಶ್ರೀ ಜಮಾದಾರ, ಶೈಲಜಾ ಪುದುಕೋಳಿ, ಅನುರಾದಾ ಶಿವಪ್ರಕಾಶ್, ಗೋಪಾಲಕೃಷ್ಣ ಭಟ್, ಪರಮೇಶ್ವರಿ ಪ್ರಸಾದ್, ಸಂತು ಮುದ್ರಾಡಿ, ಪ್ರೇಮಾ ಉದಯಕುಮಾರ್ ಮೊದಲಾದವರು ಸ್ವರಚಿತ ದೀಪಾವಳಿ ಕವನಗಳನ್ನು ಜಾಲತಾಣದಲ್ಲಿ ಪ್ರಕಟಿಸಿದರು.
     ಸಾಧನಾ ಶಿಖರ:   
    ವೇದಿಕೆಯು ಈಗಾಗಲೇ ಸ್ವಾತಂತ್ರ್ಯ ದಿನಾಚರಣೆ, ಗಣೇಶ ಚತುರ್ಥಿ, ಮಹಾತ್ಮಾ ಗಾಂಧಿ ಸ್ವಚ್ಚ ಭಾರತ-ದಸರಾ ನಾಡಹಬ್ಬ ಕವಿಗೋಷ್ಠಿ, ರಾಜ್ಯೋತ್ಸವ ಮತ್ತು ಸಂಸ್ಕøತಿ ಹಬ್ಬ, ತಾಳಮದ್ದಳೆ ಕೂಟ, ಸಾಹಿತ್ಯ ರಚನಾ ಕಮ್ಮಟ ಮೊದಲಾದ ಕಾರ್ಯಕ್ರಮಗಳ ಮೂಲಕ ಈಗಾಗಲೇ ವೇದಿಕೆಯು ಜನಮನ್ನಣೆ ಪಡೆದಿದೆ. ಆಧುನಿಕ ಮಾಧ್ಯಮವನ್ನು ಬಳಸಿ ಸಾಹಿತ್ಯ ಚಟುವಟಿಕೆಗಳಿಗೆ ಸಮರ್ಥವಾಗಿ ಬಳಸುವ ಸಿರಿಗನ್ನಡ ವೇದಿಕೆಯ ಇಂತಹ ಚಟುವಟಿಕೆ ನೂರಾರು ಮಂದಿಗಳನ್ನು ಒಂದೆಡೆ ಪರಸ್ಪರ ಬೆಸೆಯುವ, ಆಶಯಗಳನ್ನು ವಿನಿಮಯ ಮಾಡಿಕೊಳ್ಳುವ ನಿಟ್ಟಿನಲ್ಲಿ ಯಶಸ್ವಿಯಾಗಿದೆ.
      ಸಾರಥಿಗಳು ಯಾರೆಂದು ಬಲ್ಲಿರೇ!
   ಸಿರಿಗನ್ನಡ ವೇದಿಕೆಯ ದಕ್ಷಿಣ ಕನ್ನಡ ಜಿಲ್ಲಾಧ್ಯಕ್ಷ ಮಧುರಕಾನನ ಗಣಪತಿ ಭಟ್, ಸಹ ಕಾರ್ಯದರ್ಶಿ ಶಿವರಾಮ ಭಟ್ ಅಂಗ್ರಜೆ, ಕೋಶಾಧಿಕಾರಿ ಈಶ್ವರ ಭಟ್ ಮಜಲುಗುಡ್ಡೆ, ಮಂಗಳೂರು ತಾಲೂಕು ಘಟಕಾಧ್ಯಕ್ಷ ಎಸ್ಕೆ ಗೋಪಾಲಕೃಷ್ಣ ಭಟ್ ಶೇಡಿಗುಮ್ಮೆ, ಉಪಾಧ್ಯಕ್ಷ ಸುದರ್ಶನ ಬಾಯಾರು, ಕಾರ್ಯದರ್ಶಿ ಕೆಕ್ಕಾರು ಆನಂದ ಭಟ್, ಜೊತೆ ಕಾರ್ಯದರ್ಶಿ ಗಣೇಶ ಆದ್ಯಪ್ಪಾಡಿ, ಬಂಟ್ವಾಳ ತಾಲೂಕು ಘಟಕಾಧ್ಯಕ್ಷ ಅಶೋಕ ಎನ್.ಕಡೇಶಿವಾಲಯ, ಕಾರ್ಯದರ್ಶಿ ವಿಶ್ವನಾಥ ಕುಲಾಲ ಬಂಟ್ವಾಳ,
ಜೊತೆ ಕಾರ್ಯದರ್ಶಿ ವಿಶ್ವನಾಥ ನೇರಳೆಕಟ್ಟೆ, ಸದಸ್ಯ ಯತೀಶ ಕಮ್ಮಾಜೆ, ಪುತ್ತೂರು ತಾಲೂಕು ಘಟಕಾಧ್ಯಕ್ಷ ಉದಯರವಿ ಕೊಂಬ್ರಾಜೆ, ಕಾರ್ಯದರ್ಶಿ ಅನೀಶ ಪಳ್ಳ, ಸುಳ್ಯ ಘಟಕದ ಉದಯಭಾಸ್ಕರ ಸುಳ್ಯ, ಕಾರ್ಯದರ್ಶಿ ಗೋಪಾಲಕೃಷ್ಣ ಭಟ್ ಮನವಳಿಕೆ, ಜೊತೆ ಕಾರ್ಯದರ್ಶಿ ಶ್ರೀವತ್ಸ ಭಟ್, ಸಿರಿಗನ್ನಡ ವೇದಿಕೆ ದ.ಕ. ಮಹಿಳಾ ವಿಭಾಗ ಜಿಲ್ಲಾಧ್ಯಕ್ಷೆ ವಸಂತ ಲಕ್ಷ್ಮಿ ಪುತ್ತೂರು, ಉಪಾಧ್ಯಕ್ಷೆ ಸೌಖ್ಯ ಮೋಹನ್, ಕಾರ್ಯದರ್ಶಿ ವಿಜಯಾಸರಸ್ವತಿ ಕಜೆ, ಪುತ್ತೂರು ತಾಲೂಕು ಘಟಕದ ಅಧ್ಯಕ್ಷೆ ಮಲ್ಲಿಕಾ.ಜೆ.ರೈ, ಉಪಾಧ್ಯಕ್ಷೆ, ಭಾರತಿ ರಾಜೇಂದ್ರ ಕೊಲ್ಲರಮಜಲು, ಕಾರ್ಯದರ್ಶಿ ಹರಿಣಾಕ್ಷಿ ಶೆಟ್ಟಿ, ಜೊತೆ ಕಾರ್ಯದರ್ಶಿ ಅನುಷಾ ಚೇಕೋಡು, ಸುಳ್ಯ ತಾಲೂಕು ಘಟಕದ ಅಧ್ಯಕ್ಷೆ ಅಶ್ವಿನಿ ಕೋಡಿಬೈಲ್, ಉಪಾಧ್ಯಕ್ಷೆ ಪರಮೇಶ್ವರಿ ಪ್ರಸಾದ್, ಕಾರ್ಯದರ್ಶಿ ಪ್ರೇಮಾ ಉದಯಕುಮಾರ್, ಜೊತೆ ಕಾರ್ಯದರ್ಶಿ ಪ್ರಮೀಳಾ ರಾಜ್, ಬಂಟ್ವಾಳ ತಾಲೂಕು ಘಟಕದ ಅಧ್ಯಕ್ಷೆ ಅಕ್ಷತಾ ಸಾಲ್ಯಾನ್, ಕಾರ್ಯದರ್ಶಿ ಶ್ರೀದೇವಿ ಕಲ್ಲಡ್ಕ, ಮಂಗಳೂರು ತಾಲೂಕು ಘಟಕದ ಅಧ್ಯಕ್ಷೆ ಶೈಲಜಾ ಪುದುಕೋಳಿ, ಕಾರ್ಯದರ್ಶಿ ದೇವಿಕಾ, ಸದಸ್ಯೆ ಸಂದ್ಯಾಗೀತಾ ಮೊದಲಾದವರು ನೇತೃತ್ವ ವಹಿಸಿದ್ದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries